* * * * * * HASSAN DISTRICT POLICE

Monday, May 14, 2018

PRESS NOTE : 12-05-2018


ಪತ್ರಿಕಾ ಪ್ರಕಟಣೆ             ದಿನಾಂಕ: 12-05-2018

ದಿನಾಂಕ: 12-05-2018  ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿ, ಒಂದು ಸಾವು, ಉಳಿದವರಿಗೆ ಸಣ್ಣ-ಪುಟ್ಟ ಗಾಯ     ದಿನಾಂಕ: 12-05-2018 ರಂದು ರಾತ್ರಿ 1-00 ಗಂಟೆ ಸಮಯದಲ್ಲಿ ಬೆಂಗಳೂರಿನ ಜನರಲ್ ಮೋಟಾರ್ಸ್  ಐಟಿಪಿಎಲ್ ವೈಟ್ ಫೀಲ್ಡ್ನ ವಾಸಿ ಶ್ರೀ ವಿ.ಪ್ರಕಾಶ್, ರವರ ಬಾಬ್ತು ಕೆಎ-01 ಎಂಈ 4517 ರ ಐ 10 ಕಾರಿನಲ್ಲಿ ಮಾವ ಶ್ರೀ ಬಾಲಕೃಷ್ಣ, ತಮ್ಮಂದಿರಾದ ಶ್ರೀ ಪ್ರಶಾಂತ್ ಮತ್ತು ಶರತ್ ಹಾಗೂ ಮಗ ಕು|| ಪರಮ್, ರವರುಗಳೊಂದಿಗೆ ಚುನಾವಣೆ ನಿಮಿತ್ತ ಓಟು ಹಾಕಲು ಸ್ವಂತ ಊರಾದ ಶಿವಮೊಗ್ಗೆಕ್ಕೆ  ಹೋಗಲು ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಗಾಂಧಿನಗರ, ಎನ್ಹೆಚ್-206 ರಸ್ತೆ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-18, ಎಫ್-811 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಬಾಲಕೃಷ್ಣ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಶ್ರೀ ಪ್ರಕಾಶ್, ಶ್ರೀ ಪ್ರಶಾಂತ್ ಮತ್ತು ಶರತ್ ಹಾಗೂ ಮಗ ಕು|| ಪರಮ್, ರವರುಗಳಿಗೆ ಸಣ್ಣ-ಪುಟ್ಟ ಗಾಯಗಾಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಬಾಲಕೃಷ್ಣ, 52 ವರ್ಷ, ಅರವಿಂದನಗರ, ಶಿವಮೊಗ್ಗ ಟೌನ್. ರವರು ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಶ್ರೀ ಪ್ರಕಾಶ್, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮಿನಿ ಲಾರಿ ಆಟೋಗೆ ಡಿಕ್ಕಿ, ಒಂದು ಸಾವು. ಉಳಿದವರಿಗೆ ಸಣ್ಣ-ಪುಟ್ಟ ಗಾಯ
    ದಿನಾಂಕ: 11-05-2018 ರಂದು ಮಧ್ಯಾಹ್ನ 1-45 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಬಂಡೀಶೆಟ್ಟಿಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸುಶೀಲಮ್ಮ, ರವರು ಅದೇ ಗ್ರಾಮದ ಶ್ರೀ ತಿಮ್ಮೇಗೌಡ, ಶ್ರೀ ಸ್ವಾಮಿ, ಶ್ರೀ ಕೆಂಗೇಗೌಡ, ಕು|| ಕಾವ್ಯ, ಶ್ರೀಮತಿ ಶಾಂತಮ್ಮ, ಶ್ರೀಮತಿ ಸಾಕಮ್ಮ, ಶ್ರೀಮತಿ ಮೊಗಣ್ಣಿ, ಶ್ರೀ ಸ್ವಾಮಿ, ಶ್ರೀ ಮಂಜುನಾಥ್, ರವರುಗಳೊಂದಿಗೆ ಕೆಲಸದ ನಿಮಿತ್ತ ಹೊಳೆನರಸಿಪುರಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಹೋಗಲು ಕೆಎ-06,ಸಿ-4195 ರ ಆಟೋದಲ್ಲಿ ಹೊಳೆನರಸೀಪುರ-ಅರಕಲಗೂಡು ರಸ್ತೆ, ಆಗ್ನಿಶಾಮಕ ಕಛೇರಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13 ಬಿ-6301 ರ ಮಿನಿ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಶ್ರೀ ಸ್ವಾಮಿ, ಶ್ರೀ ಕೆಂಗೇಗೌಡ, ಕು|| ಕಾವ್ಯ, ಶ್ರೀಮತಿ ಶಾಂತಮ್ಮ, ಶ್ರೀಮತಿ ಸಾಕಮ್ಮ, ಶ್ರೀಮತಿ ಮೊಗಣ್ಣಿ, ಶ್ರೀ ಸ್ವಾಮಿ ರವರುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀಮತಿ ಸುಶೀಲಮ್ಮ ಕೋಂ ಪುಟ್ಟಸ್ವಾಮಿ 60 ವರ್ಷ, ಬಂಡೀಶೆಟ್ಟಿಹಳ್ಳಿ, ಗ್ರಾಮ, ಕಸಬಾ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಗ್ರಾಮದ ವಾಸಿ ಶ್ರೀ ತಿಮ್ಮೇಗೌಡ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: