* * * * * * HASSAN DISTRICT POLICE

Monday, June 4, 2018

PRESS NOTE : 02-06-2018


ಪತ್ರಿಕಾ ಪ್ರಕಟಣೆ               ದಿನಾಂಕ: 02-06-2018.

ಕಾರು ಮರಕ್ಕೆ ಡಿಕ್ಕಿ, ಒಂದು ಸಾವು, ಒಬ್ಬರಿಗೆ ಗಾಯ : ದಿನಾಂಕ : 01-06-2018 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಬೆಂಗಳೂರು ನಗರ, ಮಾರತನಹಳ್ಳಿ ಗ್ರಾಮದ ರೈನ್ ಬೋಚಿಲ್ಡ್ರನ್ ಆಸ್ಪತ್ರೆಯ ಡಾ|| ಸೂರಜ್ ಪ್ರಸಾದ್, ರವರು ಸ್ನೇಹಿತೆ ಕು|| ಶ್ರದ್ದಾ, ರವರೊಂದಿಗೆ ಕೆಎ-01-ಎಂಆರ್-4091 ರ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ-ಬೇಲೂರು ಮಧ್ಯೆ ತೊಳಲು ಗ್ರಾಮದ ಹತ್ತಿರ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಬಲಭಾಗದ ಬದಿಯಿದ್ದ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಡಾ|| ಸೂರಜ್ ಪ್ರಸಾದ್ ಬಿನ್ ಎಲ್.ಎಸ್. ಪ್ರಸಾದ್, 35 ವರ್ಷ, ರವರು ಮಾರತನಹಳ್ಳಿ ಗ್ರಾಮ, ಬೆಂಗಳೂರು ನಗರ ರವರು ಮಾರ್ಗ ಮಧ್ಯೆ ಮೃತಪಟ್ಟಿದ್ದು,  ಕು|| ಶ್ರದ್ದಾ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೃತರ ಸಂಬಂಧಿಕರಾದ  ಶ್ರೀ ಡಾ|| ಉಮೇಶ ರವರುಕೊಟ್ಟದೂರಿನ ಮೇರೆಗೆ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ : ದಿನಾಂಕ: 16-05-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಕಾರೇಹಳ್ಳಿ ಗ್ರಾಮದ ವಾಸಿ ಶ್ರೀ ರವಿ, ರವರ ಮಗಳು ಕು|| ಚಾಂದನಿ, ಅಜ್ಜಿ ಮನೆಯಾದ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಹೆಚ್. ಹಿಂದಲಹಳ್ಳಿ ಗ್ರಾಮದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಚಾಂದನಿಯ ತಾಯಿ ಶ್ರೀಮತಿ ಭಾರತಿ, ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾಣೆಯಾದ ಹುಡುಗಿಯ ಚಹರೆ: ಕು|| ಚಾಂದನಿ ಬಿನ್ ರವಿ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ.  ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-260100 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 31-05-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಹಳೇಬೆಳಗೊಳ ಗ್ರಾಮದ ವಾಸಿ ಶ್ರೀ ಪುಟ್ಟೇಗೌಡ, ರವರ ಮಗಳು ಕು|| ಕಾವ್ಯ, ಹಳೆಬೆಳಗೊಳ ಗ್ರಾಮದ ಅಂಚೆ ಕಛೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಎಂ.ಹೆಚ್02-ಈಬಿ-2963 ರ ಹೋಂಡಾ ಅಕ್ಟೀವಾ ಬೈಕ್ನಲ್ಲಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕಾವ್ಯಳ ಅಣ್ಣ ಶ್ರೀ ವಿಠಲ, ರವರು ಕೊಟ್ಟ ದೂರಿನ ಶ್ರವಣಬೆಳಗೊಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಕಾವ್ಯ ಬಿನ್ ಪುಟ್ಟೇಗೌಡ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.

ಮನುಷ್ಯ ಕಾಣೆ : ದಿನಾಂಕ: 25-05-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಜಕ್ಕನಹಳ್ಳಿ ಗ್ರಾಮದ ವಾಸಿ ಶ್ರೀ ಕೆಂಪೇಗೌಡ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಕೆಂಪೇಗೌಡ, ರವರ ಮಗ ಶ್ರೀ ಉಮೇಶ್, ರವರು ದಿನಾಂಕ: 01-06-2018 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀ ಕೆಂಪೇಗೌಡ, 65 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ.  ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.

ಮನುಷ್ಯ ಕಾಣೆ : ದಿನಾಂಕ : 01-01-2018 ರಂದು ಮಧ್ಯಾಹ್ನ 01-41 ಗಂಟೆ ಸಮಯದಲ್ಲಿ ಆಲೂರುತಾಲ್ಲೂಕು, ಕಸಬಾ ಹೋಬಳಿ, ಭರತವಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟೇಶರವರು ಹಾಸನದ ಎಪಿಎಂಸಿ ಯಾಡರ್್ನಲ್ಲಿ ಎಂದಿನಂತೆ ಕೂಲಿ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದುವೆಂಕಟೇಶರವರ ಪತ್ನಿ ಶ್ರೀಮತಿ ಯಶೋದಮ್ಮರವರು ದಿನಾಂಕ : 01-06-2018 ರಂದುಕೊಟ್ಟದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ : ವೆಂಕಟೇಶ, 58 ವರ್ಷ, 5'5'' ಅಡಿ ಎತ್ತರ, ಗೋಧಿ ಬಣ್ಣ, ಸಾಧಾರಣಾ ಮೈಕಟ್ಟು,  ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಾಫಿ ಮತ್ತು ಬಿಳಿ ಬಣ್ಣದ ಚೆಕ್ಸ್ಶರ್ಟ್ ಮತ್ತುಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಆಲೂರು ಠಾಣೆ ಫೋನ್ ನಂ. 08170-218231 ಕ್ಕೆ ಸಂಪರ್ಕಿಸುವುದು.

No comments: