* * * * * * HASSAN DISTRICT POLICE

Monday, April 23, 2018

PRESS NOTE : 22-04-2018


ಪತ್ರಿಕಾ ಪ್ರಕಟಣೆ                           ದಿನಾಂಕ:22-04-2018

ಮಗುವಿನೊಂದಿಗೆ ತಾಯಿ ಕಾಣೆ : ಶಿವಮೊಗ್ಗ ಪಟ್ಟಣದ ವಾಸಿ ಜಯರಾಂ ರವರ ಮಗಳಾದ ರಮ್ಯ ಮತ್ತು ಈಕೆಯ ಮಗಳಾದ ಏಂಜಲ್ ಬೇಸಿಗೆ ರಜೆಗೆಂದು ಹಾಸನದ ಚನ್ನಪಟ್ಟಣದಲ್ಲಿರುವ ಅವರ ಅಕ್ಕ ದೀಪಾ ರವರ ಮನೆಯಲ್ಲಿದ್ದು, ನಂತರ ವಾಪಸ್ಸು ಶಿವಮೊಗ್ಗಕ್ಕೆ ಹೋಗಲು ದಿನಾಂಕ:17-04-2018 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ತನ್ನ ಮಗಳೊಂದಿಗೆ ಹಾಸನದ ಹೊಸ ಬಸ್ನಿಲ್ದಾಣದಲ್ಲಿ ಶಿವಮೊಗ್ಗ ಬಸ್ಸನ್ನು ಹತ್ತಿದ್ದು, ಶಿವಮೊಗ್ಗಕ್ಕೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ರಮ್ಯ ರವರ ತಂದೆ ಜಯರಾಂ ರವರು ದಿನಾಂಕ:21-04-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ರಮ್ಯ ಕೋಂ ರಾಮು, 28ವರ್ಷ, ಸುಮಾರು 5 ಅಡಿ ಎತ್ತರ, ಕೋಲು ಮುಖ  ಸಾದಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು ಮತ್ತು ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಏಂಜಲ್ ಬಿನ್ ರಾಮು, 9ವರ್ಷ, ಸುಮಾರು 3 ಅಡಿ ಎತ್ತರ, ಕೋಲು ಮುಖ, ತೆಳುವಾದ ಶರೀರ, ಕೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು ಬಣ್ಣದ ಪ್ಯಾಂಟ್ ಮತ್ತು ಬಳಿ ಬಣ್ಣದ ಟಾಪ್ ಧರಿಸಿರುತ್ತೆ, ಇವರ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ  ಪೊಲೀಸ್ ಠಾಣೆ ಪೋನ್ ನಂ. 08172-268967ಕ್ಕೆ ಸಂಪಕರ್ಿಸುವುದು.

ವಿವಿಧ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ  ಬಂಧನ, 444/- ಬೆಲೆಯ ಮದ್ಯ ವಶ : ಪ್ರಕರಣ-1 :- ದಿನಾಂಕ: 21-04-2018 ರಂದು ಬೆಳಗ್ಗೆ 11.30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕ್ ಎತ್ತಿನಹಳ್ಳ ಡ್ಯಾಂ ನ ಚನ್ನಯ್ಯ ರವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಜಗದೀಶ್, ಸಕಲೇಶಪುರ ಗ್ರಾಮಾಂತರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಚನ್ನಯ್ಯ ಬಿನ್ ಬೋರಯ್ಯ, 20ವರ್ಷ, ಎತ್ತಿನಹೊಳೆ ಯೋಜನೆಯಲ್ಲಿ ಕೂಲಿ ಕೆಲಸ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 300/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಪ್ರಕರಣ-2 :- ದಿನಾಂಕ: 21-04-2018 ರಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕ್ತೊಳಲು ಗ್ರಾಮದ ರೇಣುಕಾಂಬ ವೈನ್ಸ್ ಮುಂಭಾಗ ಮಂಜುನಾಥ ಎಂಬುವರು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಎಎಸ್ಐ ಶ್ರೀ ಚಲುವರಾಜ್, ಅರೇಹಳ್ಳಿ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಲೇ ವಾಸೇಗೌಡ, 31ವರ್ಷ, ತೊಳಲುಗ್ರಾಮ, ಬೇಲೂರು ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 144/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 

No comments: