* * * * * * HASSAN DISTRICT POLICE

Saturday, May 19, 2018

PRESS NOTE : 18-05-2018


ಪತ್ರಿಕಾ ಪ್ರಕರಣೆ                     ದಿನಾಂಕ: 18-05-2018.

ಅರಸೀಕೆರೆ ಪಟ್ಟಣದ 2 ಕಡೆಗಳಲ್ಲಿ ಮಟ್ಕಾ-ಜೂಜಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ ಸುಮಾರು 6,260/- ನಗದು ವಶ:     
               
ಪ್ರಕರಣ-01, ದಿನಾಂಕ: 17-05-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಹುಳಿಯಾರ್ರಸ್ತೆ, ಬಸ್ತಿಗುಡಿ ಕೌಂಪೌಂಡ್ ಹತ್ತಿರ 1 ರೂಗೆ 70 ರೂಪಾಯಿ ಕೊಡುವುದಾಗಿ  ಮಟ್ಕಾ-ಜೂಜಾಡುತ್ತಿದ್ದಾರೆಂದು ಶ್ರೀ ಸದಾನಂದ ತಿಪ್ಪಣ್ಣನವರ್, ಡಿವೈಎಸ್ಪಿ, ಅರಸೀಕೆರೆ ಉಪ-ವಿಭಾಗ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ-ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಇಮ್ತಿಯಾಜ್ ಬಿನ್ ಲೇಟ್ ಅಮೀರ್ ಸಾಬ್, ಸುನ್ನಿಚೌಕ, 4 ನೇ ಕ್ರಾಸ್, ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,460/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.  ಪ್ರಕರಣ-02, ದಿನಾಂಕ: 17-05-2018 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಪೇಟೆ ಬೀದಿ, ಮಹಾವೀರ್ ಮೆಟಲ್ ಅಂಗಡಿ ಹತ್ತಿರ 1 ರೂಗೆ 70 ರೂಪಾಯಿ ಎಂದು ಮಟ್ಕಾ-ಜೂಜಾಟಾಡುತ್ತಿದ್ದಾರೆಂದು ಶ್ರೀ ಪ್ರಭಾಕರ್, ಪಿಐ, ಅರಸೀಕೆರೆ ನಗರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ   ಮಟ್ಕಾ-ಜೂಜಾಟಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ತಾಸೀನ್ ಬಿನ್ ಲೇಟ್ ಬಾಷ, 28 ವರ್ಷ, ಶಿವಾಲಯ ದೇವಸ್ಥಾನ, ಅರಸೀಕೆರೆ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2,800/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.  ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಸಾವು: ದಿನಾಂಕ: 17-05-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಜಿನ್ನೇಹಳ್ಳಿ ಕೊಪ್ಪಲು ಗ್ರಾಮದ ವಾಸಿ ಶ್ರೀ ಮಂಜುನಾಥ, ರವರು ಹಿರೀಸಾವೆಗೆ ಕೂಲಿ ಕೆಲಸಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಹಿರೀಸಾವೆ-ದಿಡಗ ರಸ್ತೆಯ ಶ್ರೀ ಮಧನ್ಕುಮಾರ್, ರವರ ತೋಟದ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ಶ್ರೀ ಮಂಜುನಾಥ್, ರವರಿಗೆ ಡಿಕ್ಕಿ ಮಾಡಿದ ಪರಿಣಾಮ, ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗಾಗಿ ಹಿರೀಸಾವೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಮಂಜುನಾಥ ಬಿನ್ ತಿಮ್ಮಯ್ಯ, 35 ವರ್ಷ, ಜಿನ್ನೇಹಳ್ಳಿಕೊಪ್ಪಲು ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತ ತಂದೆ ಶ್ರೀ ತಿಮ್ಮಯ್ಯ, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. ಹುಡುಗಿ ಕಾಣೆ ದಿನಾಂಕ: 17-05-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಪರಮ ಗ್ರಾಮದ ವಾಸಿ ಶ್ರೀ ಕುಮಾರ್, ರವರ ಮಗಳು ಕು|| ಪೂಜಾ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪೂಜಾಳ ತಂದೆ ಶ್ರೀ ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪೂಜಾ ಬಿನ್ ಕುಮಾರ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.

No comments: