* * * * * * HASSAN DISTRICT POLICE

Monday, June 11, 2018

HASSAN DISTRICT PRESS NOTE : 09-06-2018



ಪತ್ರಿಕಾ ಪ್ರಕಟಣೆ                       ದಿನಾಂಕ:09-06-2018

ಮಟ್ಕಾ ಜೂಜಾಡುತ್ತಿದ್ದ ಇಬ್ಬರ ಬಂಧನ ಬಂಧಿತರಿಂದ 2850/- ನಗದು ವಶ :      ದಿನಾಂಕ:08-06-2018 ರಂದು ಸಂಜೆ 5.50 ಗಂಟೆ ಸಮಯದಲ್ಲಿ ಬೇಲೂರು ಟೌನ್ ಮೀನು ಮಾರುಕಟ್ಟೆ ಬಳಿ ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದಾರೆಂದು ಬೇಲೂರು ವೃತ್ತ ನಿರೀಕ್ಷಕರಾದ ಶ್ರೀ.ಕೆ.ಎಂ.ಯೋಗೀಶ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸ್ಥಳದಲ್ಲಿ  1ರೂಗೆ 80 ರೂಪಾಯಿ ಕೊಡುವುದಾಗಿ ಜೂಜಾಟ ಆಡಿಸುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸಲ್ಲು @ ಸಲೀಂ ಬಿನ್ ಇಸ್ಮಾಯಿಲ್, 47ವರ್ಷ, ಬಂಟೇನಹಳ್ಳಿ, ಬೇಲೂರು ತಾಲ್ಲೂಕ್ 2) ಆಂತೋಣಿ ಬಿನ್ ಮರಿದಾಸ್, 48ವರ್ಷ, ಲಕ್ಷ್ಮಿಪುರ, ಬೇಲೂರು ಟೌನ್ ಎಂದು ತಿಳಿಸಿದವನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ ಜೂಜಾಟದಿಂದ ಗಳಿಸಿಟ್ಟಿದ್ದ 2850=00 ನಗದನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ :     ಹಾಸನ ಕುವೆಂಪುನಗರದ ವಾಸಿ ದೇವರಾಜು ರವರ ಮಗಳು ಪಲ್ಲವಿಯನ್ನು ಶಿವಮೊಗ್ಗದ ವಾಸಿ ಕುಮಾರ್ ರವರಿಗೆ ಕೊಟ್ಟು ವಿವಾಹ ಮಾಡಿಕೊಟ್ಟಿದ್ದು, ದಿನಾಂಕ:07-06-2018 ರಂದು ಮಧ್ಯಾಹ್ನ 1.00 ಗಂಟೆ ಸಮಯದಲ್ಲಿ ಹಾಸನದ ಮನೆಯಿಂದ ಪಲ್ಲವಿ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಪಲ್ಲವಿ ರವರ ತಂದೆ ದೇವರಾಜು ರವರು ದಿನಾಂಕ:08-06-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಪಲ್ಲವಿ.ಹೆಚ್.ಡಿ. ಕೋಂ ಎ.ಬಿ.ಕುಮಾರ್, 27ವರ್ಷ, 5.3 ಅಡಿ ಎತ್ತರ, ಸಾಧಾರಣ ಮೈಬಣ್ಣ, ತೆಳುವಾದ ಶರೀರ ಕನ್ನಡ ಭಾಷೆ ಮಾತನಾಡುತ್ತಾರೆ. ಮೆರೂನ್ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಪೊಲೀಸ್ ಠಾಣೆ ಪೋನ್ ನಂ. 08172-2268967 ಕ್ಕೆ ಸಂಪರ್ಕಿಸುವುದು.

No comments: