* * * * * * HASSAN DISTRICT POLICE

Monday, August 13, 2018

PRESS NOTE : 10-08-2018


                                                           ಪ್ರತಿಕಾ ಪ್ರಕಟಣೆ   ದಿನಾಂಕ: 10-08-2018

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ ಟ್ರ್ಯಾಕ್ಟರ್ ವಶ :   ದಿನಾಂಕ: 09-08-2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಪಿಐ ಶ್ರೀ ದೊಡ್ಡೇಗೌಡ, ಡಿಸಿಐಬಿ ಘಟಕ ಹಾಸನ ರವರು ಅರಸೀಕೆರೆ ಹಾಸನ ರಸೆಯಲ್ಲಿ ಕೋಡಿಮಠದ ಹತ್ತಿರ ಹಾಸನಕ್ಕೆ ಹೋಗುತ್ತಿದ್ದಾಗ ದೊಡ್ಡೇನಹಳ್ಳಿ ಗೇಟ್ ಹತ್ತಿರ ರಸ್ತೆಯಲ್ಲಿ ಅರಸೀಕೆರೆ ಕಡೆಗೆ ಕೆಎ-46-93-94 ರ ನಂಬರಿನ ಒಂದು ಟ್ರ್ಯಾಕ್ಟರ್ ಮತ್ತು ಟ್ರೈಲರ್ ಬರುತ್ತಿದ್ದು, ಅನುಮಾನ ಬಂದು ಪರಿಶೀಲಿಸಲಾಗಿ ಟ್ರೈಲರ್ನಲ್ಲಿ ಮರಳು ತುಂಬಿರುವುದು ಕಂಡುಬಂದಿದ್ದು,  ಮರಳನ್ನು ಸಾಗಾಟ ಮಾಡುಲು ಸರ್ಕಾರದಿಂದ ಯಾವುದಾದರೂ ಪರವಾನಗಿ ಪಡೆದಕೊಳ್ಳಲಾಗಿದೆಯೇ ಎಂದು ವಿಚಾರಿಸಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದವನನ್ನು ಹೆಸರು ವಿಳಾಸ ಕೇಳಲಾಗಿ ಗುರುರಾಜ್ ಬಿನ್ ಪುಟ್ಟಣ್ಣ, 31 ವರ್ಷ, ಗುತ್ತಿನಕೆರೆ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವನನ್ನು ವಶಕ್ಕೆ ಪಡೆದುಕೊಂಡು ಸರ್ಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸಿ ಪರವಾನಗಿ ಪಡೆಯದೆ ಸರ್ಕಾರಿ ಸ್ವತ್ತಾದ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಮತ್ತು ಟ್ರೈಲರ್ನ್ನು ಮರಳು ಸಮೇತ ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಟಾಟಾ ಮ್ಯಾಜಿಕ್ ವಾಹನ ಡಿಕ್ಕಿ ಒಂದೂವರೆ ವರ್ಷದ ಹೆಣ್ಣು ಮಗು ಸಾವು :    ಬೇಲೂರು ತಾಲ್ಲೂಕು,ಯಕಶೆಟ್ಟಿಹಳ್ಳಿ ಗ್ರಾಮದ  ರಮೇಶ ರವರ ಮಕ್ಕಳಾದ ಚಂದನ್ ಮತ್ತು ಚಿರಂತ್ನನ್ನು ಮಲ್ಲೆ ಗ್ರಾಮದ ಕಾಳಿಕಾಂಭ ವಿದ್ಯಾ ಸಂಸ್ಥೆಗೆ ಎಲ್ಕೆಜಿ ಶಾಲೆಗೆ ಕಳುಹಿಸುತ್ತಿದ್ದು ಸದರಿ ಶಾಲೆಯಿಂದ ಪ್ರತಿದಿನ ವ್ಯಾನ್ ಗ್ರಾಮಕ್ಕೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದು ದಿನಾಂಕ: 10-08-2018 ರಂದು ಬೆಳಿಗ್ಗೆ 08-45 ಗಂಟೆ ಸಮಯದಲ್ಲಿ ಕೆಎ-13-ಬಿ-3764 ರ ಟಾಟಾ ಮ್ಯಾಜಿಕ್ ವಾಹನವು  ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದು, ಚಿರಂತ್ನನ್ನು ತಾಯಿ ನಂದಿನಿ ರವರು ವ್ಯಾನ್ಗೆ ಹತ್ತಿಸುವಾಗ ಒಂದೂವರೆ ವರ್ಷದ ಮಗಳು ಚರಣ್ಯ ತಾಯಿಯ ಹಿಂದೆಯೇ ಬರುತ್ತಿದ್ದು, ವ್ಯಾನಿನ ಚಾಲಕ ತನ್ನ ವಾಹನವನ್ನು  ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಗುದ್ದಿಸಿದಾಗ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಬೇಲೂರು ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಚರಣ್ಯ ಬಿನ್ ರಮೇಶ, 1 ಳಿ ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಾಯಿ ಶ್ರೀಮತಿ ನಂದಿನಿ ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: