* * * * * * HASSAN DISTRICT POLICE

Friday, August 10, 2018

PRESS NOTE : 09-08-2018


ಪತ್ರಿಕಾ ಪ್ರಕಟಣೆ                      ದಿನಾಂಕ: 09-08-2018

ಮನುಷ್ಯ ಕಾಣೆ :  ದಿನಾಂಕ: 03-08-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಅಣ್ಣೇಚಾಕನಹಳ್ಳಿ ಗ್ರಾಮದ ಉಮೇಶ ರವರ ತಾತಾ ಸಣ್ಣತಮ್ಮೇಗೌಡ ರವರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯಿಂದ ಎಲ್ಲಿಯೋ ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸಣ್ಣತಮ್ಮೇಗೌಡ ರವರ ಮೊಮ್ಮಗ ಶ್ರೀ ಉಮೇಶ ರವರು  ದಿನಾಂಕ: 08-08-2018 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಸಣ್ಣತಮ್ಮೇಗೌಡ, 85 ವರ್ಷ, ಎತ್ತರ: 173 ಸೆಂ.ಮೀ ಕನ್ನಡ ಭಾಷೆ ಮಾತನಾಡುತ್ತಾರೆ. ಧರಿಸಿದ್ದ ಉಡುಪು: ಬಿಳಿ ಬಣ್ಣದ ತುಂಬುತೋಳಿನ ಶಟರ್್ ಮತ್ತು ಖಾಕಿ ನಿಕ್ಕರ್ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಠಾಣೆ ಫೋನ್ ನಂ. 08175-260100 ಕ್ಕೆ ಸಂಪರ್ಕಿಸುವುದು.



No comments: