* * * * * * HASSAN DISTRICT POLICE

Tuesday, May 29, 2018

PRESS NOTE : 27-05-2018


ಪತ್ರಿಕಾ ಪ್ರಕಟಣೆ                    ದಿನಾಂಕ: 27-05-2018.

ಕಾರು ಬೈಕಿಗೆ ಡಿಕ್ಕಿ ಒಂದು ಸಾವು ಮತ್ತು ಒಬ್ಬರಿಗೆ ಗಾಯ : ದಿನಾಂಕ: 26-05-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ನಗರ, ಸಂಗಮೇಶ್ವರ ಬಡಾವಣೆಯ ವಾಸಿ ಶ್ರೀ ಧರ್ಮಪ್ರಕಾಶ್, ರವರ ಮಗಳು ಕುಮಾರಿ ಪ್ರಿಯಾಂಕರವರೊಂದಿಗೆ ತಮ್ಮ ಬಾಬ್ತು ಕೆಎ-13-ಎಕ್ಸ್-7159 ನಂಬರಿನ ಬೈಕಿನಲ್ಲಿ ಹಾಸನ ತಾಲ್ಲೂಕ್ ಕೆಂಚಟ್ಟಹಳ್ಳಿ ಹತ್ತಿರವಿರುವ ಹೆಚ್.ಕೆ.ಎಸ್ ಕಾಲೇಜಿಗೆ ಹೋಗಿ ಪ್ರಿಯಾಂಕರವರ ವ್ಯಾಸಾಂಗ ದೃಢೀಕರಣ ಪತ್ರವನ್ನು ಪಡೆದುಕೊಂಡು ವಾಪಸ್ ಹಾಸನಕ್ಕೆ ಬರಲು ಬೈಕಿನಲ್ಲಿ ಮಗಳನ್ನು ಕೂರಿಸಕೊಂಡು ಹಾಸನ ಬೆಂಗಳೂರು ರಸ್ತೆಯ ಹೆಚ್.ಕೆ.ಎಸ್ ಕಾಲೇಜಿನ ಮುಂಭಾಗ ಇರುವ ಡಿವೈಡರ್ ಹತ್ತಿರ ಯುಟನರ್್ ಮಾಡಿಕೊಂಡು  ಬರುತ್ತಿದ್ದಾಗ ಹಿಂಭಾಗದಿಂದ ಬಂದ ಕೆಎ-03-ಎಂಸಿ-0878 ನಂಬರಿನ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕಿನಲ್ಲಿ ಕುಳಿತಿದ್ದ ಇಬ್ಬರು ರಸ್ತೆಯ ಮೇಲೆ ಬಿದ್ದಾಗ, ಧರ್ಮಪ್ರಕಾಶ್ರವರಿಗೆ ತೀವ್ರ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪ್ರಿಯಾಂಕರವರಿಗೆ ತೀವ್ರ ರಕ್ತಗಾಯಗಳಾಗಿದ್ದು, ಅಪಘಾತ ಪಡಿಸಿದ ಕಾರು ಸಹ ಪಕ್ಕದ ಹೊಂಡಕ್ಕೆ ಬಿದ್ದು ಕಾರಿನಲ್ಲಿದ್ದವರಿಗೂ ಪೆಟ್ಟಾಗಿದ್ದು, ಏಟಾಗಿದ್ದ ಪ್ರಿಯಾಂಕರನ್ನು ಚಿಕಿತ್ಸೆಗಾಗಿ ಹಾಸನ ಎನ್.ಡಿ.ಆರ್.ಕೆ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮೃತರ ಪತ್ನಿ ಶ್ರೀಮತಿ ಹೇಮಲತಾ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ. 

ಅಪರಿಚಿತ ಕಾರು ಡಿಕ್ಕಿ, ವ್ಯಕ್ತಿ ಸಾವು : ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕ್, ಅರಳಾಪುರ ಪೋಸ್ಟ್, ಹೊದಲ ಗ್ರಾಮದ ವಾಸಿ ಶ್ರೀ ದೇವೇಂದ್ರ ನಾಯ್ಕ.ಟಿ.ಡಿ ರವರು ರಜೆಗೆ ತವರು ಮನೆಗೆ ಬಂದಿದ್ದ ಮಗಳು ರಮಾಮಣಿಯರನ್ನು ವಾಪಸ್ ಬೆಂಗಳೂರಿಗೆ ಬಿಟ್ಟು ಬರಲು ದುಗರ್ಾಶಕ್ತಿ ಬಸ್ಸಿನಲ್ಲಿ ಹೊರಟಿದ್ದು, ದಿನಾಂಕ: 26-05-2018 ರಂದು ಬೆಳಗಿನ ಜಾವ 1-40 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕ್ ಈಚಲಹಳ್ಳಿ ಗ್ರಾಮದ ಬಳಿ ಇರುವ ಶ್ರೀ ವೀರಭದ್ರೇಶ್ವರ ಡಾಬಾದ ಹತ್ತಿರ ಟೀ ಕುಡಿಯಲು ಬಸ್ ನಿಲ್ಲಿಸಿದ್ದು, ದೇವೇಂದ್ರನಾಯ್ಕರವರು ಬಸ್ಸಿನಿಂದ ಇಳಿದು ಎನ್.ಹೆಚ್ 206 ರ ಬಿ ಹೆಚ್ ರಸ್ತೆಯಲ್ಲಿ ನಿಂತಿದ್ದಾಗ ಅರಸೀಕೆರೆ ಕಡೆಯಿಂದ ಬಂದ ಕೆಂಪು ಬಣ್ಣದ ಯಾವುದೋ ಮಾರುತಿ ಸ್ವೀಫ್ಟ್ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ದೇವೇಂದ್ರ ನಾಯ್ಕರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗಳು ಶ್ರೀಮತಿ ರಮಾಮಣಿಯವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ : ದಿನಾಂಕ: 05-05-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ನಗರ, ಹುಣಸಿನಕೆರೆ ಸ್ಲಂ ಬೋರ್ಡ್ ವಾಸಿ ಶ್ರೀ ಮನ್ಜೂರ್ ಆಲಂ, ರವರು ಎ.ಪಿ.ಎಂ.ಸಿ ಯಾರ್ಡ್ಗೆ ಕೆಲಸಕ್ಕೆಂದು ಮನೆಯಿಂದ ಹೋದವರು ರಾತ್ರಿಯಾದರೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಮನ್ಜೂರ್ ಆಲಂರವರ ಪತ್ನಿ ಶ್ರೀಮತಿ ನಜ್ಮಾ ಪರ್ವೀನ್, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಮನ್ಜೂರ್ ಆಲಂ ಬಿನ್ ಅಬ್ದುಲ್ ಮುತಾಲಿಕ್, 38 ವರ್ಷ, 5.6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು. ಉರ್ದು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಮ್ಪ ಬಣ್ಣದ ಪ್ಯಾಂಟ್ ಶಟರ್್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ 08172-272260 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ
ದಿನಾಂಕ: 25-05-2018 ರಂದು ಬೆಳಿಗ್ಗೆ ಚನ್ನರಾಯಪಟ್ಟಣ ತಾಲ್ಲೂಕ್, ಕಸಬಾ ಹೋಬಳಿ, ರಂಗಾಪುರ ಗ್ರಾಮದ ವಾಸಿ ಕುಮಾರಿ ಮಮತ.ಆರ್.ಜಿ ರವರು ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕುಮಾರಿ ಮಮತ, ರವರ ತಂದೆ ಶ್ರೀ ಗಂಗಾಧರ್ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕುಮಾರಿ ಮಮತ.ಆರ್.ಜಿ ಬಿನ್ ಗಂಗಾಧರ, 21 ವರ್ಷ, 5 ಅಡಿ ಎತ್ತರ, ಕೋಲು ಮುಖ,  ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು. ಎಡಗೈ ರಟ್ಟೆಯ ಮೇಲೆ ಕಪ್ಪು ಮಚ್ಚೆ ಇರುತ್ತೆ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

No comments: