ಪತ್ರಿಕಾ
ಪ್ರಕಟಣೆ ದಿನಾಂಕ:
18-07-2018.
ಗಂಡಸು ಕಾಣೆ:
ಬೇಲೂರು ತಾಲ್ಲೂಕು, ಹಳೇಬೀಡು
ಹೋಬಳಿ, ದೊಡ್ಡಕೋಡಿಹಳ್ಳಿ ಗ್ರಾಮದ ಶ್ರೀನಾಥ ರವರು
ಈಗ್ಗೆ 01 ವರ್ಷದ ಹಿಂದೆ ಬೆಳಗಾಂಗೆ ಬೇಕರಿ ಕೆಲಸಕ್ಕೆ ಹೋಗಿ ಬರುತ್ತೇನೆಂದು
ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಶ್ರೀನಾಥ ರವರ ಪತ್ನಿ ಶ್ರೀಮತಿ ಶ್ವೇತಾ ರವರು ದಿನಾಂಕ: 17-07-2018 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀನಾಥ ಬಿನ್ ಹನುಮಪ್ಪ, 32 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ
ಮಾತನಾಡುತ್ತಾರೆ. ಸಾಧಾರಣ ಮೈಕಟ್ಟು, ಮನೆಯಿಂದ
ಹೋಗುವಾಗ ಪಿಂಕ್ ಕಲರ್ ಟೀ ಶರ್ಟ್, ಜೀನ್ಸ್ ಪ್ಯಾಂಟ್
ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ
ಸುಳಿವು ಸಿಕ್ಕಲ್ಲಿ ಹಳೇಬೀಡು ಠಾಣೆ ಫೋನ್ ನಂ. 08177-273201 ಕ್ಕೆ ಸಂಪರ್ಕಿಸುವುದು.
No comments:
Post a Comment