* * * * * * HASSAN DISTRICT POLICE

Thursday, June 7, 2018

HASSAN DISTRICT PRESS NOTE : 07-06-2018


ಪತ್ರಿಕಾ ಪ್ರಕಟಣೆ              ದಿನಾಂಕ: 07-06-2018
ಹುಡುಗಿ ಕಾಣೆ :  ದಿನಾಂಕ: 06-06-2018 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಮತ್ತಿಘಟ್ಟ ಗ್ರಾಮದ ವಾಸಿ ಶ್ರೀ ನಾಗೇಗೌಡ, ರವರ ಮನೆಗೆ ನಾದನಿ ಶ್ರೀಮತಿ ರೇಣುಕಾ ಮತ್ತು ಸಂಬಂಧಿಕರ ಮಗಳಾದ ಕು|| ಸ್ವಾತಿ, ರವರುಗಳು ದಿನಾಂಕ: 01-06-2018 ರಂದು ಮನೆಗೆ ಬಂದಿದ್ದು, ದಿನಾಂಕ: 06-06-2018 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಕು|| ಸ್ವಾತಿ ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸ್ವಾತಿಯ ಸಂಬಂಧಿಕರಾದ ಶ್ರೀ ನಾಗೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸ್ವಾತಿ ಬಿನ್ ಬೈರೇಗೌಡ, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ. ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-226888 ಕ್ಕೆ ಸಂರ್ಪಕಿಸುವುದು.


ಹುಡುಗಿ ಕಾಣೆ : ದಿನಾಂಕ: 02-06-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಎನ್ ಹೊಸೂರು ಗ್ರಾಮದ ವಾಸಿ ಶ್ರೀ ಧನಂಜಯ, ರವರ ಮಗಳು ಕು|| ದಿವ್ಯ, ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಗ್ರಾಮದ ನೆಂಟರ ಮನೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ದಿವ್ಯಳ ತಂದೆ ಶ್ರೀ ಧನಂಜಯ, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ದಿವ್ಯ ಬಿನ್ ಧನಂಜಯ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-233033 ಕ್ಕೆ ಸಂಪರ್ಕಿಸುವುದು.


ಹುಡುಗಿ ಕಾಣೆ : ದಿನಾಂಕ: 06-06-2018 ರಂದು ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ದಿಂಡಗೂರು ಗ್ರಾಮದ ವಾಸಿ ಶ್ರೀ ಉಮೇಶ್, ರವರ ಮಗಳು ಕು|| ಅಭಿನಯ, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಅಭಿನಯಳ ತಂದೆ ಶ್ರೀ ಉಮೇಶ್., ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಅಭಿನಯ ಬಿನ್ ಉಮೇಶ್, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ  ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ  08176-252333 ಕ್ಕೆ ಸಂಪರ್ಕಿಸುವುದು.

No comments: