* * * * * * HASSAN DISTRICT POLICE

Monday, April 23, 2018

PRESS NOTE : 23-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 23-04-2018.

ಜಿಲ್ಲೆಯ ಅರಕಲಗೂಡು  & ಅರಸೀಕೆರೆ ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಸಾಗಿಸುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ ಸುಮಾರು 24,131/- ಬೆಲೆಯ ಮದ್ಯ ವಶ:


ಪ್ರಕರಣ-01 :  ದಿನಾಂಕ: 22-04-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಹೊಸನಗರ ಹತ್ತಿರ ಎಎಸ್ಐ ಶ್ರೀ ವಿರೂಪಾಕ್ಷ ಎಸ್.ಸಿ. ಕೊಣನೂರು ಠಾಣೆ ರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುತ್ತಿದ್ದವರನ್ನು ತಡೆದು ಚೆಕ್ ಮಾಡಲಾಗಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಹಿಡಿದುಕೊಂಡು ಹೋಗುತ್ತಿದ್ದವರನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಂಜೇಗೌಡ ಬಿನ್ ಚಲುವೇಗೌಡ, 45 ವರ್ಷ, ಕಡುವಿನಹೊಸಹಳ್ಳಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು 2) ದೇವರಾಜ ಬಿನ್ ತಿಮ್ಮೇಗೌಡ, 46 ವರ್ಷ, ಕಡುವಿನಹೊಸಹಳ್ಳಿ ಗ್ರಾಮ, ಕೊಣನೂರು ಹೋಬಳಿ,  ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1687/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.


ಪ್ರಕರಣ-2 : ದಿನಾಂಕ: 22-04-2018 ರಂದು ಸಂಜೆ 4-46 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಬೆಂಡೆಕೆರೆ ರಸ್ತೆಯಲ್ಲಿ ಚುನಾವಣಾ ಟೀಂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾದ ಶ್ರೀ ಡಿ.ಸಿ. ಚಂದ್ರಪ್ಪ, ರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಚೀಲವನ್ನಿಟ್ಟುಕೊಂಡು ಹೋಗುತ್ತಿದ್ದು, ಅನುಮಾನಗೊಂಡು ಬೈಕ್ನ್ನು ತಡೆದು ತಪಾಸಣೆ ನಡೆಸಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಆನಂದನಾಯ್ಕ್ ಬಿನ್ ಲಾಲ್ಯಾನಾಯಕ್, 2) ರಾಜಾನಾಯ್ಕ್ ಬಿನ್ ಸಿದ್ದಾನಾಯ್ಕ್, ಬೆಂಡೆಕೆರೆ ತಾಂಡ್ಯ ಗ್ರಾಮ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಸಾಗಿಸುತ್ತಿದ್ದ ಸುಮಾರು 22,444/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಹೆಂಗಸು ಕಾಣೆ : ದಿನಾಂಕ: 13-04-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಸಾತೇನಹಳ್ಳಿ ಗ್ರಾಮದ ತಂಗ್ಯಮ್ಮ ರವರು ಬುದ್ದಿ ಬ್ರಮಣೆಯಾಗಿದ್ದು, ಮನೆಯಿಂದ ಹೊರಗಡೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ತಂಗ್ಯಮ್ಮ ರವರ ಮಗ ಅಶ್ವಥ್ ಎಸ್.ವಿ. ರವರು ದಿನಾಂಕ: 22-04-2018 ರಂದು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ತಂಗ್ಯಮ್ಮ ಕೋಂ ವೀರಭದ್ರೇಗೌಡ, 50 ವರ್ಷ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪರ್ಕಿಸುವುದು

No comments: