* * * * * * HASSAN DISTRICT POLICE

Saturday, June 30, 2018

PRESS NOTE


ಪತ್ರಿಕಾ ಪ್ರಕಟಣೆ                ದಿನಾಂಕ: 30-06-2018



ಹಾಸನ ಬಡಾವಣೆ ಪೊಲೀಸರಿಂದ ಮನೆ ಕಳವು ಮಾಡುವ ಆರೋಪಿಯ ಬಂಧನ. 
          

         ಹಾಸನ ನಗರದಲ್ಲಿ ಮನೆಗಳ್ಳತನಗಳ ಪ್ರಕರಣದಲ್ಲಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಾನ್ಯ ಪೊಲೀಸ್ ಅಪರ ಅಧೀಕ್ಷಕರಾದ ಶ್ರೀ ಎಂ. ನಾರಾಯಣ, ಮಾನ್ಯ ಡಿವೈಎಸ್ಪಿ ಸಾಹೇಬರವರ ಹಾಗೂ ಸಿಪಿಐ ನಗರ ವೃತ್ತ, ರವರ ನೇತೃತ್ವದಲ್ಲಿ, ದಿನಾಂಕ: 30-06-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಪಿಎಸ್ಐ ಶ್ರೀ ಸುರೇಶ್, ಹಾಗೂ ಕ್ರೈಂ, ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಹೊಸಕೊಪ್ಪಲು ಹೆಚ್.ಎಂ.ಟಿ ಕಲ್ಯಾಣ ಮಂಟಪದ ಹತ್ತಿರ ಹೋದಾಗ ಯಾರೋ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ ಶ್ರೀ ಪ್ರಭು ಪಿ. ಬಿನ್ ಪೊನ್ನಸ್ವಾಮಿ, 30 ವರ್ಷ, ಬೋವಿ ಜನಾಂಗ (ಕ್ರಿಶ್ಚಿಯನ್) ಮೇಘನ ಸ್ಟೋರ್ಸ್, ಹೊಸಮನೆ, ಬೋವಿಕಾಲೋನಿ, 2ನೇ ಕ್ರಾಸ್, ಭದ್ರಾವತಿ ಎಂದು ತಿಳಿಸಿದ್ದು, ಇವನನ್ನು ಹಿಡಿದು ವಿಚಾರ ಮಾಡಲಾಗಿ, ಸರಿಯಾದ ಮಾಹಿತಿ ನೀಡದೇ ಇದ್ದುದ್ದರಿಂದ ಠಾಣೆಗೆ ಕರೆದುಕೊಂಡು ಬಂದು ಕೂಲಂಕುಶಲಾಗಿ ವಿಚಾರಣೆ ಮಾಡಲಾಗಿ, ಆರೋಪಿಯು ಹಾಸನ ನಗರದಲ್ಲಿ ನಡೆದಿರುವ 7 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಪ್ರಕರಣಗಳು ಕೆಳಕಂಡಂತಿರುತ್ತದೆ.

1)            ಹಾಸನ ನಗರ ಪೊಲೀಸ್ ಠಾಣಾ ಮೊ.ನಂ. 67/18, ಕಲಂ 454,457, 380 ಐಪಿಸಿ
2)            ಹಾಸನ ನಗರ ಪೊಲೀಸ್ ಠಾಣಾ ಮೊ.ನಂ. 94/18, ಕಲಂ 454, 457, 380 ಐಪಿಸಿ
3)            ಹಾಸನ ನಗರ ಪೊಲೀಸ್ ಠಾಣಾ ಮೊ.ನಂ. 287/17 ಕಲಂ 454, 380 ಐಪಿಸಿ
4)            ಹಾಸನ ನಗರ ಪೊಲೀಸ್ ಠಾಣಾ ಮೊ.ನಂ. 290/17 ಕಲಂ 454, 457, 380 ಐಪಿಸಿ
5)            ಹಾಸನ ನಗರ ಪೊಲೀಸ್ ಠಾಣಾ ಮೊ.ನಂ. 202/17 ಕಲಂ 454, 380, ಐಪಿಸಿ
6)            ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ಮೊ.ನಂ. 109/16, ಕಲಂ 454, 380 ಐಪಿಸಿ
7)            ಹಾಸನ ಬಡಾವಣಾ ಪೊಲೀಸ್ ಠಾಣಾ ಮೊ.ನಂ. 320/16, ಕಲಂ 454, 457, 380 ಐಪಿಸಿ
               ಆರೋಪಿಯಿಂದ ಒಟ್ಟು 7 ಪ್ರಕರಣಗಳಿಂದ ಸುಮಾರು 235 ಗ್ರಾಂ ಚಿನ್ನ ಮತ್ತು 1 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿರುತ್ತೆ.

         ಈ ಕಾರ್ಯಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ಕುಮಾರ್, ಶಹಪುರವಾಡ್ ಮತ್ತು ಪೊಲೀಸ್ ಅಪರ ಅಧೀಕ್ಷಕರಾದ ಶ್ರೀ ಎಂ. ನಾರಾಯಣ, ರವರ ಮಾರ್ಗದರ್ಶನದಲ್ಲಿ ಮಾನ್ಯ ಉಪ ಅಧೀಕ್ಷಕರಾದ ಶ್ರೀ ಎಂ. ಎನ್. ಶಶಿಧರ್, ಹಾಸನ ನಗರ ವೃತ್ತ ನಿರೀಕ್ಷಕರಾದ ಶ್ರೀ ಸತ್ಯನಾರಾಯಣ, ಹಾಸನ ನಗರ ಠಾಣೆಯ ಪಿಎಸ್ಐ, ರವರಾದ ಶ್ರೀ ಪಿ. ಸುರೇಶ್, ರವರ ನೇತೃತ್ವದಲ್ಲಿ  ಪತ್ತೆಕಾರ್ಯ ನಡೆಸಿದ್ದು, ಹಾಸನ ನಗರ ಪೊಲೀಸ್ ಠಾಣೆಯ ಎಎಸ್ಐ, ಪುಟ್ಟಸ್ವಾಮಿ, ಸಿಬ್ಬಂದಿಗಳಾದ ಶ್ರೀ ಜಮೀಲ್ ಅಹಮ್ಮದ್, ಶ್ರೀ ರಾಜಣ್ಣ, ಶ್ರೀ ಹರೀಶ್, ಶ್ರೀ ಪ್ರಸನ್ನಕುಮಾರ್, ರವರುಗಳು ಇರುತ್ತಾರೆ.



ಬೈಕ್ ಸವಾರ ಬೋರ್ಡ್ ಕಲ್ಲಿಗೆ ಡಿಕ್ಕಿ, ಬೈಕ್ ಸವಾರ  ಸಾವು : ದಿನಾಂಕ: 29-06-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಮತ್ತಾವರ ಗ್ರಾಮದ ವಾಸಿ ಶ್ರೀ ಎಂ.ಹೆಚ್. ಚಂದನ್, ರವರ ಬಾಬ್ತು ಕೆಎ-52, ಹೆಚ್-7342 ರ ಬೈಕ್ನಲ್ಲಿ ಸಕಲೇಶಪುರ ಟೌನ್ನ್ನಲ್ಲಿ ಇ.ಕಾಂ ಪ್ರೈವೆಟ್ ಲಿಮಿಟೆಡ್ನಲ್ಲಿ ಕೆಲಸಕ್ಕೆ ಹೋಗಿದ್ದು, ಕೆಲಸ ವಞುುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಸಕಲೇಶಪುರ ತಾಲ್ಲೂಕು, ಸಕಲೇಶಪುರ-ಅರೇಹಳ್ಳಿ ರಸ್ತೆ, ದೊಡ್ಡನಾಗರ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ದೊಡ್ಡನಾಗರ ಗ್ರಮದ ಹತ್ತಿರವಿರುವ ಬಳಿ ಬೋರ್ಡ್ ಕಲ್ಲಿಗೆ  ಡಿಕ್ಕಿ ಮಾಡಿದ ಪರಿಣಾಮ ಶ್ರೀ ಎಂ.ಹೆಚ್, ಚಂದನ್ ಬಿನ್ ಹರೀಶ್, 21 ವರ್ಷ, ಮತ್ತಾವರ ಗ್ರಾಮ, ಬಿಕ್ಕೋಡು ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಹರೀಶ್, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಹೆಂಗಸು ಕಾಣೆ  : ದಿನಾಂಕ: 28/29-06-2018 ರಂದು ರಾತ್ರಿ 2-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಅಡಗೂರು ಗ್ರಾಮದ ವಾಸಿ ಶ್ರೀ ರಾಜೇಶ್, ರವರ ಪತ್ನಿ ಶ್ರೀಮತಿ ಸಂಗೀತಾ, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸಂಗೀತಾಳ ಪತಿ ಶ್ರೀ ರಾಜೇಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀಮತಿ ಸಂಗೀತಾ ಕೋಂ ರಾಜೇಶ್, 24 ವರ್ಷ, 4'6 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು ಕನ್ನಡ ಭಾಷೆ ಮಾತನಾಡುತ್ತಾರೆ. ಕ್ರೀಮ್ ಕಲರ್ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

No comments: