* * * * * * HASSAN DISTRICT POLICE

Friday, June 29, 2018

HASSAN DISTRICT PRESS NOTE 29-06-2018




                                    ಪತ್ರಿಕಾ ಪ್ರಕಟಣೆ                       ದಿನಾಂಕ: 29-06-2018.

ನೊಂದಣಿಯಾಗದ ಟಿಪ್ಪರ್ ಲಾರಿ ಡಿಕ್ಕಿ, ಇಬ್ಬರ ಸಾವು, ಒಬ್ಬರಿಗೆ ಗಾಯ.
     ದಿನಾಂಕ: 28-06-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಹಂಡ್ರಂಗಿ ಗ್ರಾಮದ ವಾಸಿ ಶ್ರೀ ಲಿಂಗರಾಜು, ರವರ ಮಗಳು ಕು|| ಆಶಾ ಮತ್ತು ಕು|| ಸೌಮ್ಯ, ಸ್ನೇಹಿತರಾದ ಶ್ರೀ ಸಂತೋಷ್, ರವರ ಬಾಬ್ತು ಕೆಎ-41, ವೈ-8146 ರ ಬಜಾಜ್ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಯಾದಪುರದಲ್ಲಿರುವ ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದು, ವಾಪಸ್ ಗ್ರಾಮಕ್ಕೆ ಹೋಗಲು ಅರಸೀಕೆರೆ ತಾಲ್ಲೂಕು, ಎನ್ಹೆಚ್-234 ರ ಜಾವಗಲ್-ಬಾಣಾವರ ರಸ್ತೆ, ಅರಕೆರೆ-ಬೆಳುವಳ್ಳಿ ಮದ್ಯ ಸೇತುವೆಯಿಂದ ಮುಂದೆ ತಿರುವಿನಲ್ಲಿ ಜಾವಗಲ್ ಕಡೆ ಹೋಗುತ್ತಿದ್ದಾಗ ನೊಂದಣಿಯಾಗದೆ ಎಂಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ, ಶ್ರೀ ಸಂತೋಷ್, ಕು|| ಆಶಾ, ಕು|| ಸೌಮ್ಯ, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಕು|| ಆಶಾ ಬಿನ್ ಲಿಂಗರಾಜು, 17 ವರ್ಷ, ಹಂಡ್ರಂಗಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಚಿಕಿತ್ಸೆಗಾಗಿ ಶ್ರೀ ಸಂತೋಷ್, ಮತ್ತು ಕು|| ಸೌಮ್ಯ, ರವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕು|| ಸೌಮ್ಯ ಬಿನ್ ವೆಂಟಕೇಶ್, 17 ವರ್ಷ, ಅಂಕಲವಾಡಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಬೈಕ್ ಸಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಜಗದೀಶ್, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ
ದಿನಾಂಕ: 16-06-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಬಯಲುಕುಪ್ಪೆ ಗ್ರಾಮದ ವಾಸಿ ಶ್ರೀ ಮಂಜು, ರವರು ಹಾಸನಕ್ಕೆ ಹೋಗಿ ಬರುವುದಾಗಿ ಸ್ನೇಹಿತನಾದ ಶ್ರೀ ಚಂದ್ರನೊಂದಿಗೆ ಹಾಸನದ ಹೊಸಬಸ್ ನಿಲ್ದಾಣಕ್ಕೆ ಬಂದಿದ್ದು, ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಮಂಜ. ರವರ ಅಣ್ಣ ಶ್ರೀ ಕೆ. ರಮೇಶ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶ್ರೀ ಮಂಜು ಬಿನ್ ಲೇಟ್ ಕೃಷ್ಣೇಗೌಡ, 51 ವರ್ಷ. 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. 08172-268967 ಕ್ಕೆ ಸಂಪರ್ಕಿಸುವುದು.


No comments: