* * * * * * HASSAN DISTRICT POLICE

Thursday, June 14, 2018

PRESS NOTE : 13-06-2018


ಪತ್ರಿಕಾ ಪ್ರಕಟಣೆ                                  ದಿನಾಂಕ: 13-06-2018.

ಕಾರು ಡಿಕ್ಕಿ, ಪಾದಚಾರಿ ಸಾವು: ದಿನಾಂಕ: 10-06-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ವೀರಾಪುರ ಗ್ರಾಮದ ವಾಸಿ ಶ್ರೀ ವಿ.ಆರ್. ನವೀನ್, ರವರು ಸ್ನೇಹಿತರಾದ ಶ್ರೀ ಕೀರ್ತಿ, ರವರೊಂದಿಗೆ ಹಾಸನಕ್ಕೆ ಹೋಗಲು ಹಾಸನ ತಾಲ್ಲೂಕು, ಹಾಸನ-ಹಳೇಬೀಡು ರಸ್ತೆ, ಗೋವಿಂದಪುರ ಪೆಟ್ರೋಲ್ ಬಂಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-53, ಎನ್-6116 ರ ಬೊಲೆರೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ನವೀನ್, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಾಡೆ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ನವೀನ್ ಬಿನ್ ರೊಕ್ಕಪ್ಪ, 26 ವರ್ಷ, ವೀರಾಪುರ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು. ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ರೊಕ್ಕಪ್ಪ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪೊಲೀಸ್ ಸಿಬ್ಬಂದಿಯವರು/ಕುಟುಂಬದ ಸದಸ್ಯರುಗಳಿಗೆ ಯೋಗ ಶಿಬಿರ :  ಜೂನ್ 21 ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆ, ಮೂಡಬಿದರೆ ಆಳ್ವಾಸ್ನಿಂದ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯವತಿಯಿಂದ ಕು|| ಮೇಘನಾ, ಕು|| ವಿನೂತ & ಕು|| ಪೂಜಾ, ವಿದ್ಯಾಥಿಗಳು, ದಿನಾಂಕ: 11-06-2018 ರಂದು ಹಾಸನದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕ್ರೀಡಾಂಗಣದ ಒಳಾಂಗಣ(ಡಿಎಆರ್)ದಲ್ಲಿ ಯೋಗಾಭ್ಯಾಸ ಹಮ್ಮಿಕೊಂಡಿದ್ದು, ಈ ಯೋಗ ತರಬೇತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ರಾಹುಲ್ಕುಮಾರ್, ಶಹಾಪುರ್ವಾಡ್, ರವರು, ಉದ್ಘಾಟಿಸಿ, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿನನಿತ್ಯ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಯವರುಗಳಿಗೆ ಮಾನಸಿಕ ಸ್ಥಿರತೆ ಅವಶ್ಯಕ ಈ ನಿಟ್ಟಿನಲ್ಲಿ ಯೋಗಾಭ್ಯಾಸ ಬಹಳ ಮುಖ್ಯವಾದುದ್ದು, ಈ ಯೋಗ ತರಬೇತಿಯನ್ನು ಪೊಲೀಸ್ ಸಿಬ್ಬಂದಿಯವರು & ಕುಟುಂಬದ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ್, ಡಿವೈಎಸ್ಪಿ, ಡಿಎಆರ್, ಹಾಸನ ರವರು ಉಪಸ್ಥಿತರಿದ್ದರು. ಬೆಳಿಗ್ಗೆ 6-00 ಗಂಟೆಯಿಂದ 7-00 ಗಂಟೆಯವರೆಗೆ ನಡೆಯುವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಅಹ್ವಾನಿಸಿರುತ್ತಾರೆ.

No comments: