* * * * * * HASSAN DISTRICT POLICE

Thursday, July 19, 2018

PRESS NOTE : 19-07-2018


ಪತ್ರಿಕಾ ಪ್ರಕಟಣೆ                      ದಿನಾಂಕ: 19-07-2018.

ಜಿಲ್ಲೆಯ ಎರಡು ಕಡೆ ಮಟ್ಕಾ ಜೂಜಾಡುತ್ತಿದ್ದ 19 ಜನರ ಬಂಧನ, ಬಂಧಿತರಿಂದ 36,135/- ನಗದು ವಶ :
ಪ್ರಕರಣ: 01:   ದಿನಾಂಕ: 18-07-2018 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣ, ಕಡ್ಲೆಬೀದಿ, ದಾಸ್ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಶ್ರೀ  ಯೋಗನಂಜಪ್ಪ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ 1 ರೂಗೆ 70 ರೂಪಾಯಿ ಹಣ ಕೊಡುವುದಾಗಿ ಅಕ್ರಮವಾಗಿ  ಹಣ ವಸೂಲಿ ಮಾಡುತ್ತಾ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಹಮ್ಮದ್ ಬಿನ್ ಲೇಟ್ ಅನ್ವರ್, 32 ವರ್ಷ, ಮಾರುತಿ ನಗರ ಅರಸೀಕೆರೆ ಪಟ್ಟಣ 2) ಸಲಾಂ ಬಿನ್ ಲೇಟ್ ಶೇಕ್ ಹುಸೇನ್, 45 ವರ್ಷ, ಇಂದಿರಾನಗರ, ಅರಸೀಕೆರೆ ಪಟ್ಟಣ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 615/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಪ್ರಕರಣ: 02 :  ದಿನಾಂಕ: 18-07-2018 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಹಾಸನ ನಗರದ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯ ರಿಲೆಯನ್ಸ್ ಪೆಟ್ರೋಲ್  ಬಂಕ್ ಮುಂಭಾಗದಲ್ಲಿ  ಹಾಸನ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಕ್ಲಬ್ನಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು  ಸಿಪಿಐ ಶ್ರೀ ಸತ್ಯನಾರಾಯಣ ಹಾಸನ ನಗರ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಭಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಂದರ್-ಬಾಹರ್  ಇಸ್ಪೀಟ್ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಯಶ್ವಂತ್ ಬಿನ್ ಶಿವಕುಮಾರ್, 27 ವರ್ಷ, ಹುಣಸಿನಕೆರೆ ಲೇ ಔಟ್ ಹಾಸನ 2) ಕುಮಾರ ಬಿನ್ ಮಲ್ಲಶೆಟ್ಟಿ, 50 ವರ್ಷ, ವಲ್ಲಭಾಯಿ ರಸ್ತೆ, 1 ನೇ ಕ್ರಾಸ್, ಹುಣಸಿನಕೆರೆ, ಹಾಸನ ನಗರ 3) ನಟರಾಜು ಬಿನ್ ಸಣ್ಣೇಗೌಡ, 53 ವರ್ಷ, ಅನುಗವಳ್ಳಿ, ದುದ್ದ ಹೋಬಳಿ, ಹಾಸನ ತಾಲ್ಲೂಕು  4) ರಘು ಬಿನ್ ಶಿವರಾಜು, 34 ವರ್ಷ, ರಂಗೋಲಿಹಳ್ಳ, ಸಾಲಗಾಮೆ ರಸ್ತೆ, ಹಾಸನ 5) ಲೋಕೇಶ ಬಿನ್ ಚಂದ್ರೇಗೌಡ, 33 ವರ್ಷ, ವಿದ್ಯುತ್ನಗರ, ಸಾಲಗಾಮೆ ರಸ್ತೆ, ಹಾಸನ 6) ನಸ್ರವುಲ್ಲಾ ಷರೀಪ್ ಬಿನ್  ಮಹಮ್ಮದ್ ಷರೀಪ್, 48 ವರ್ಷ. ಸಮಾಜ ರಸ್ತೆ, ಹೆಚ್.ಬಿ.ಎಸ್. ಹಾಲ್ ಹತ್ತಿರ, ಹಾಸನ 7) ಪವರ್ೀಜ್ ಬಿನ್ ಮಹಮದ್ ಅತಾವುಲ್ಲಾ, 52 ವರ್ಷ, ಚಿಪ್ಪಿನಕಟ್ಟೆ, ಮೈನ್ ರೋಡ್, ಹಾಸನ ನಗರ 8) ಯೋಗೇಶ ಬಿನ್ ಲೇಟ್ ವೆಂಕಟೇಶ್, 37 ವರ್ಷ, ರಂಗೋಲಿಹಳ್ಳ, ಸಾಲಗಾಮೆ ರಸ್ತೆ, ಹಾಸನ 9) ರಮೇಶ ಬಿನ್ ರಾಮಶೆಟ್ಟಿ, 44 ವರ್ಷ, ಹುಣಸಿನಕೆರೆ ಲೇ ಔಟ್, ಹಾಸನ ನಗರ 10) ನಾಗೇಂದ್ರ ಬಿನ್ ಶ್ರೀನಿವಾಸ್, 38 ವರ್ಷ, ಸಂಕ್ಲಾಪುರ ಗ್ರಾಮ, ಕಸಬಾ ಹೋಬಳಿ,  ಹಾಸನ 11) ಲಕ್ಷ್ಮಿಕಾಂತ ಬಿನ್ ಸಿದ್ದೇಗೌಡ, 40 ವರ್ಷ, ರಂಗೋಲಿಹಳ್ಳ, ಸಾಲಗಾಮೆ ರಸ್ತೆ, ಹಾಸನ 12) ಕೃಷ್ಣೇಗೌಡ ಬಿನ್ ಕೆಂಪೇಗೌಡ, 39 ವರ್ಷ, ಹಿರೆಕಡಲೂರು, ದುದ್ದ ಹೋಬಳಿ, ಹಾಸನ ತಾಲ್ಲೂಕು 13) ಕುಮಾರ ಬಿನ್ ನರಸಿಂಹೇಗೌಡ, 43 ವರ್ಷ, ತವರದೇವರಕೊಪ್ಪಲು, ಹಾಸನ ತಾಲ್ಲೂಕು 14) ತಮ್ಮಯ್ಯ ಬಿನ್ ರಾಮಣ್ಣ, 44 ವರ್ಷ, ಹುಣಸಿನಕೆರೆ ಸ್ಲಂಬೋರ್ಡ್, ಹಾಸನ 15) ದಿನೇಶ ಬಿನ್ ಮೊಗಪ್ಪ, 48 ವರ್ಷ, ವಿಶ್ವೇಶ್ವರಯ್ಯ ಬಡಾವಣೆ,  ಹಾಸನ ನಗರ 16) ಸತೀಶ ಬಿನ್ ಹನುಮಂತೇಗೌಡ, ಕಳ್ಳಿಕೊಪ್ಪಲು, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು 17) ಗೋಪಾಲ ಬಿನ್ ರಂಗೇಗೌಡ, 40 ವರ್ಷ, ಗುಡ್ಡೇನಹಳ್ಳಿಕೊಪ್ಪಲು ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 35,520/- ನಗದನ್ನು ಅಮಾನತ್ತುಪಡಿಸಿಕೊಂಡು  ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.  

No comments: