* * * * * * HASSAN DISTRICT POLICE

Monday, July 2, 2018

PRESS NOTE : 02-07-2018

                   ಪತ್ರಿಕಾ ಪ್ರಕಟಣೆ              ದಿನಾಂಕ: 02-07-2018.
ಜೂಜಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ 3000/- ನಗದು ವಶ
     ದಿನಾಂಕ: 01-07-2018 ರಂದು ಮಧ್ಯಾಹ್ನ 03-30 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಹುಣಸವಳ್ಳಿ ಗ್ರಾಮದ ಹತ್ತಿರ ಫಾರೆಸ್ಟ್ ಒಳಗೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ದಯಾನಂದ ವಿ.ವಿ. ಪಿಎಸ್ಐ ಯಸಳೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಜೀವನ್ ಬಿನ್ ವೇಲಾಯುಧ, 38 ವರ್ಷ, ಗುಡಗಳಲೆ ಗ್ರಾಮ, ಶನಿವಾರಸಂತೆ, ಸೋಮವಾರಪೇಟೆ ತಾಲ್ಲೂಕು, 2) ಮಣಿ ಬಿನ್ ಅರ್ಮುಗಂ, 26 ವರ್ಷ, ಈಚಲಬೀಡು, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 3000/- ನಗದನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ತಾಯಿ ಮಗಳೊಂದಿಗೆ ಕಾಣೆ
    ದಿನಾಂಕ:  22-06-2018 ರಂದು  ಬೆಳಿಗ್ಗೆ 08-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದಾಸರಕೊಪ್ಪಲು ಗ್ರಾಮದ ವಾಸಿ ಶ್ರೀ ರಾಮಚಂದ್ರ ರವರ ಪತ್ನಿ ಶ್ರೀಮತಿ ಮೀನಾಕ್ಷಿ ಮತ್ತು ಮಗಳು ಕು|| ಮೋನಿಕಾಳೊಂದಿಗೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಮೀನಾಕ್ಷಿ, ರವರ ಪತಿ ಶ್ರೀ ರಾಮಚಂದ್ರ ರವರು ದಿನಾಂಕ: 01-07-2018  ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಮೀನಾಕ್ಷಿ ಕೋಂ ರಾಮಚಂದ್ರ, 35 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಚಹರೆ: ಮೋನಿಕಾ ಕೋಂ ರಾಮಚಂದ್ರ, 18 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಇವರ ಸುಳಿವು ಸಿಕ್ಕಲ್ಲಿ ಪೆನ್ ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-270221 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ
     ದಿನಾಂಕ: 21-05-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಪಟ್ಟಣ ಜನತಾ ಕಾಲೋನಿ ವಾಸಿ ಶ್ರೀ ಬಸವಯ್ಯ ರವರ ಪತ್ನಿ ಶ್ರೀಮತಿ ಪದ್ಮ, ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ  ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಪದ್ಮ, ರವರ ಪತಿ ಶ್ರೀ ಬಸವಯ್ಯ ರವರು ದಿನಾಂಕ: 01-07-2018 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಪದ್ಮ ಕೋಂ ಬಸವಯ್ಯ, 41 ವರ್ಷ, 4'5'' ಅಡಿ ಎತ್ತರ, ದುಂಡುಮುಖ, ಕಪ್ಪು ಬಣ್ಣ,  ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.
 ಹುಡುಗಿ ಕಾಣೆ
     ದಿನಾಂಕ: 30-06-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಗುರುಮಾರನಹಳ್ಳಿ ಬಡಾವಣೆ, ಅಂಬಿಕನಗರ ವಾಸಿ, ಶ್ರೀ ಶಿವಣ್ಣ ರವರ ಮಗಳು ಕು|| ಸಂಗೀತ, ಮನೆಯಿಂದ ರೈಲ್ವೆ ಇಲಾಖೆಗೆ ಹಾಜರ್ ಹಾಕಿ ಬರುವುದಾಗಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕು|| ಸಂಗೀತಾಳ ತಂದೆ ಶ್ರೀ ಶಿವಣ್ಣ ರವರು ದಿನಾಂಕ: 01-07-2018 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದ. ಕಾಣೆಯಾದ ಹುಡುಗಿಯ ಚಹರೆ: ಕು|| ಸಂಗೀತಾ ಎಸ್.ಎಸ್. ಬಿನ್ ಶಿವಣ್ಣ, 19 ವರ್ಷ, 5'4'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು,  ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಗುಲಾಬಿ ಕಲರ್ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.

No comments: