* * * * * * HASSAN DISTRICT POLICE

Monday, July 2, 2018

PRESS NOTE : 01-07-2018


ಪತ್ರಿಕಾ ಪ್ರಕಟಣೆ       ದಿನಾಂಕ:01-07-2018

ಟಿವಿಎಸ್ ಎಕ್ಸೆಲ್ ಮೊಪೆಡ್ನಿಂದ  ಬಿದ್ದು  ವ್ಯಕ್ತಿ  ಸಾವು  :  ದಿನಾಂಕ: 29-06-2018 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ನಂದಿಹಳ್ಳಿ  ಗ್ರಾಮದ ವಾಸಿ  ಶ್ರೀ  ಕರಿಯಯ್ಯ 65 ವರ್ಷ ಇವರು ಸ್ವಂತ ಕೆಲಸದ ನಿಮಿತ್ತ ತಮ್ಮ ಬಾಬ್ತು ಕೆಎ-02-ಹೆಚ್ ಬಿ-5995 ಟಿವಿಎಸ್ ಎಕ್ಸೆಲ್ ಮೊಪೆಡ್ನಲ್ಲಿ ಅರಸೀಕೆರೆ ಟೌನ್ ಗೆ ಬಂದಿದ್ದು  ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗುವಾಗ ಅರಸೀಕೆರೆ ತಾಲ್ಲೂಕು  ಗೀಜಿಹಳ್ಳಿ ಮತ್ತು ಬೋರನಕೊಪ್ಪಲು ಮದ್ಯೆ ಇರುವ ಮಧು ಟೈಲ್ಸ್  ನೇರದಲ್ಲಿ  ಅರಸೀಕೆರೆ ಹಾಸನ ರಸ್ತೆಯಲ್ಲಿ  ಹೋಗುವಾಗ ಕರಿಯಯ್ಯರವರು ತಮ್ಮ  ಟಿವಿಎಸ್ ಎಕ್ಸೆಲ್ ಮೊಪೆಡ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು  ಹೋಗಿ ಹಿಡಿತ ತಪ್ಪಿ ಮೊಪೆಡ್ ಸಮೇತ ಕರಿಯಯ್ಯರವರು ರಸ್ತೆಗೆ ಬಿದ್ದಿದ್ದರಿಂದ ಕರಿಯಯ್ಯರವರ ತಲೆ, ಮುಖ, ಕಾಲುಗಳಿಗೆ ರಕ್ತಗಾಯಗಳಾಗಿದ್ದು ಕೂಡಲೇ ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ  ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ  ಸಾಯಿ ಅಂಬಿಕಾ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ದಿನಾಂಕ:30-06-18 ರಂದು ಬೆಳಿಗ್ಗೆ  05-15 ಗಂಟೆಯಲ್ಲಿ  ಆಸ್ಪತ್ರೆಯ ಗೇಟ್ ಬಳಿ ಹೋದಾಗ ಕರಿಯಯ್ಯರವರು ಆಂಬುಲೆನ್ಸ್ ನಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಮಂಜಯ್ಯ  ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ.

ಬೈಕ್ ನಿಂದ  ಬಿದ್ದು  ವ್ಯಕ್ತಿ  ಸಾವು  : ದಿನಾಂಕ: 29-06-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಮತ್ತಾವರ  ಗ್ರಾಮದ ವಾಸಿ  ಶ್ರೀ  ಚಂದನ್ ಎಂ. ಹೆಚ್ 21 ವರ್ಷ ಇವರು ತಮ್ಮ ಬಾಬ್ತು ಕೆಎ-52-ಹೆಚ್-7342 ನಂಬರಿನ ಬೈಕಿನಲ್ಲಿ ಸಕಲೇಶಪುರ ಟೌನ್ ಗೆ ಕೆಲಸಕ್ಕೆ  ಬಂದಿದ್ದು  ರಾತ್ರಿ ವಾಪಸ್ ಮನೆಗೆ ಹೋಗುವಾಗ ಚಂದನ್ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು  ಬಂದು ದೊಡ್ಡನಾಗರ ಗ್ರಾಮದ ಬೋಡರ್್ ಕಲ್ಲಿನ ಸಿಮೆಂಟ್  ಕಂಬಕ್ಕೆ ಗುದ್ದಿಸಿ  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ  ಹರೀಶ್ ಎಂ.ಬಿ ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ.

ಬೈಕಿಗೆ  ಕಾರು ಢಿಕ್ಕಿ  ವ್ಯಕ್ತಿ  ಸಾವು :     ದಿನಾಂಕ: 30-06-2018 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಬ್ಯಾಡರಹಳ್ಳಿ  ಗ್ರಾಮದ ವಾಸಿ ಶ್ರೀ  ರಾಮೇಗೌಡ ಬಿ.ಎನ್ ರವರು 56 ವರ್ಷ, ಇವರು ತಮ್ಮ ಬಾಬ್ತು ಕೆಎ-13-ಇಎ-8553 ನಂಬರಿನ ಬೈಕಿನಲ್ಲಿ ಚನ್ನರಾಯಪಟ್ಟಣಕ್ಕೆ ಸಂತೆಗೆ ಹೋಗಿದ್ದು ವಾಪಸ್ ಊರಿಗೆ ಬರುವಾಗ ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆ  ಬ್ಯಾಡರಹಳ್ಳಿ ಬಸ್ ನಿಲ್ದಾಣದ ಹತ್ತಿರ ಹಿಂದಿನಿಂದ ಬಂದ ಕೆಎ-51-ಎಂಹೆಚ್-0168 ಸ್ವಿಫ್ಟ್  ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು  ಬಂದು ಕೆಎ-13-ಇಎ-8553 ರ ಮೋಟಾರ್ ಬೈಕಿಗೆ ಢಿಕ್ಕಿ ಮಾಡಿದ್ದರಿಂದ ರಾಮೇಗೌಡರವರು  ಬೈಕಿನಿಂದ ಕೆಳಗೆ ಬಿದ್ದಾಗ ತಲೆ, ಎದೆ, ಕೈಕಾಲುಗಳಿಗೆ ರಕ್ತಗಾಯಗಳಾಗಿರುತ್ತೆ. ಕೂಡಲೇ ಆಂಬುಲೆನ್ಸ್ ನಲ್ಲಿ ರಾಮೇಗೌಡರವರನ್ನು ಹಾಸನದ ಎನ್ಡಿಆರ್ಕೆ  ಆಸ್ಪತ್ರೆಗೆ  ಬಂದು ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ  ಬೆಂಗಳೂರಿನ  ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:01-07-18 ರಂದು ಬೆಳಗಿನ ಜಾವ 01-55 ಗಂಟೆಯಲ್ಲಿ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣನ ಮಗ ಶ್ರೀ ಮಹಾಲಿಂಗೇಗೌಡ ಬಿ.ಬಿ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ.

ಮನುಷ್ಯ ಕಾಣೆ  : ದಿನಾಂಕ:23-06-18 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಚನ್ನರಾಯಪಟ್ಟಣ ಟೌನ್ ಬಾಗೂರು ರಸ್ತೆ, ಕೆರೆಬೀದಿ ವಾಸಿ ಶ್ರೀ ಸೋಮಶೇಖರ್ ಕೆ.ಎನ್ ರವರು ಗಾರೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ  ಹೋಗಿದ್ದು ಇದೂವರೆಗೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಸೋಮಶೇಖರ್ ಕೆ.ಎನ್ ರವರ ಪತ್ನಿ ಶ್ರೀಮತಿ ಪ್ರೀತಿರವರು  ದಿನಾಂಕ:30-06-2018 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಸೂಮಶೇಖರ್ ಕೆ.ಎನ್  ಬಿನ್ ನಿಂಗೇಗೌಡ  25 ವರ್ಷ, 5.6  ಅಡಿ ಎತ್ತರ, ಬಿಳಿಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ಕನ್ನಡ ಮಾತನಾಡುತ್ತಾರೆ. ಈತನ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಫೋನ್ ನಂಬರ್; 08176-252333 ಕ್ಕೆ ಸಂಪರ್ಕಿಸುವುದು.

No comments: