* * * * * * HASSAN DISTRICT POLICE

Monday, June 4, 2018

PRESS NOTE : 01-06-2018


ಪತ್ರಿಕಾ ಪ್ರಕಟಣೆ                                    ದಿನಾಂಕ: 01-06-2018.
ಮನುಷ್ಯ ಕಾಣೆ  : ದಿನಾಂಕ: 27-05-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಜಿನ್ನಾಥಪುರ ಗ್ರಾಮದ ವಾಸಿ ಶ್ರೀ ರಾಮೇಗೌಡ, ರವರ ಬಾಬ್ತು ಕೆಎ-04-ಈಆರ್-3339 ರ ಸ್ಲ್ಪೆಂಡರ್ ಪ್ಲಸ್ ಬೈಕಿನಲ್ಲಿ ಶ್ರವಣಬೆಳಗೊಳಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ.   ಪತ್ತೆ ಮಾಡಿಕೊಡಬೇಕೆಂದು ಶ್ರೀ ರಾಮೇಗೌಡ ರವರ ಪತ್ನಿ ಶ್ರೀಮತಿ ಗಾಯತ್ರಿ ರವರು ದಿನಾಂಕ: 31-05-2018 ರಂದು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ರಾಮೇಗೌಡ, 50 ವರ್ಷ, 5'6'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ  08176-257229 ಕ್ಕೆ ಸಂಪರ್ಕಿಸುವುದು.

ಗಂಡಸು ಕಾಣೆ : ದಿನಾಂಕ: 26-05-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಸವಾಸಿಹಳ್ಳಿ ಗ್ರಾಮದ ವಾಸಿ ಶ್ರೀ ಬಸವರಾಜು, ರವರ ಬಾಬ್ತು ಕೆಎ-46, ಇ-414 ರ ಹಿರೋಹೋಂಡಾ ಬೈಕ್ನಲ್ಲಿ ಸಾಣೇನಹಳ್ಳಿ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಬಸರಾಜು, ರವರ ಪತ್ನಿ ಶ್ರೀಮತಿ ಸುಜಾತ, ರವರು ದಿನಾಂಕ: 31-05-2018 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಬಸವರಾಜು, 48 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವುದ ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.

ಹುಡುಗ ಕಾಣೆ : ದಿನಾಂಕ: 31-05-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಹಾಸನದ ದೊಡ್ಡಗರಡಿ ಬೀದಿ ವಾಸಿ ಶಂಭುಸಿಂಗ್,  ರವರ ಮಗ ಶ್ರೀ ಜೇತು ಸಿಂಗ್, ರವರು ಮೀನಾಕ್ಷಿ ಬ್ಯಾಂಗಲ್ ಸ್ಟೋರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಬಂದಿದ್ದು, ಅಂಗಡಿಯಿಂದ ವಾಪಸ್ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಜೇತು ಸಿಂಗ್, ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕರಾದ ಶ್ರೀ ಬಾಬು ಸಿಂಗ್, ರವರು ದಿನಾಂಕ: 31-05-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ,. ಕಾಣೆಯಾದ ಹುಡುಗನ ಚಹರೆ: ಶ್ರೀ ಜೇತು ಸಿಂಗ್ ಬಿನ್ ಶಂಭುಸಿಂಗ್, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗ ಸುಳಿವು ಸಿಕ್ಕಲ್ಲಿ 08172-260819ಕ್ಕೆ ಸಂಪರ್ಕಿಸುವುದು.


No comments: