* * * * * * HASSAN DISTRICT POLICE

Thursday, July 5, 2018

HASSAN DISTRICT PRESS NOTE 05-07-2018
                                       ಪತ್ರಿಕಾ ಪ್ರಕಟಣೆ                 ದಿನಾಂಕ: 05-07-2018.


ಬೈಕಿನಿಂದ ಬಿದ್ದು ವ್ಯಕ್ತಿ ಸಾವು

          ದಿನಾಂಕ: 03-07-2018 ರಂದು ಸಂಜೆ 04-15 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಮಾರಗೌಡನಹಳ್ಳಿ ಗ್ರಾಮದ ರಾಜಪ್ಪ ರವರ ಬಾಬ್ತು ಕೆಎ-13-ಇಎಂ-2114 ರ ಬೈಕಿನಲ್ಲಿ ಮಾರಗೌಡನಹಳ್ಳಿ ಗ್ರಾಮದಿಂದ ಗಂಗನಾಳು ಗ್ರಾಮಕ್ಕೆ ಹೋಗಲು ಅಣ್ಣಿಗನಹಳ್ಳಿ ಬಾಲಾಜಿನಗರದ ಬಳಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಪಡುವಲಿಪ್ಪೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾಜಪ್ಪ ಬಿನ್ ಈರೇಗೌಡ, 62 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ  ಮಗ ಶ್ರೀ ನಾಗರಾಜು ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ

         ದಿನಾಂಕ: 28-06-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಕೆರಗೋಡು ಗ್ರಾಮದ ಮಾದಪ್ಪ ರವರ ಪತ್ನಿ ಶ್ರೀಮತಿ ಪದ್ಮ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪದ್ಮ ರವರ ತಂದೆ ಶ್ರೀ ಕಾಳಯ್ಯ ರವರು ದಿನಾಂಕ: 04-07-2018 ರಂದು  ಕೊಟ್ಟ ದೂರಿನ ಮೇರೆಗೆ  ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಪದ್ಮ ಕೋಂ ಮಾದಪ್ಪ, 22 ವರ್ಷ, 5' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೂಡಿದಾರ, ನೀಲಿ ಬಣ್ಣದ ಟಾಪ್ ಧರಿಸಿರುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ. 08175-226227 ಕ್ಕೆ ಸಂಪರ್ಕಿಸುವುದು.

No comments: