* * * * * * HASSAN DISTRICT POLICE

Wednesday, May 16, 2018

PRESS NOTE : 16-05-2018


ಪತ್ರಿಕಾ ಪ್ರಕರಣೆ                                     ದಿನಾಂಕ: 16-05-2018

ಕ್ರಿಕೆಟ್ ಬೆಡ್ಡಿಂಗ್ ಆಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ ಸುಮಾರು 50,200/-ನಗದು, ಟಿವಿ-01, ಫ್ಯಾನ್-01, ಪ್ಲಾಸ್ಟಿಕ್-4 ಚೇರ್ಗಳ ವಶ:
ದಿನಾಂಕ: 14-05-2018 ರಂದು ಸಂಜೆ 8-30 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ಶಂಕರ್ ಮಠದ ಕೇಶವ್, ರವರ ಬಾಬ್ತು ಅಂಗಡಿ ಮಳಿಗೆಯ ಮೇಲೆ ಕ್ರಿಕೆಟ್ ಬೆಡ್ಡಿಂಗ್ ಪಂದ್ಯಾವಳಿ ಆಡುತ್ತಿದ್ದಾರೆಂದು ಶ್ರೀ ಕೆ.ಎಂ. ಯೋಗೇಶ್, ಸಿಪಿ, ಬೇಲೂರು ವೃತ್ತ, ರವಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಕ್ರಿಕೆಟ್ ಬೆಡ್ಡಿಂಗ್ ಪಂದ್ಯಾವಳಿ ಆಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಮಂಜೇಗೌಡ ಬಿನ್ ಚನ್ನೇಗೌಡ, 42 ವರ್ಷ, ಲಕ್ಷ್ಮೀಪುರ ಗ್ರಾಮ, ಬೇಲೂರು ತಾಲ್ಲೂಕು 2) ಸಣ್ಣ ಬಿನ್ ಜಯರಾಮೇಗೌಡ, 32 ವರ್ಷ,  ಲಕ್ಷ್ಮೀಪುರ, ಬೇಲೂರು ತಾಲ್ಲೂಕು 3) ಮಂಜು ಬಿನ್ ಕೆಂಪೇಗೌಡ, 32 ವರ್ಷ,  ಕಂಬಿದಿಣ್ಣೆ ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು 4) ಸುಜಿತ್ ಪಾಷ ಬಿನ್ ಅಬ್ದುಲ್ ರೆಹಮಾನ್, ಕೊಟ್ಟನರೆಗೆ ಬೀದಿ, ಕೋಟೆ, ಬೇಲೂರು ಟೌನ್ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಕ್ರಿಕೆಟ್ ಬೆಡ್ಡಿಂಗ್ ಪಂದ್ಯಕ್ಕೆ ಕಟ್ಟಿದ್ದ ಸುಮಾರು 50,200/- ನಗದು, ಒಂದು ಟಿ.ವಿ, ಟೇಬಲ್ ಫ್ಯಾನ್ ಮತ್ತು 4 ಪ್ಲಾಸ್ಟಿಕ್ ಚೇರ್ಗಳನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಟೆಂಪೋ ಟ್ರಾವೆಲ್ ಲಾರಿಗೆ ಡಿಕ್ಕಿ, ಲಾರಿ ಚಾಲಕ ಸಾವು.
ದಿನಾಂಕ: 15-05-2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಚಾಮರ್ುಡಿ ಗ್ರಾಮ & ಪೋಸ್ಟ್, ಹನುಮನಗರ ವಾಸಿ ಶ್ರೀ ಪ್ರಕಾಶ್, ರವರ ಬಾಬ್ತು ಕೆಎ-20 ಎ-9019 ರ ಲಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು ಬೇಲೂರು ತಾಲ್ಲೂಕು, ಎನ್. ನಿಡಗೋಡು ಗ್ರಾಮದ ಬೇಲೂರು-ಮೂಡಿಗೆರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-01, ಡಿ-196 ರ ಟೆಂಪೋ ಚಾಲಕ ತನ್ನ ಟೆಂಪೋ ಟ್ರಾವಲ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಲಾರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪ್ರಕಾಶ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಪ್ರಕಾಶ್ ಬಿನ್ ಶೀನಪ್ಪಗೌಡ, 37 ವರ್ಷ, ಹುನುಮನಗರ, ಚಾರ್ಮಡಿ ಗ್ರಾಮ & ಪೋಸ್ಟ್, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ರವರಿಗೆ  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಪ್ರವೀಣ್ಗೌಡ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
ದಿನಾಂಕ: 10-05-2018 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಯಸಳೂರು ಗ್ರಾಮದ ವಾಸಿ ಶ್ರೀ ಅಶ್ವಥ್ಕುಮಾರ್, ರವರ ಮಗಳು ಕು|| ಪ್ರಕೃತಿ, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪ್ರಕೃತಿಯ ತಂದೆ ಶ್ರೀ ಅಶ್ವಥ್ಕುಮಾರ್ ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪ್ರಕೃತಿ ಬಿನ್ ಅಶ್ವಥ್ಕುಮಾರ್, 19 ವರ್ಷ, ದ್ವಿತೀಯ ಬಿಎಸ್ಸಿ, 5'2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ. ಕೆಂಪು ಟಾಪ್ & ಕಪ್ಪು ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿ ಸುಳಿವು ಸಿಕ್ಕಲ್ಲಿ 08173-278212 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
ದಿನಾಂಕ: 13-05-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಕಸ್ತೂರಿ ಬಾ ಬೀದಿ ಪೇಟೆ ವಾಡರ್್ ವಾಸಿ ಶ್ರೀಮತಿ ಕಲಾವತಿ, ರವರ ಮಗಳು ಕು|| ಎ.ವಿ. ವಿಜಯ, ಹಾಸನದ ಗಾಂಧಿನಗರದಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಕು|| ಎ.ವಿ. ವಿಜಯ ಬಿನ್ ಲೇಟ್ ವೆಂಕಟೇಶ್, 18 ವರ್ಷ, 5'2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಶ್ರೀ ಕಪ್ಪು ಬಣ್ಣದ ಬಳಿ ಚುಕ್ಕಿಯಿರುವ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-278212 ಕ್ಕೆ ಸಂಪರ್ಕಿಸುವುದು.

No comments: