* * * * * * HASSAN DISTRICT POLICE

Thursday, July 26, 2018

PRESS NOTE : 26-07-2018


ಪತ್ರಿಕಾ ಪ್ರಕಟಣೆ                                                    ದಿನಾಂಕ: 26-07-2018
ಹುಡುಗ ಕಾಣೆ : ಹಾಸನ ತಾಲ್ಲೂಕು, ಕಸಬಾ ಹೋಬಳಿ, ಎ. ಕಾಟೀಹಳ್ಳಿ ಗ್ರಾಮದ ಕರಿಗೌಡ ರವರ ಮಗ  ಧರ್ಮ ಈಗ್ಗೆ ಸುಮಾರು ದಿನಗಳಿಂದ ಮಾನಸಿಕ ಅಶ್ವಸ್ಥನಾದಂತೆ ಇದ್ದು, ದಿನಾಂಕ: 22-07-2018 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ತಾಯಿ ಕಮಲಮ್ಮ ರವರು ಆಟೋದಲ್ಲಿ ಆಸ್ಪತ್ರೆಗೆ ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಕಂದಲಿ ಹತ್ತಿರ ಆಟೋ ನಿಲ್ಲಿಸಿದ್ದು, ಆಟೋದಿಂದ ಇಳಿದು ಹೋಗಿದ್ದು, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಧರ್ಮ ರವರ ಅಣ್ಣ ಶ್ರೀ ಪರಮೇಶ ರವರು ದಿನಾಂಕ: 25-07-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಧರ್ಮ ಬಿನ್ ಲೇಟ್ ಕರಿಗೌಡ, 30 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಕಪ್ಪು ಕಲ್ಲರ್ ಟೀಶರ್ಟ್, ಅದರ ಮೇಲೆ ವೈಟ್ ಚೆಕ್ಸ್ ಶಟರ್್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂಬರ್ 08172-268967 ಕ್ಕೆ ಸಂಪರ್ಕಿಸುವುದು.

No comments: