* * * * * * HASSAN DISTRICT POLICE

Monday, July 9, 2018

HASSAN DISTRICT PRESS NOTE 08-07-2018
                        ಪತ್ರಿಕಾ ಪ್ರಕಟಣೆ                 ದಿನಾಂಕ:08-07-2018

ಮನುಷ್ಯ ಕಾಣೆ:
ದಿನಾಂಕ:04-07-2018 ರಂದು ಮಧ್ಯಾಹ್ನ 3.00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕ್ ಶೆಟ್ಟಿಹಳ್ಳಿವಾಸಿ ಮೀನಾಕ್ಷಿ ರವರ ಗಂಡ ಲಕ್ಷ್ಮಣ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಲಕ್ಷ್ಮಣ ರವರ ಹೆಂಡತಿ ಮೀನಾಕ್ಷಿ ರವರು ದಿನಾಂಕ:07-07-2018 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಲಕ್ಷ್ಮಣ, 48ವರ್ಷ,  ಗೋಧಿ ಬಣ್ಣ, ದುಂಡುಮುಖ, 5.4 ಅಡಿ ಎತ್ತರ ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಿಳಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಗೊರೂರು ಪೊಲೀಸ್ ಠಾಣೆ ಪೋನ್ ನಂ.08172-225475 ಕ್ಕೆ ಸಂಪರ್ಕಿಸುವುದು.

ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಎರಡು ಸಾವು :
ದಿನಾಂಕ: 07-07-2018 ರಂದು ರಾತ್ರಿ 10-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕ್ ಕಂದಲಿ ಗ್ರಾಮದ ವಾಸಿ ಗಂಗಣ್ಣ ನಾಯಕ ರವರ ಮಗ ಪವನ್ ತನ್ನ ಬಾಬ್ತು ಕೆಎ-13-ಇಜೆ-4828 ರ ಬಜಾಜ್ ಪಲ್ಸರ್ ಬೈಕಿನಲ್ಲಿ ತನ್ನ ಸ್ನೇಹಿತ ಹರ್ಷೆೇಂದ್ರನನ್ನು ಕೂರಿಸಿಕೊಂಡು ಬೈರಾಪುರದಿಂದ ಕಂದಲಿ ಗ್ರಾಮಕ್ಕೆ ಬರುತ್ತಿದ್ದಾಗ ಎನ್.ಹೆಚ್.75, ಬಿ.ಎಂ.ರಸ್ತೆ, ನೇರಳೆಕೆರೆ ಗ್ರಾಮದ ಹತ್ತಿರ ರಸ್ತೆಯ ಮಧ್ಯೆ ಕೆಎ-46-3202 ರ ಲಾರಿ ಕೆಟ್ಟು ನಿಂತಿದ್ದು, ಸದರಿ ಲಾರಿಗೆ ಯಾವುದೇ  ಸೂಚನಾ ಫಲಕ ಮತ್ತು ಕೆಟ್ಟು ನಿಂತಿದ್ದ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿಲ್ಲಿಸಿದ್ದರಿಂದ ಪವನ್ ಲಾರಿಯ ಹಿಂಬಾಗಕ್ಕೆ ಬಂದು  ಡಿಕ್ಕಿ ಮಾಡಿದ್ದರಿಂದ ಪವನ್ ಬಿನ್ ಗಂಗಣ್ಣನಾಯಕ, 22ವರ್ಷ, ಕಂದಲಿಗ್ರಾಮ ಮತ್ತು ಹರ್ಷೆೇಂದ್ರ ಬಿನ್ ಕಾಳೇಗೌಡ, 22ವರ್ಷ, ಕವಳಿಕೆರೆ ಗ್ರಾಮ, ರವರು ಸ್ಥಳದಲ್ಲಿಯೇ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ ಗಂಗಣ್ಣನಾಯಕ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.


No comments: