* * * * * * HASSAN DISTRICT POLICE

Friday, July 13, 2018

HASSAN DISTRICT PRESS NOTE 13-07-2018




ಪತ್ರಿಕಾ ಪ್ರಕಟಣೆ                   ದಿನಾಂಕ: 13-07-2018.

ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಲಾರಿ ಚಾಲಕ ಸಾವು ಬಸ್ಸಿನಲ್ಲಿದ್ದ 4 ಜನರಿಗೆ ಗಾಯ

        ದಿನಾಂಕ: 12-07-2018 ರಂದು ಬೆಳಿಗ್ಗೆ ಸುಮಾರು 05-00 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಅರೇಹಳ್ಳಿಕೊಪ್ಪಲು ಗ್ರಾಮದ  ಹೊನ್ನೇಗೌಡ ರವರು ಕೆಎ-25-ಬಿ-4117 ರ ವಿ.ಆರ್.ಎಲ್.ಲಾರಿಯನ್ನು ಚಾಲನೆ ಮಾಡಿಕೊಂಡು ಚನ್ನರಾಯಪಟ್ಟಣ-ನುಗ್ಗೇಹಳ್ಳಿ, ಬಂಡಿಹಳ್ಳಿ ಗೇಟ್ ಎನ್ಹೆಚ್-75 ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ  ಎದುರುಗಡೆಯಿಂದ ಬಂದ ಕೆಎ-51-ಎಬಿ-3281 ರ ದುರ್ಗಾಂಬ ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ ಎರಡು ವಾಹನಗಳು ರಸ್ತೆಯ ಎಡಬದಿಯಲ್ಲಿದ್ದ ಹಳ್ಳಕ್ಕೆ ಬಿದ್ದ ಪರಿಣಾಮ ಲಾರಿ ಮತ್ತು ಬಸ್ಸಿನಲ್ಲಿದ್ದವರಿಗೆ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಜನಪ್ರಿಯ ಮತ್ತು ಎನ್ ಡಿಆರ್ ಕೆ ಆಸ್ಪತ್ರೆಗೆ ಸೇರಿಸಿದ್ದು,  ಲಾರಿ ಚಾಲಕ ಹೊನ್ನೇಗೌಡ ಬಿನ್ ರಂಗಸ್ವಾಮಿ, 40 ವರ್ಷ ರವರು ಚಿಕಿತ್ಸೆ ಫಲಕಾರಿಯಾಗದೆ ಜನಪ್ರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿರುತ್ತದೆಂದು ಪ್ರತ್ಯಕ್ಷದರ್ಶಿ ಶ್ರೀ  ರಂಗಯ್ಯಚಾರಿ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

ಆಟೋರಿಕ್ಷಾ ಬೈಕಿಗೆ ಡಿಕ್ಕಿ ಬೈಕ್ನಲ್ಲಿದ್ದ ಒಬ್ಬರ ಸಾವು ಇನ್ನೊಬ್ಬರಿಗೆ ಗಾಯ

         ದಿನಾಂಕ: 11-07-2018 ರಂದು ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ತವರದೇವರಕೊಪ್ಪಲು ಗ್ರಾಮದ  ಷಣ್ಮುಖ ರವರು ಕೆಎ-13-ಇಕೆ-3917 ರ ಹೊಂಡಾ ಆಕ್ಟೀವಾ ಬೈಕಿನಲ್ಲಿ ಪತ್ನಿ ವನಜಾ ರವರನ್ನು ಕೂರಿಸಿಕೊಂಡು ಹಾಸನ ತಾಲ್ಲೂಕು, ಕಸಬಾ ಹೋಬಳಿ, ದಾಸರಕೊಪ್ಪಲಿನಿಂದ ಸ್ವಲ್ಪ ಹಿಂದೆ ಹಾಸನ ಸಾಲಗಾಮೆ ರಸ್ತೆಯಲ್ಲಿ  ಹೋಗುತ್ತಿದ್ದಾಗ  ಎದುರುಗಡೆ ಅಂದರೆ ಹಾಸನ ಕಡೆಯಿಂದ ಬಂದ  ಕೆಎ-12-ಎ-3901  ಆಟೋರಿಕ್ಷಾವನ್ನು  ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ಷಣ್ಮುಖ ಬಿನ್ ಲೇಟ್ ಭುಜಂಗಾಚಾರ್, 35 ವರ್ಷ, ರವರು ಮೃತಪಟ್ಟಿದ್ದು, ಪತ್ನಿ ವನಜಾ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಶ್ರೀ ಶಿವಣ್ಣ ರವರು ಕೊಟ್ಟ ದೂರಿನ ಮೇರೆಗೆ  ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹೆಂಗಸು ಕಾಣೆ
     ದಿನಾಂಕ: 09-07-2018 ರಂದು ರಾತ್ರಿ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೆಕೋಟೆ ಹೋಬಳಿ, ಕೊಡಿಹಳ್ಳಿ ಗ್ರಾಮದ  ಪ್ರಕಾಶ ರವರ ಪತ್ನಿ ಹೇಮಾ ಮನೆಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಹೇಮಾ ರವರ ಪತಿ ಶ್ರೀ ಪ್ರಕಾಶ್ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಹೇಮಾ ಕೊಂ ಪ್ರಕಾಶ್, 32 ವರ್ಷ, 5'2'' ಅಡಿ ಎತ್ತರ ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ  ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೆನರಸೀಪುರ ನಗರ ಠಾಣೆ ಫೋನ್ ನಂ.08175-273333 ಕ್ಕೆ ಸಂಪಕರ್ಿಸುವುದು.
ಮನುಷ್ಯ ಕಾಣೆ
         ದಿನಾಂಕ: 06-07-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ.ಹೆಚ್.ಕೋಟೆ ಹೋಬಳಿ, ಮಗ್ಗೆ ಗ್ರಾಮದ ಚಿನ್ನಪ್ಪ ರವರು ಹಾಸನ ಅರಳೆಪೇಟೆ, ಎಂ.ಹೆಚ್. ಹಾಲ್ಗೆ ಮದುವೆ ಕಾರ್ಯಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಚಿನ್ನಪ್ಪ ರವರ ಸಂಬಂಧಿ ಶ್ರೀ ಜ್ಯುವೆನೆಸ್ ರವರು ದಿನಾಂಕ: 12-07-2018 ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಚಿನ್ನಪ್ಪ ಬಿನ್ ಅಂತೋಣಪ್ಪ, 63 ವರ್ಷ, 6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಮಾತಾಡಲು ಬರುವುದಿಲ್ಲ(ಮೂಗ) ದೃಡಕಾಯ ಶರೀರ, ಎಣ್ಣೆಗೆಂಪು ಬಣ್ಣ,  ಮನೆಯಿಂದ ಹೋಗುವಾಗ ಕಪ್ಪು ಪ್ಯಾಂಟ್, ಕೆಂಪು ಶರ್ಟ್, ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪಕರ್ಿಸುವುದು.


No comments: