* * * * * * HASSAN DISTRICT POLICE

Monday, April 16, 2018

PRESS NOTE : 15-04-2018

 ಪತ್ರಿಕಾ ಪ್ರಕಟಣೆ                     ದಿನಾಂಕ:15-04-2018

ವಿವಿಧ ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ  ಬಂಧನ : ಪ್ರಕರಣ-1 :- ದಿನಾಂಕ: 14-04-2018 ರಂದು ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಸಕಲೇಶಪುರ ಟೌನ್ ಕುಶಾಲನಗರ ಬಡಾವಣೆಯ ಭೀಮನಗುಂಡಿ ಹತ್ತಿರ ಸಾರ್ವಜನಿಕ ಸ್ಥಳವಾದ ಅಣ್ಣಪ್ಪ ದೇವಸ್ಥಾನದ ಹತ್ತಿರ ರಸ್ತೆ ಬದಿಯಲ್ಲಿ ರಸ್ತೆಯಲ್ಲಿ ಹೋಗುವವರಿಗೆ ಮತ್ತು ಬರುವವರಿಗೆ ಹರೀಶ ಎಂಬುವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ರಾಘವೇಂದ್ರಸಕಲೇಶಪುರ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಹರೀಶ ಬಿನ್ ನಾರಾಯಣ, 53ವರ್ಷಕುಶಾಲನಗರಸಕಲೇಶಪುರ ಟೌನ್  ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 310/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಪ್ರಕರಣ-2 :- ದಿನಾಂಕ: 14-04-2018 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕ್ ಜಾವಗಲ್ ಹಾರನಹಳ್ಳಿ ರಸ್ತೆಯ ಸಾಮಿಲ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ  ನಾಗೇಗೌಡ ಎಂಬುವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಮಂಜುಜಾವಗಲ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ನಾಗೇಗೌಡ ಬಿನ್ ತಿಮ್ಮೇಗೌಡ, 56ವರ್ಷಬಕ್ಕಪ್ಪನಕೊಪ್ಪಲು ಗ್ರಾಮಜಾವಗಲ್ ಹೋಬಳಿಅರಸೀಕೆರೆ ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 338/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಪ್ರಕರಣ-3 :- ದಿನಾಂಕ: 14-04-2018 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕ್ ವಡ್ಡರಹಳ್ಳಿ ಹೇಮಾವತಿ ರೆಸಾಟರ್್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ  ಪಾಲಾಕ್ಷ ಎಂಬುವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಕು: ಮಧುಅರಕಲಗೂಡು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ  ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಪಾಲಾಕ್ಷ ಬಿನ್ ಸಿಂಗಾರಶೆಟ್ಟಿ, 35ವರ್ಷಪದುಮನಹಳ್ಳಿಗ್ರಾಮಅರಕಲಗೂಡು  ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 1314/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ. 
ಬೈಕ್ಗೆ ಕ್ಯಾಂಟರ್ ಡಿಕ್ಕಿ ಒಂದು ಸಾವು : ದಿನಾಂಕ: 14-04-2018 ರಂದು ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕ್ ಜೆ.ಸಿ.ಪುರ ಗ್ರಾಮದ ವಾಸಿ ಗುರುಶಾಂತಪ್ಪ ರವರ ಮಗ ಮಂಜುನಾಥ ರವರು ತಮ್ಮ ಬಾಬ್ತು ಕೆಎ-44-ಜೆ-7713 ರ ಬೈಕ್ನಲ್ಲಿ ಜೆ.ಸಿ.ಪುರ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಅರಸೀಕೆರೆಗೆ ಹೋಗಲು ಹೊರಟು ಅರಸೀಕೆರೆ-ಹುಳಿಯಾರ್ ರಸ್ತೆಗೆ ಬಂದಾಗ ಹುಳಿಯಾರ್ ಕಡೆಯಿಂದ ಬಂದ ಎಪಿ-21-ಟಿಟಿ-4854 ರ  ಕ್ಯಾಂಟರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಮಂಜುನಾಥನಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮಂಜುನಾಥ ಬಿನ್ ಗುರುಶಾಂತಪ್ಪ, 35ವರ್ಷಜೆ.ಸಿ.ಪುರಅರಸೀಕೆರೆ ತಾಲ್ಲೂಕ್ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ ಗುರುಶಾಂತಪ್ಪ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ : ದಿನಾಂಕ:11-04-2018 ರಂದು ಬೆಳಗ್ಗೆ 10.30 ಹಾಸನ ಸರಸ್ವತಿಪುರಂ ವಾಸಿ ಲಲಿತ ರವರ ಗಂಡ ಕೃಷ್ಣೇಗೌಡ ರವರು ಮನೆಯಿಂದ ಬೇಲೂರಿಗೆ ಕೆಲಸಕ್ಕೆ ಹೋಳಿ ಬರುವುದಾಗಿ ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲಪತ್ತೆ ಮಾಡಿಕೊಡಬೇಕೆಂದು ಕೃಷ್ಣೇಗೌಡರ ಹೆಂಡತಿ ಲಲಿತ ರವರು ದಿನಾಂಕ:14-04-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಕೃಷ್ಣೇಗೌಡ, 52ವರ್ಷಗೋಧಿ ಬಣ್ಣದುಂಡುಮುಖ, 5 ಅಡಿ ಎತ್ತರ ಕನ್ನಡ ವಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಿಳಿ ಶಟರ್್ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಹಾಸನ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆ ಪೋನ್ ನಂ. 08172-272260 ಕ್ಕೆ ಸಂಪಕರ್ಿಸುವುದು.

No comments: