* * * * * * HASSAN DISTRICT POLICE

Wednesday, July 25, 2018

PRESS NOTE 24-07-2018
ಪತ್ರಿಕಾ ಪ್ರಕಟಣೆ                      ದಿನಾಂಕ: 24-07-2018

ಪಿಕಪ್ ವಾಹನ ಕಾಂಪೌಂಡ್ಗೆ ಡಿಕ್ಕಿ ಚಾಲಕ ಸಾವು :         ದಿನಾಂಕ: 23-07-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆಂಚಮ್ಮನ ಹೊಸಕೋಟೆ ಹೋಬಳಿ, ಹೊನ್ನವಳ್ಳಿ ಗ್ರಾಮದ ಹರೀಶ ರವರ ಬಾಬ್ತು ಕೆಎ-12-ಬಿ-5053 ರ ಪಿಕಪ್ ವಾಹನದಲ್ಲಿ  ಅಕ್ಕನ ಮನೆ ಸಕಲೇಶಪುರಕ್ಕೆ ಹೋಗಲು  ಮಗ್ಗೆ, ಜಯಂತಿ ನಗರದ ಹತ್ತಿರ ಹೋಗುತ್ತಿದ್ದಾಗ ಪಿಕಪ್ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಜಯಂತಿ ನಗರದ ನಟರಾಜು ರವರ ಕಾಂಪೌಂಡ್ ಗೋಡೆಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಹರೀಶ ಬಿನ್ ಲೇಟ್ ವೆಂಕಟೇಶ, 26 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಜಯಶಂಕರ್ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
                                                  

No comments: