* * * * * * HASSAN DISTRICT POLICE

Friday, September 14, 2018

PRESS NOTE 14-09-2018


                                     
 ಪತ್ರಿಕಾ ಪ್ರಕಟಣೆ               ದಿನಾಂಕ: 14-09-2018.

ಹೆಂಗಸು ಕಾಣೆ:

     ದಿನಾಂಕ: 02-09-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಕೆಇಬಿ ರಸ್ತೆ ಪೇಟೆ ಬೀದಿ ವಾಸಿ ಶ್ರೀ ಧರ್ಮ ರವರ ಪತ್ನಿ ಶ್ರೀಮತಿ ಆಶಾ  ರವರು ಮನೆಯಿಂದ ಹೊರಗೆ ಹೋದವಳು, ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಆಶಾಳ ಪತಿ ಶ್ರೀ ಧರ್ಮ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀಮತಿ ಆಶಾ ಕೋಂ ಧರ್ಮ, 24 ವರ್ಷ, 4'5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ ಕೆಂಪು ಬಣ್ಣದ ಕೆಂಪು ಬಣ್ಣದ ಚೂಡಿಧಾರ ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 081745-220249 ಕ್ಕೆ ಸಂಪರ್ಕಿಸುವುದು.

No comments: