* * * * * * HASSAN DISTRICT POLICE

Tuesday, June 5, 2018

HASSAN DISTRICT PRESS NOTE 05-06-2018




                                                                    ಪತ್ರಿಕಾ ಪ್ರಕಟಣೆ                      ದಿನಾಂಕ: 05-06-2018.

ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ ಮತ್ತು ಅರಸೀಕೆರೆ ತಾಲ್ಲೂಕು, ಜಾವಗಲ್ ಗ್ರಾಮದಲ್ಲಿ ಜೂಜಾಡುತ್ತಿದ್ದ 10 ಜನರ ಬಂಧನ, ಬಂಧಿತರಿಂದ ಸುಮಾರು 15,580/- ನಗದು ವಶ:

ಪ್ರಕರಣ 01: ದಿನಾಂಕ: 04-06-2018ರಂದು ಸಂಜೆ 04-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ  ಹೋಬಳಿ, ಮತ್ತಿಘಟ್ಟ ಗ್ರಾಮದ  ಫಾರೆಸ್ಟ್ ಆವರಣದ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಸಿಪಿಐ ಶ್ರೀ ಹರೀಶ್ ಬಾಬು ಚನ್ನರಾಯಪಟ್ಟಣ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  1) ಸುರೇಶ್ ಬಿ.ಟಿ. ಬಿನ್ ಬಿನ್ ತಿಮ್ಮೇಗೌಡ, 54 ವರ್ಷ, ಬಿಳಿಕೆರೆ ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು 2) ಪುನೀತ ಬಿನ್ ನಾಗಣ್ಣ, 25 ವರ್ಷ, ಹೊಸಹಳ್ಳಿ ಗ್ರಾಮ, ಎಸ್.ಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು 3) ರಾಜು ಬಿನ್ ಮರಿಲಿಂಗೇಗೌಡ, 39 ವರ್ಷ, ಹಮಚಿಹಳ್ಳಿ,  ಎಸ್. ಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದವರನ್ನು  ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿಟ್ಟಿದ್ದ 4,120/- ನಗದನ್ನು ಅಮಾನತ್ತುಪಡಿಸಿಕೊಂಡು ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.


ಪ್ರಕರಣ-02: ದಿನಾಂಕ: 03-06-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಗ್ರಾಮದ ಎಪಿಎಂಸಿ ಮಾಕರ್ೆಟ್ ಆವರಣದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಮಂಜು ಹೆಚ್.ಡಿ. ಜಾವಗಲ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಮೇಶ ಬಿನ್ ಗೋವಿಂದಪ್ಪ, 42 ವರ್ಷ, ಜಾವಗಲ್  ಅರಸೀಕೆರೆ ತಾಲ್ಲೂಕು 2) ಜಗದೀಶ ಬಿನ್ ಹನುಮಂತಪ್ಪ, 38 ವರ್ಷ, ಜಾವಗಲ್, ಅರಸೀಕೆರೆ ತಾಲ್ಲೂಕು 3) ಬಾಬು ಬಿನ್ ಹರಳಯ್ಯ, 42 ವರ್ಷ, ಜಾವಗಲ್ ಅರಸೀಕೆರೆ ತಾಲ್ಲೂಕು 4) ಉಮೇಶ ಬಿನ್ ತಿಮ್ಮಶೆಟ್ಟಿ, 37 ವರ್ಷ, ಜನತಾ ಬಡಾವಣೆ, ಜಾವಗಲ್ ಅರಸೀಕೆರೆ ತಾಲ್ಲೂಕು 5) ದಿವಾಕರ ಬಿನ್ ಈಶ್ವರಶೇಟ್ಟಿ, 34 ವರ್ಷ, ಸಂತೆಮೈದಾನ, ಜಾವಗಲ್ 6) ಯೋಗೇಶ ಬಿನ್ ತಿಮ್ಮಶೆಟ್ಟಿ, 42 ವರ್ಷ, ಜಾವಗಲ್, ಅರಸೀಕೆರೆ ತಾಲ್ಲೂಕು 7) ದೀಪು ಬಿನ್ ಗಂಗಾಧರ, 42 ವರ್ಷ, ಮಾಕರ್ೆಟ್ ರಸ್ತೆ, ಜಾವಗಲ್ ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 11,730/- ನಗದನ್ನು ಅಮಾನತ್ತುಪಡಿಸಿಕೊಂಡು ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹುಡುಗಿ ಕಾಣೆ
ದಿನಾಂಕ: 04-06-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ಪಟ್ಟಣ, ಹೌಸಿಂಗ್ ಬೋರ್ಡ್ ವಾಸಿ ಶ್ರೀ ಚಂದ್ರಾಚಾರ್ ರವರ ಮಗಳು ಕು|| ಸುಶ್ಮಿತಾ, ರವರು ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ  ಮಾಡಿಕೊಡಬೇಕೆಂದು ಕು|| ಸುಶ್ಮಿತಳ  ತಂದೆ ಶ್ರೀ ಚಂದ್ರಾಚಾರ್ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸುಶ್ಮಿತಾ ಬಿನ್ ಚಂದ್ರಚಾರ್, 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ , ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-226888 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
ದಿನಾಂಕ: 04-06-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಕಾರಿಗನಹಳ್ಳಿ ಗ್ರಾಮದ ವಾಸಿ ಶ್ರೀ ದೊಡ್ಡವೆಂಕಟಯ್ಯ, ರವರ ಮಗಳು ಕು|| ಶಶಿಕಲಾ, ರವರು ದನ ಕಟ್ಟಲು ಜಮೀನು ಬಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಶಶಿಕಲಾಳ ತಂದೆ ಶ್ರೀ ದೊಡ್ಡವೆಂಕಟಯ್ಯ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಶಶಿಕಲಾ ಬಿನ್ ದೊಡ್ಡವೆಂಕಟಯ್ಯ, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿಧಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08170-218131 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ
ದಿನಾಂಕ: 02-06-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕಂದಲಿ ಗ್ರಾಮದ ವಾಸಿ ಶ್ರೀ ವಸಂತ್ ಕುಮಾರ್, ರವರ ಪತ್ನಿ ಶ್ರೀಮತಿ ಲೀಲಾವತಿ @ಲಕ್ಷ್ಮೀ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಲೀಲಾವತಿ @ ಲಕ್ಷ್ಮೀಯ ಪತಿ ಶ್ರೀ ವಸಂತ್ ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ
ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಲೀಲಾವತಿ @ಲಕ್ಷ್ಮೀ ಕೋಂ ಚಂದ್ರಚಾರ್, 24 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

No comments: