* * * * * * HASSAN DISTRICT POLICE

Tuesday, May 22, 2018

PRESS NOTE : 21-05-2018


                                                                 
ಪತ್ರಿಕಾ ಪ್ರಕರಣೆ              ದಿನಾಂಕ: 21-05-2018

 ಬೈಕ್ಗೆ ಬೈಕ್ ಡಿಕ್ಕಿ ಒಂದು ಸಾವು, ಒಬ್ಬರಿಗೆ ಗಾಯ : ದಿನಾಂಕ: 19-05-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಬನವಾಸೆ ಗ್ರಾಮದ ವಾಸಿ ಶ್ರೀ ಕಾಂತರಾಜು, ರವರ ಬಾಬ್ತು ಕೆಎ-ಹೆಚ್-1300 ರ ಬೈಕಿನಲ್ಲಿ ಹಾಸನಕ್ಕೆ ಹೋಗಲು ಹಾಸನ ತಾಲ್ಲೂಕು, ಹಾಸನ-ಗೊರೂರು ರಸ್ತೆ,  ಹನುಮಂತಪುರದ ಹತ್ತಿರ ದೇವೇಗೌಡ ನಗರ ರಸ್ತೆ, ಕ್ರಾಸ್ ಹತ್ತಿರವಿರುವ ರುತ್ವಿ ಕಾಂಡಿಮೆಂಟ್ಸ್  ಅಂಗಡಿ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13, ಎಕ್ಸ್-5416 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಕಾಂತರಾಜು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 20-05-2018 ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀ ಕಾಂತರಾಜು ಬಿನ್ ಬಸವರಾಜು, 29 ವರ್ಷ, ಬನವಾಸೆ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಜ್ಯೋತಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 
ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು:  ದಿನಾಂಕ : 20-05-2018 ರಂದು ರಾತ್ರಿ 9-10 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಚೋಳೇನಹಳ್ಳಿ ಗ್ರಾಮದ ವಾಸಿ ಶ್ರೀ ಶಶಿಕುಮಾರ್, ರವರ ಬಾಬ್ತು ಕೆಎ-41, ಕ್ಯೂ-3268 ರ ಬಜಾಜ್ ಪಲ್ಸರ್ ಬೈಕ್ನಲ್ಲಿ ಸ್ನೇಹಿತರಾದ ಶ್ರೀ ಪುನೀತ್, ರವರೊಂದಿಗೆ ಬೆಂಗಳೂರಿಗೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಹೊಳೆನರಸೀಪುರ-ಅರಕಲಗೂಡು ರಸ್ತೆ, ಸಂಕೇನಹಳ್ಳಿ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಎದುರುಡೆಯಿಂದ ಬಂದ ಕೆಎ-13, ಎಫ್-2132 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಶಶಿಕುಮಾರ್ ಬಿನ್ ತಿಮ್ಮೇಗೌಡ, 28 ವರ್ಷ, ಚೋಳೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಅರಕಲಗೂಡು ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಶ್ರೀ ಪುನೀತ್, ರವರನ್ನು ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ಮೃತರ ತಂದೆ ಶ್ರೀ ತಿಮ್ಮೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಪಿಕ್ಆಪ್ ಗೂಡ್ಸ್ ವಾಹನ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು : ದಿನಾಂಕ: 21-05-2018 ರಂದು ಬೆಳಿಗ್ಗೆ 7-15 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಸೋಂಪುರ ಗ್ರಾಮದ ವಾಸಿ ಶ್ರೀ ದಿವಾಕರ, ರವರ ಬಾಬ್ತು ಕೆಎ-03, ಹೆಚ್ಎ-5466 ರ ಪಲ್ಸರ್ 150 ಬೈಕ್ನಲ್ಲಿ ಪತ್ನಿ ಶ್ರೀಮತಿ ಶೃತಿ, ರವರೊಂದಿಗೆ ಸೋಂಪುರ ಗ್ರಾಮಕ್ಕೆ ಹೋಗಲು ಅರಕಲಗೂಡು ತಾಲ್ಲೂಕು, ರಾಮನಾಥಪುರ-ಬೆಟ್ಟದಪುರ ಮುಖ್ಯ ರಸ್ತೆ, ಗಂಗೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಬಾಗ ಹೋಗುತ್ತಿದ್ದಾಗ ಎದರುಗಡೆಯಿಂದ ಬಂದ ಕೆಎಲ್-58 ಟಿ-4726 ರ ಬುಲೆರೋ ಪಿಕ್ ಆಪ್ ಗೂಡ್ಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ದಿವಾಕರ ಮತ್ತು ಶ್ರೀಮತಿ ಶೃತಿ, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಶ್ರೀ ದಿವಾಕರ ಬಿನ್ ಲೇಟ್ ಪಾಪಣ್ಣ, 35 ವರ್ಷ, ಸೋಂಪುರ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಗಾಯಗೊಂಡು ಶ್ರೀಮತಿ ಶೃತಿ, ರವರನ್ನು ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆಂದು ಮೃತರ ಅಣ್ಣ ಶ್ರೀ ಎಸ್.ಪಿ ಮಹೇಶ್,  ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
                                                           


No comments: