* * * * * * HASSAN DISTRICT POLICE

Tuesday, January 8, 2019

HASSAN DISTRICT PRESS NOTE 08-01-2019



                              ಪತ್ರಿಕಾ ಪ್ರಕಟಣೆ               ದಿ: 08-01-2019

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ, 1,476/- ಬೆಲೆಯ ಮದ್ಯ ವಶ:
    ದಿನಾಂಕ: 07-01-2019 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಶ್ರೀ ಅರುಣ್ ಕುಮಾರ್, ಪಿಎಸ್ಐ ಬಾಣಾವರ ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ಹಿರಿಯೂರು ಗ್ರಾಮದ ಹತ್ತಿರ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಬೆಟ್ಟದಪುರ ಗ್ರಾಮದ ವಾಸಿ ಶ್ರೀಮತಿ ಕಮಲಬಾಯಿ, ರವರ ಬಾಬ್ತು  ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಕಮಲಬಾಯಿ ಕೋಂ ಭೀಮಾನಾಯ್ಕ್, 38 ವರ್ಷ, ಬೆಟ್ಟದಪುರ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು 1,476/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಮನೆ ಬೀಗ ಮುರಿದು 5,500/- ನಗದು ಸೇರಿದಂತೆ ಒಟ್ಟು 2,30,000/-ಬೆಲೆಯ 70 ಗ್ರಾಂ ತೂಕದ ಚಿನ್ನ ಒಡವೆಗಳು ಹಾಗೂ 450 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳ ಕಳವು:
     ದಿನಾಂಕ: 05-01-2019 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಹಾಸನದ ಬೊಮ್ಮನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ಕುಮಾರಸ್ವಾಮಿ. ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಆದಿಚುಂಚನಗಿರಿ ದೇವಸ್ಥಾನಕ್ಕೆ ಹೋಗಿ, ಪೂಜೆ ಮುಗಿಸಿಕೊಂಡು ತಮ್ಮ ಮನೆ ಮಾರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ದಿನಾಂಕ: 06-01-2019 ರಂದು ಪಕ್ಕದ ಮನೆ ವಾಸಿ ಶ್ರೀ ಗಣೇಶ್, ಫೋನ್ ಮಾಡಿ ಮನೆಯಲ್ಲಿ ಕಳ್ಳತನವಾಗಿರುವುದಾಗಿ ತಿಳಿಸಿದ ಮೇರೆಗೆ ಮನೆ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ  5,500/- ನಗದು ಸೇರಿ 2,30,000/- ಬೆಲೆಯ 70 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 450 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಶ್ರೀನಿವಾಸ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು
     ದಿನಾಂಕ: 28-12-2018 ರಂದು ರಾತ್ರಿ ರೈಲ್ವೆ ಸ್ಟೇಷನ್ ರಸ್ತೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರದ ವಾಸಿ ಶ್ರೀ ವರದರಾಜು, ರವರ ಬಾಬ್ತು ಕೆಎ-13, ಇಎಂ-3170 ರ ಹಿರೋ ಹೊಂಡಾ ಬೈಕ್ ನ್ನು ಮನೆಯ ಮುಂಭಾಗ ನಿಲ್ಲಿಸಿದ್ದು, ದಿನಾಂಕ: 29-12-2018 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಯಾರೋ ಕಳ್ಳರು ಬೈಕನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ವರದರಾಜು, ರವರು ದಿನಾಂಕ: 07-01-2018 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಸು ಕೊಂಬಿನಿಂದ ತಿವಿದು ವಿಚಾರ ಕೇಳಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ:
    ದಿನಾಂಕ: 06-01-2019 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಅಲ್ಲಾಪಟ್ಟಣ ಗ್ರಾಮದ ವಾಸಿ ಶ್ರೀ ರಾಮೇಗೌಡ, ರವರ ಬಾಬ್ತು ಹಸುವನ್ನು ಜಮೀನಿನಲ್ಲಿ ಕಟ್ಟಿಹಾಕಿದ್ದು, ಅದೇ ಗ್ರಾಮದ ವಾಸಿ ಶ್ರೀ ಚನ್ನೇಗೌಡ, ರವರ ಹಸುವನ್ನು ಪಿರ್ಯಾದಿಯಲ್ಲಿ ಗದ್ದೆಯಲ್ಲಿ ಕಟ್ಟಿಹಾಕಿದ್ದು, ಶ್ರೀ ಚನ್ನೇಗೌಡ, ರವರ ಹಸು ಪಿರ್ಯಾದಿಯವರ ಹಸುವಿಗೆ ಕೊಂಬಿನಿಂದ ತಿವಿದು ರಕ್ತಗಾಯವಾಗಿದ್ದು, ಪಿರ್ಯಾದಿಯವರು ಶ್ರೀ ಚನ್ನೆಗೌಡ, ರವರನ್ನು ಕೇಳಿದ್ದಕ್ಕೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಕುಡುಗೋಲಿನಿಂದ ಪಿರ್ಯಾದಿ ತುಟಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ
     ದಿನಾಂಕ: 06-01-2019 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕರಡಿಹಳ್ಳಿ ಗ್ರಾಮದ ವಾಸಿ ಶ್ರೀ ಶ್ರೀನಿವಾಸ, ರವರ ಮಗಳು ಕು|| ಮಮತಾ, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಮಾಡಿಕೊಡಬೇಕೆಂದು ಕು|| ಮಮತಾಳ ತಂದೆ ಶ್ರೀನಿವಾಸ, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಮಮತಾ ಬಿನ್ ಶ್ರೀನಿವಾಸ, 22 ವರ್ಷ, 4'5 ಅಡಿ ಎತ್ತರ, ಗೋಧಿಮೈಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಕನ್ನಡ ಭಾಷೆ ಮಾತನಾಡುತ್ತಾಳೆ. ಹೋಗುವಾಗ ಗುಲಾಬಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-235633 ಕ್ಕೆ ಸಂಪರ್ಕಿಸುವುದು.

No comments: