* * * * * * HASSAN DISTRICT POLICE

Wednesday, June 27, 2018

HASSAN DISTRICT PRESS NOTE : 27-06-2018


ಪತ್ರಿಕಾ ಪ್ರಕಟಣೆ                      ದಿನಾಂಕ: 27-06-2018.
ಬೈಕ್ ಡಿಕ್ಕಿ, ಪಾದಚಾರಿ ಸಾವು : ದಿನಾಂಕ: 26-06-2018 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ತಳಲೂರು ಪೋಸ್ಟ್, ನಾರಾಯಣಗಟ್ಟಹಳ್ಳಿ ಗ್ರಾಮದ ವಾಸಿ ಶ್ರೀ ಮೂಡ್ಲಯ್ಯ, ರವರು ಕಣ್ಣಿನ ಆಸ್ಪತ್ರೆಗೆ ತೋರಿಸಲೆಂದು ಅರಸೀಕೆರೆಗೆ ಬಂದಿದ್ದು, ಆಸ್ಪತ್ರೆಗೆ ತೋರಿಸಿ ಮನೆಗೆ ಹೋಗಲು ಅರಸೀಕೆರೆ ನಗರದ ಹೆಗ್ಗಡೆ ಆಸ್ಪತ್ರೆಯ ಸಮೀದ ಬಿ.ಹೆಚ್. ರಸ್ತೆಯ ಎಡಬದಿಯಲ್ಲಿ ನಿಂತಿದ್ದಾಗ ಎದುರುಗಡೆಯಿಂದ ಬಂದ ಬಜಾಜ್ ಡಿಸ್ಕವರಿ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಮೂಡ್ಲಯ್ಯ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವಐದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತೆಗೆ ದಾಖಲಿಸಿದ್ದು, ಶ್ರೀ ಮೂಡ್ಲಯ್ಯ ಬಿನ್ ಲೇಟ್ ವೆಂಕಟಯ್ಯ, 70 ವರ್ಷ, ನಾರಾಯಣಗಟ್ಟಹಳ್ಳಿ ಗ್ರಾಮ, ತಳಲೂರು ಪೋಸ್ಟ್, ಅರಸೀಕೆರೆ ತಾಲ್ಲೂಕು. ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ವೆಂಕಟೇಶ್, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ಗೆ ಬೈಕ್ ಡಿಕ್ಕಿ, ಒಂದು ಸಾವು, ಒಬ್ಬರಿಗೆ ಗಾಯ : ದಿನಾಂಕ: 25-06-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಬೂತನಗಡಿ ಗ್ರಾಮದ ವಾಸಿ ಶ್ರೀ ಜಯಣ್ಣ, ರವರ ಬಾಬ್ತು ಕೆಎ46-ಜೆ7815 ರ ಟಿವಿಎಸ್ ಎಕ್ಸ್ನಲ್ಲಿ ತಂದೆ ಶ್ರೀ ಪಾಪಬೋವಿ, ರವರೊಂದಿಗೆ ಬೇಲೂರು ತಾಲ್ಲೂಕು, ಹಗರೆ ಗ್ರಾಮದಿಂದ ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಗರೆ-ಹಳೇಬೀಡು ರಸ್ತೆ, ಹೊಲಬಗೆರೆ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಕಡೆಯಿಂದ ಬಂದ ಕೆಎ-13, ಸಿ-2929 ರ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ಶ್ರೀ ಜಯಣ್ಣ ಮತ್ತು ಶ್ರೀ ಪಾಪಬೋವಿ, ರವರುಗಳು ರಸ್ತೆಗೆ ಬಿದ್ದು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಜಯಣ್ಣ ಬಿನ್ ಪಾಪಬೋವಿ, 21 ವರ್ಷ, ಬೂತನಗಡಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಶ್ರೀ ಪಾಪಬೋವಿ, ರವರು ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಮಲ್ಲೇಶ್, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ : ದಿನಾಂಕ: 22-05-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಹಾಸನ ನಗರ ಹುಣಸಿನಕೆರೆ ಬಡಾವಣೆ, ನಳಂದ ಸ್ಕೂಲ್ ಹಿಂಭಾಗದ ವಾಸಿ ಗಂದದಾಚಾರಿರವರ  ಮಗಳು  ರೋಹಿಣಿ ಮನೆಯಿಂದ  ಎಂದಿನಂತೆಟೈಲರಿಂಗ್  ಕೆಲಸಕ್ಕೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿ ಕೊಡಬೇಕೆಂದು ರೋಹಿಣಿರವರತಾಯಿ ಶ್ರೀಮತಿ ಲೀಲಾವತಿ, ರವರು ದಿನಾಂಕ: 26-06-2018 ರಂದು ಕೊಟ್ಟದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ರೋಹಿಣಿ ಬಿನ್ ಗಂದದಾಚಾರಿ, 22 ವರ್ಷ, 5.2 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ ಪೊಲೀಸ್ಠಾಣೆ ಫೋನ್ ನಂ.08172-272260 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 25-06-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಹಂಗರಹಳ್ಳಿ ಗ್ರಾಮದ ವಾಸಿ ಶ್ರೀ ಅಣ್ಣಪ್ಪನಾಯ್ಕ್, ರವರು ಪತ್ನಿ ಶ್ರೀಮತಿ ಸವಿತಾಬಾಯಿ, ಮನೆಯಿಂದ ಹಾಸನ ಸಕರ್ಾರಿ ಆಸ್ಪತ್ರೆಗೆ ಬಂದಿದ್ದು, ವೈದ್ಯರಲ್ಲಿ ತಪಾಸಣೆ ಮಾಡಿಸಿ, ನಂತರ ಆಸ್ಪತ್ರೆಯಿಂದ ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಸವಿತಾಬಾಯಿ ಪತಿ ಶ್ರೀ ಅಣ್ಣಪ್ಪನಾಯ್ಕ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸವಿತಾಬಾಯಿ ಕೋಂ ಅಣ್ಣಪ್ಪನಾಯ್ಕ್, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ & ಮರಾಠಿ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ : ದಿನಾಂಕ: 02-06-2018 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕುಂಚೇವು ಹೊಸಹಳ್ಳಿ ಗ್ರಾಮದ ವಾಸಿ ಶ್ರೀಮತಿ ಪುಟ್ಟಮ್ಮ, ರವರು ಸ್ಯಾಸುರಕ್ಷಾ  ಯೋಜನೆಯ ಹಣ ಪಡೆಯಲು ಶಿವಮೊಗ್ಗದಿಂದ ಬಂದಿದ್ದು, ಕುಂಚೇವು ಹೊಸಹಳ್ಳಿ ಪೋಸ್ಟ್ ಮಾಸ್ಟರ್ ಅನ್ನು ಹಣದ ಬಗ್ಗೆ ವಿಚಾರಿಸಲಾಗಿ ಹಣ ಬಂದಿಲ್ಲವೆಂದು ತಿಳಿಸಿದ ಮೇರೆಗೆ ವಾಪಸ್ ಶಿವಮೊಗ್ಗಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಪುಟ್ಟಮ್ಮ, ರವರ ಮಗಳು ಶ್ರೀಮತಿ ಸರೋಜಮ್ಮ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀಮತಿ ಪುಟ್ಟಮ್ಮ, 80 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08175-273333 ಕ್ಕೆ ಸಂಪರ್ಕಿಸುವುದು.

No comments: