* * * * * * HASSAN DISTRICT POLICE

Thursday, June 21, 2018

PRESS NOTE : 20-06-2018


ಪತ್ರಿಕಾ ಪ್ರಕಟಣೆ                   ದಿನಾಂಕ: 20-06-2018.
ಹುಡುಗಿ ಕಾಣೆ : ದಿನಾಂಕ: 19-06-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಅರೇಕಲ್ಲು ಹೊಸಳ್ಳಿ ಗ್ರಾಮದ ವಾಸಿ ಶ್ರೀ ಚಂದ್ರೇಗೌಡ, ರವರ ಮಗಳು ಕು|| ಹೆಚ್.ಸಿ. ರಂಜಿನಿ, ಮನೆಯಿಂದ ಸ್ನೇಹಿತಳ ಮದುವೆಗೆ ಹಾಸನಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಹೆಚ್.ಸಿ. ರಂಜಿನಿಯ ತಂದೆ ಶ್ರೀ ಚಂದ್ರೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಹೆಚ್.ಸಿ. ರಂಜಿನಿ ಬಿನ್ ಚಂದ್ರೇಗೌಡ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268630 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 16-06-2018 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಘಟ್ಟದಹಳ್ಳಿ ಗ್ರಾಮದ ವಾಸಿ ಶ್ರೀ ಬೀರೇಗೌಡ, ರವರ ಮಗಳು ಕು|| ಅಂಬಿಕಾ ಮನೆಯಿಂದ ಬೇಲೂರಿನ ಹಾಸ್ಟೆಲ್ಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಅಂಬಿಕಾಳ ತಂದೆ ಶ್ರೀ ಬೀರೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಅಂಬಿಕಾ ಬಿನ್ ಬೀರೇಗೌಡ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-273201ಕ್ಕೆ ಸಂಪರ್ಕಿಸುವುದು.

No comments: