* * * * * * HASSAN DISTRICT POLICE

Friday, April 13, 2018

PRESS NOTE : 11-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 11-04-2018

ಅಪರಿಚಿತ ವ್ಯಕ್ತಿ ಶವ ಪತ್ತೆ : ದಿನಾಂಕ: 10-4-2018 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ  ಶ್ರೀ ಪುನೀತ್, ಪಿಸಿ-764, ರವರು ಬೇಲೂರು ಠಾಣಾ ವ್ಯಾಪ್ತಿಯ ಗೋಣಿಸೋಮನಹಳ್ಳಿ ಗ್ರಾಮದ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಗೋಣಿಸೋಮನಹಳ್ಳಿ ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ, ರವರ ಬಾಬ್ತು ಮರದ ಮಿಲ್ ಹತ್ತಿರ ಒಂದು ಅಪರಿಚಿತ ವ್ಯಕ್ತಿಯ ಶವ ಇರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅಪರಿಚಿತ ವ್ಯಕ್ತಿಯ ಶವವಾಗಿದ್ದು, ಸುಮಾರು 40 ರಿಂದ 45 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ಶವದ ಮೈಮೆಲೆ ಸಿಮೆಂಟ್ ಬಣ್ಣದ ಧರಿಸಿರುತ್ತಾರೆ. ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಈ ವ್ಯಕ್ತಿಯ ಪತ್ತೆಗಾಗಿ  08177-273201, 08172-268845 ಕ್ಕೆ ಸಂಪರ್ಕಿಸುವುದು.

No comments: