* * * * * * HASSAN DISTRICT POLICE

Monday, June 11, 2018

HASSAN DISTRICT PRESS NOTE 11-06-2018


                                       ಪತ್ರಿಕಾ ಪ್ರಕಟಣೆ                     ದಿನಾಂಕ: 11-06-2018.

ಕಾರು ಆಟೋಗೆ ಡಿಕ್ಕಿ, ಆಟೋ ಪಲ್ಟಿ ಒಂದು ಸಾವು, ಐವರಿಗೆ ಗಾಯ.

        ದಿನಾಂಕ: 10-06-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ರಂಗೇನಹಳ್ಳಿ ಗ್ರಾಮದ ವಾಸಿ ಶ್ರೀ ಬಸವೇಗೌಡ, ರವರ ಮಗಳು ಕು|| ಲಕ್ಷ್ಮೀ, ಮತ್ತು ಇತರೆ ಪ್ರಯಾಣಿಕರಾದ ಕು|| ಕೃತಿಕಾ, ಕು|| ಬಾಮ, ಕು|| ಲಲಿತಾ ಶ್ರೀ ಮೋಹನ, ಶ್ರೀ ಬಾಬು, ರವರುಗಳು ಕೆಎ-13, ಬಿ-4457 ರ ಆಟೋದಲ್ಲಿ  ಹೊಳೆನರಸೀಪುರದಿಂದ ದೊಡ್ಡಕಾಡನೂರು ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಚಿಕ್ಕಕಾಡನೂರು ಗ್ರಾಮ, ಮೈಸೂರು ರಸ್ತೆ, ಹೋಗುತ್ತಿದ್ದಾಗ ಕೆಎ-09, ಎಂಸಿ-2516 ರ ಕೆಂಪು ಬಣ್ಣದ ಕಾರು ಹೋಗುತ್ತಿದ್ದು, ರಸ್ತೆ ಅಡ್ಡವಾಗಿ ಎಮ್ಮೆ ಬಂದಾಗ ಕಾರಿನ ಚಾಲಕ ವೇಗವನ್ನು ಕಡಿಮೆ ಮಾಡಿದಾಗ ಹಿಂದಿನಿಂದ ಬಂದ  ಕೆಎ-18,ಪಿ-1782 ರ ಬಿಳಿ ಮಾಸಲು ಬಣ್ಣದ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಕೆಎ-09, ಎಂಸಿ-2516 ರ ಕೆಂಪು ಬಣ್ಣದ ಕಾರಿಗೆ ಡಿಕ್ಕಿ ಮಾಡಿ ಮುಂದೆ ಕೆಎ-13, ಬಿ-4457 ರ ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ ಪಲ್ಟಿಯಾಗಿ ಪ್ರಯಾಣಿಸುತ್ತಿದ್ದ ಕು|| ಲಕ್ಷ್ಮೀ, ಕು|| ಕೃತಿಕಾ, ಕು|| ಬಾಮ, ಕು|| ಲಲಿತಾ ಶ್ರೀ ಮೋಹನ, ಶ್ರೀ ಬಾಬು, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕು|| ಲಕ್ಷ್ಮೀ ಬಿನ್ ಮಹಾದೇವ, 15 ವರ್ಷ, ರಂಗೇನಹಳ್ಳಿ ಗ್ರಾಮ, ಹಳ್ಳಿಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಶ್ರೀ ಬಾಬು, ರವರು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.           

No comments: