* * * * * * HASSAN DISTRICT POLICE

Tuesday, April 24, 2018

PRESS NOTE 24-04-2018
                            ಪತ್ರಿಕಾ ಪ್ರಕಟಣೆ                    ದಿನಾಂಕ: 24-04-2018.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 1,151/- ಬೆಲೆಯ ಮದ್ಯ ವಶ:
        ದಿನಾಂಕ: 24-04-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಬೆಳವಾಡಿ ಗ್ರಾಮದಲ್ಲಿ ಶ್ರೀ ಪ್ರಕಾಶ್, ಹೆಚ್ ಸಿ-68, ರವರು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಜಗದೀಶ್, ರವರ ಮನೆಯ ಮುಂದೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಗದೀಶ್ ಬಿನ್ ದ್ಯಾವೇಗೌಡ, 32 ವರ್ಷ, ಎಸಿ ಗೂಡ್ಸ್ ಚಾಲಕ, ಬೆಳವಾಡಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,151/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು , ಒಬ್ಬರಿಗೆ ಗಾಯ:
ದಿನಾಂಕ: 2-04-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಬಿಕ್ಕೋಡು ಗ್ರಾಮದ ವಾಸಿ ಶ್ರೀ ರಂಗಸ್ವಾಮಿ ರವರ ಬಾಬ್ತು ಕೆಎ-18, ಕೆ-1474 ರ ಬೈಕ್ ನಲ್ಲಿ ಸಂಬಂಧಿಕರಾದ ಶ್ರೀ ಮೋಹನ್. ರವರೊಂದಿಗೆ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಕೋಗಿಲೆಮನೆ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-09, ಎನ್-3445 ರ ಆಲ್ಟೋ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರಂಗಸ್ವಾಮಿ & ಶ್ರೀ ಮೋಹನ್, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ರಂಗಸ್ವಾಮಿ ಬಿನ್ ಗುರಪ್ಪಗೌಡ, 24 ವರ್ಷ,  ಬಿಕ್ಕೋಡು ಗ್ರಾಮ, ಬಿಕ್ಕೋಡು ಹೋಬಳಿ, ಬೇಲೂರು ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ತಮ್ಮನಾದ ಶ್ರೀ ಸಂತೋಷ್, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗ ಕಾಣೆ
ದಿನಾಂಕ: 17-04-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನದ ಬಾಗಡೇರಕೊಪ್ಪಲು ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಮಗ ಶ್ರೀ ರಕ್ಷಿತ, ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಂಗಡಿಯ ಕಲೆಕ್ಷನ್ ಹಣವನ್ನು ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಶ್ರೀ ರಕ್ಷಿತನ ತಂದೆ ಶ್ರೀ ರಾಜೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗ ಚಹರೆ: ಶ್ರೀ ರಕ್ಷಿತ ಬಿನ್ ರಾಜೇಗೌಡ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-272260 ಕ್ಕೆ ಸಂಪರ್ಕಿಸುವುದು.No comments: