* * * * * * HASSAN DISTRICT POLICE

Monday, May 14, 2018

PRESS NOTE: 10-05-2018


ಪತ್ರಿಕಾ ಪ್ರಕಟಣೆ             ದಿನಾಂಕ: 10-05-2018
ಮನುಷ್ಯ ಕಾಣೆ
    ದಿನಾಂಕ: 15-04-2018 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಮಟ್ಟನವಿಲೆ ಗ್ರಾಮದ ಶಿವಶಂಕರ್ ರವರು ಹಾಲಿನ ಡೈರಿಗೆ ಹಾಲು ಹಾಕಿ ಬರಲು ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಶಿವಶಂಕರ್ ರವರ ಪತ್ನಿ ಶ್ರೀಮತಿ ಅನಿತಾ ರವರು ದಿನಾಂಕ: 09-05-2018 ರಂದು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಶಿವಶಂಕರ, 42 ವರ್ಷ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಿರೀಸಾವೆ ಠಾಣೆ ಫೋನ್ ನಂ. 08176-226888  ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ
    ದಿನಾಂಕ: 07-05-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಕಾಮೇನಹಳ್ಳಿ ಗ್ರಾಮದ ಯತೀಶ್ಕುಮಾರ್ ರವರು ಮಗಳು ಕಾವ್ಯ ಜಾವಗಲ್ ಬಸ್ ನಿಲ್ದಾಣದಿಂದ  ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕಾವ್ಯಳ ತಂದೆ ಶ್ರೀ ಯತೀಶ್ಕುಮಾರ್ ರವರು ದಿನಾಂಕ: 09-05-2018 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕಾವ್ಯ ಕೆ.ವೈ. ಬಿನ್ ಯತೀಶ್ಕುಮಾರ್, 18 ವರ್ಷ, 5'3'' ಅಡಿ ಎತ್ತರ, ದುಂಡುಮುಖ, ತೆಳುವಾದ ಶರೀರ, ಕೆಂಪು ಗುಲಾಬಿ ಬಣ್ಣದ ಚೂಡಿದಾರ  08174-271221 ಕ್ಕೆ ಸಂಪರ್ಕಿಸುವುದು.

No comments: