* * * * * * HASSAN DISTRICT POLICE

Friday, July 27, 2018

HASSAN DISTRICT PRESS NOTE 27-07-2018




                               ಪತ್ರಿಕಾ ಪ್ರಕಟಣೆ                               ದಿನಾಂಕ: 27-07-2018.

ಅರಸೀಕೆರೆ ಪಟ್ಟಣದಲ್ಲಿ ಮಟ್ಕಾ ಬರೆಯುತ್ತಿದ್ದ ಮೂವರ ಬಂಧನ, ಬಂಧಿತರಿಂದ 2,910/- ನಗದು ವಶ
ಪ್ರಕರಣ: 01, ದಿನಾಂಕ: 26-07-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣ, ಆರ್ ಆರ್ ರಸ್ತೆ ದರ್ಗಾ ಹತ್ತಿರ ಮತ್ತು ಶ್ಯಾನುಬೋಗರ ಬೀದಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾರೆಂದು ಡಿವೈ.ಎಸ್.ಪಿ. ಶ್ರೀ ಸದಾನಂದ ಎ. ತಿಪ್ಪಣ್ಣನವರ್, ಅರಸೀಕೆರೆ ಉಪ-ವಿಭಾಗ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  1) ಸುರೇಶ್ ಬಿನ್ ರಮೇಶ್, 58 ವರ್ಷ, ಸುಭಾಷ್ ನಗರ, ಅರಸೀಕೆರೆ ಪಟ್ಟಣ  2) ತಿಮ್ಮರಾಜು ಬಿನ್ ಚಿಕ್ಕಣ್ಣ, 38 ವರ್ಷ, ಕೆಲ್ಲಂಗೆರೆ, ಅರಸೀಕೆರೆ ಪಟ್ಟಣ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ಬಳಿಯಿದ್ದ 2100/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 
ಪ್ರಕರಣ: 02 ದಿನಾಂಕ: 26-07-2018 ರಂದು ಮಧ್ಯಾಹ್ನ 03-15 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣ, ರೈಲ್ವೆ ಸ್ಟೇಷನ್ ಆಟೋ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾರೆಂದು ಪಿಐ ಶ್ರೀ ಪ್ರಭಾಕರ್ ಕೆ. ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾ ಮಟ್ಕಾ ಚೀಟಿಯನ್ನು ಬರೆಯುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮಂಜನಾಯ್ಕ ಬಿನ್ ತುಳಸಿನಾಯ್ಕ, 31 ವರ್ಷ, ಮಲ್ಲೇಶ್ವರ ನಗರ, 3 ನೇ ಕ್ರಾಸ್, ಅರಸೀಕೆರೆ ಪಟ್ಟಣ ಎಂದು ತಿಳಿಸಿದವನನ್ನು ದಸ್ತ್ತಗಿರಿ ಮಾಡಿಕೊಂಡು ಆತನ ಬಳಿಯಿದ್ದ 810/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

,
ಎತ್ತಿನಗಾಡಿಗೆ ಕಾರು ಡಿಕ್ಕಿ ಕಾರಿನಲ್ಲಿದ್ದ ಒಬ್ಬರ ಸಾವು

ದಿನಾಂಕ: 26-07-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲೆ, ತುರುವೆಕೆರೆ ತಾಲ್ಲೂಕು, ದಬ್ಬೆಘಟ್ಟ ಹೋಬಳಿ, ಎಂ.ಹೊಸೂರು ಗ್ರಾಮದ ಅರುಣ್ ಸ್ನೇಹಿತರಾದ ಅಭಿಷೇಕ್, ಬಸವರಾಜ, ಧನುಷ್, ಭರತ್ ರೊಂದಿಗೆ ಶಶಾಂಕ್ ರವರ ಕೆಎ-05-ಪಿ-3347 ರ ಕಾರಿನಲ್ಲಿ ಚಿಕ್ಕಮಗಳೂರು ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಟ್ರಿಪ್ ಹೋಗಲು ಅರಸೀಕೆರೆ ತಾಲ್ಲೂಕು, ಬಾಣಾವರದ ಹತ್ತಿರ ಎನ್ ಹೆಚ್-206 ರಸ್ತೆಯಲ್ಲಿ ಪುಳಿಯೋಗರೆ ಪ್ಯಾಕ್ಟರಿ ಸಮೀಪ ಹೋಗುತ್ತಿದ್ದಾಗ ಅಭಿಷೇಕ್ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಮುಂದೆ ಹೋಗುತ್ತಿದ್ದ  ಯಾವುದೋ ಎತ್ತಿನಗಾಡಿಯನ್ನು ಓವರ್ ಟೇಕ್ ಮಾಡಲು ಹೋಗಿ ಎತ್ತಿನ ಗಾಡಿ ಹಿಂಭಾಗದಲ್ಲಿದ್ದ ನೇಗಿಲಿಗೆ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿದ್ದ ಕುಳಿತಿದ್ದ ಅರುಣ್ ಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಅರುಣ್ ಬಿನ್ ರಂಗಪ್ಪ, 23 ವರ್ಷ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಮೃತರ ಸಂಬಂಧಿ ಶ್ರಿ ಸುರೇಶ ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.


No comments: