* * * * * * HASSAN DISTRICT POLICE

Monday, April 16, 2018

PRESS NOTE : 16-04-2018


ಪತ್ರಿಕಾ ಪ್ರಕಟಣೆ     ದಿನಾಂಕ: 16-04-2018.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 1,577/- ಬೆಲೆಯ ಮದ್ಯ ವಶ: ದಿನಾಂಕ: 15-04-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಕಲಗೂಡು  ಪಟ್ಟಣದ ಸಂತೆ ಮೈದಾನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಕು|| ಮಧು, ಪಿಎಸ್ಐ, ಅರಕಲಗೂಡು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ವಿ.ಎನ್. ನಟರಾಜ ಬಿನ್ ನಿಂಗಪ್ಪ, 61 ವರ್ಷ, ಪಲ್ಲವಿ ಲಾಡ್ಜ್, ಅರಕಲಗೂಡು ಟೌನ್. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,577/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ

ಬೈಕ್ ಡಿಕ್ಕಿ, ಪಾದಚಾರಿ ಸಾವು.
ದಿನಾಂಕ: 15-04-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ಟೌನ್  ಮಖಾನ್ ಪಿರಂಗಿಮಠದ ಹತ್ತಿರದ ವಾಸಿ ಶ್ರೀ ನಿಸಾರ್ ರವರು ಚನ್ನರಾಪಟ್ಟಣದ ಮುಖಾನ್ ವೃತ್ತದ ನಿಮಿಷಾಂಬ ಕಾಂಡಿಮೆಂಟ್ಸ್ನಲ್ಲಿ ಟೀ ಕುಡಿದು ವಾಪಸ್ ಮನೆಗೆ ಹೋಗಲು  ಎನ್ಹೆಚ್-75, ರಸ್ತೆ ದಾಟುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13 ಎಫ್-1961 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ನಿಸಾರ್, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ನಿಸಾರ್ ಬಿನ್ ಲೇಟ್ ಬಾಷಸಾಬ್,  30 ವರ್ಷ, ಮಖಾನ್ ಪಿರಂಗಿಮಠ, ವಾಡರ್್ ನಂ-01, ಚನ್ನರಾಯಪಟ್ಟಣ ಟೌನ್. ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಸುಹೀಲ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ನ ನಿಯಂತ್ರಣ ತಪ್ಪಿ, ಮಹಿಳೆ ಸಾವು : ದಿನಾಂಕ: 15-04-2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಗೆಜಗ್ಗನಹಳ್ಳಿ ಗ್ರಾಮದ ವಾಸಿ ಶ್ರೀ ಮಂಜುನಾಥ್, ರವರ ಬಾಬ್ತು ಕೆಎ-50 ರಲ್-8184 ರ ಪಲ್ಸರ್ ಬೈಕ್ನಲ್ಲಿ ಪತ್ನಿ ಶ್ರೀಮತಿ ಪುಷ್ಪಲತಾ ರವರೊಂದಿಗೆ ಆನೆಕನ್ನಂಬಾಡಿ ಗ್ರಾಮಕ್ಕೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಕುರಿಕಾವಲು ಗ್ರಾಮದ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ  ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀಮತಿ ಪುಷ್ಪಲತಾ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು,  ಶ್ರೀಮತಿ ಪುಷ್ಪಲತಾ  ಕೋಂ ಮಂಜುನಾಥ, 40 ವರ್ಷ, ಗೆಜಗ್ಗನಹಳ್ಳಿ ಗ್ರಾಮ, ಹಳ್ಳಿಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು, ರವರು ಮೃತಪಟ್ಟಿರುತ್ತಾರೆಂದು ವೈದ್ಯರು ತಿಳಿಸಿದ ಮೇರೆಗೆ ಮೃತರ ತಾಯಿ ಶ್ರೀಮತಿ ಯಶೋಧಮ್ಮ, ರವರ ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.,

ಬೈಕ್ನ ನಿಯಂತ್ರಣ ತಪ್ಪಿ, ರಸ್ತೆ ಬದಿ ನೆಟ್ಟಿದ್ದ ಕಲ್ಲಿಗೆ ಡಿಕ್ಕಿ, ಬೈಕ್ ಸಾವರ ಸಾವು: ದಿನಾಂಕ: 15-04-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ರಂಗಾಪುರ ಗ್ರಾಮದ ವಾಸಿ ಶ್ರೀ ಲಕ್ಷ್ಮೀಶ, ರವರ ಬಾಬ್ತು ಕೆಎ-13, ಇಡಿ-6194 ರ ಬೈಕ್ನಲ್ಲಿ ಚನ್ನರಾಯಪಟ್ಟಣದ ಶುಚಿ ರುಚಿ ಹೋಟೆಲ್ ಕೆಲಸ ಹೋಗುತ್ತಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಗುಲಸಿಂದ-ರಂಗಾಪುರ ರಸ್ತೆ ಹತ್ತಿರ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನೆಟ್ಟಿರುವ ಕಲ್ಲಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಯ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ, ಶ್ರೀ ಲಕ್ಷ್ಮೀಶ್ ಬಿನ್ ಪುಟ್ಟಸ್ವಾಮಿಶೆಟ್ಟಿ, 28 ವರ್ಷ, ರಂಗಾಪುರ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಮೃತರ ಅಣ್ಣ ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: