* * * * * * HASSAN DISTRICT POLICE

Monday, May 7, 2018

PRESS NOTE 06-05-2018



                           
                                           ಪತ್ರಿಕಾ ಪ್ರಕಟಣೆ               ದಿನಾಂಕ: 06-05-2018.

ಜಿಲ್ಲೆಯ ಎರಡು ಕಡೆ ಜೂಜಾಡುತ್ತಿದ್ದ 11 ಜನರ ಬಂಧನ, ಬಂಧಿತರಿಂದ 10650/- ನಗದು ವಶ
ಪ್ರಕರಣ: 01, ದಿನಾಂಕ: 05-05-2018 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಗೆಂಡೇಹಳ್ಳಿ ಗ್ರಾಮದ ರಾಮೇಗೌಡರವರ ಕಾಫಿ ತೋಟದಲ್ಲಿ ಅಂಧರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಶರತ್ಕುಮಾರ್ ಬೇಲೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಅಶೋಕ ಬಿನ್ ವೆಂಕಟೇಶಗೌಡ, 50 ವರ್ಷ, ಐರವಳ್ಳಿ ಗ್ರಾಮ ಬೇಲೂರು ತಾಲ್ಲೂಕು 2) ಪೂಣರ್ೇಶ ಬಿನ್ ಹನುಮೇಗೌಡ, 40 ವರ್ಷ,ಬಿರಟೇಮನೆ ಗ್ರಾಮ ಬೇಲೂರು ತಾಲ್ಲೂಕು 3) ಜಗದೀಶ ಬಿನ್ ಕೇಶವೇಗೌಡ, 46 ವರ್ಷ, ಮರೂರು ಗ್ರಾಮ ಬೇಲೂರು ತಾಲ್ಲೂಕು 4) ರಾಜು ಬಿನ್ ಮಂಜುನಾಥ, 35 ವರ್ಷ, ಚಿಕ್ಕಮೇದೂರು ಗ್ರಾಮ ಬೇಲೂರು ತಾಲ್ಲೂಕು 5) ಪುಟ್ಟಸ್ವಾಮಿಗೌಡ ಬಿನ್ ರಾಮೇಗೌಡ, 60 ವರ್ಷ, ಆಡುವನಹಳ್ಳಿ ಗ್ರಾಮ ಬೇಲೂರು ತಾಲ್ಲೂಕು 6) ಯತೀಶ ಬಿನ್ ಹಾಲೇಗೌಡ, 49 ವರ್ಷ, ಅಗ್ಗಡಲು ಗ್ರಾಮ ಬೇಲೂರು ತಾಲ್ಲೂಕು 7) ಅಣ್ಣೇಗೌಡ ಬಿನ್ ಭದ್ರೇಗೌಡ, 60 ವರ್ಷ, ಹಳೇಗೆಂಡೆಹಳ್ಳಿ ಗ್ರಾಮ ಬೇಲೂರು ತಾಲ್ಲೂಕು 8) ಕುಶಾಲಗೌಡ ಬಿನ್ ಮೊಗ್ಗಣ್ಣಗೌಡ, 56 ವರ್ಷ, ಆಡುವನಹಳ್ಳಿ ಗ್ರಾಮ ಬೇಲೂರು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 6500/- ನಗದನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಪ್ರಕರಣ: 02, ದಿನಾಂಕ: 05-05-2018 ರಂದು ಸಂಜೆ 05-30 ಗಂಟೆ ಸಮಯದಲ್ಲಿ  ಹಾಸನ ಹುಣಸಿನಕೆರೆ ಪೂರ್ವಭಾಗದ ಕಡೆ, ವಿಜಯನಗರ ಬಡಾವಣೆ ದಾಖ್ಲೆಗೆ ಸೇರಿದ ಜಮೀನಿನಲ್ಲಿರುವ ಹೊಂಗೆಮರದ ಕೆಳಗೆ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಸುರೇಶ್ ಬೊಪಣ್ಣ, ಪೆನ್ಷನ್ ಮೊಹಲ್ಲಾ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಚಂದ್ರು ಬಿನ್ ರಾಮೇಗೌಡ, 32 ವರ್ಷ, ದಾಸರಕೊಪ್ಪಲು ಹಾಸನ 2) ಕುಮಾರ ಬಿನ್ ರಂಗೇಗೌಡ, 28 ವರ್ಷ, ದೊಡ್ಡಕೊಂಡಗುಳ, ಹಾಸನ 3) ಪ್ರಕುಲ್ಲಾ ಬಿನ್ ಅಜ್ರಸಾಬ್, 32 ವರ್ಷ, ಹೊನ್ನೇನಹಳ್ಳಿ ಗ್ರಾಮ, ಹಾಸನ ತಾಲ್ಲೂಕು 4) ಪ್ರದೀಪ್ ಬಿನ್ ಶಿವಣ್ಣೇಗೌಡ, ಕಣದಹಳ್ಳಿ ಹಾಸನ ತಾಲ್ಲೂಕು  ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 4150/-  ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಮನುಷ್ಯ ಕಾಣೆ
ದಿನಾಂಕ: 03-05-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬನ್ನಿಮರದಹಟ್ಟಿ ಗ್ರಾಮದ ನಾರಾಯಣ ರವರು ಮನೆಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಲ್ಲಿ ಪತ್ತೆ ಮಾಡಿಕೊಡಬೇಕೆಂದು ನಾರಾಯಣ ರವರ ಪತ್ನಿ ಶ್ರೀ ಮಂಜುಳ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ನಾರಾಯಣ, 25 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೆನರಸೀಪುರ ಗ್ರಾಮಾಂತರ ಠಾಣೆ ಫೋನ್ ನಂ. 08175-273308 ಕ್ಕೆ ಸಂಪರ್ಕಿಸುವುದು.
ಕಾರು ಆಟೋಗೆ ಡಿಕ್ಕಿ, ಆಟೋ ಚಾಲಕ ಸಾವು:
ದಿನಾಂಕ: 05-05-2018 ರಂದು ಬೆಳಿಗ್ಗೆ 9-00 ಘಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಉಳಿವಾಲ ಗ್ರಾಮದ ವಾಸಿ ಶ್ರೀ ನಿಂಗೇಗೌಡರವರು  ಹೊಳೆನರಸೀಪುರ ಚನ್ನರಾಯಪಟ್ಟಣ ರಸ್ತೆಯ ಜಕ್ಕವಳ್ಳಿ ಕೊಪ್ಪಲು-ಲಕ್ಷ್ಮೀಪುರ ಗ್ರಾಮದ ಮದ್ಯೆ ಮಂಜುನಾಥ್ ಎಂಬುವವರ ಜಮೀನಿನ ಹತ್ತಿರ  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಭಾಗದಿಂದ ಬಂದ ಕೆಎ-13-ಟಿಎ-6234 ನಂಬರಿನ ಟ್ರ್ಕಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ನಿಂಗೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ  ಶ್ರೀ ನಿಂಗೇಗೌಡ ಬಿನ್ ಮಂಜೇಗೌಡ, 45 ವರ್ಷ, ಉಳಿವಾಲ ಗ್ರಾಮ, ಕಸಬಾ ಹೋಬಳಿ, ಹೊಳೆನರಸೀಪುರ ತಾಲ್ಲೂಕ್ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ರಂಗಸ್ವಾಮಿರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.


No comments: