* * * * * * HASSAN DISTRICT POLICE

Tuesday, April 10, 2018

PRESS NOTE : 10-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 10-04-2018

ಬೈಕ್ಗಳ ಮುಖಾ-ಮುಖಿ ಡಿಕ್ಕಿ, ಬೈಕ್ ಸಾವರ ಸಾವು : ದಿನಾಂಕ: 09-04-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ವಡ್ಡರಹಳ್ಳಿ ಗ್ರಾಮದ ವಾಸಿ ಶ್ರೀ ರವಿನಂದಕುಮಾರ್, ರವರು ರಾಮನಾಥಪುರಕ್ಕೆ ಹೋಗಲು ಸ್ನೇಹಿತರಾದ ಶ್ರೀ ರವಿಕುಮಾರ್, ಬಾಬ್ತು ಕೆಎ-21, ಜೆ-5813ರ ಎಕ್ಸ್ಸಿಡಿ ಬೈಕ್ನಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರದ ಹೆಚ್.ಪಿ. ತೊಂಟದಾರ್ಯ ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ರವಿನಂದಕುಮಾರ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ರವಿನಂದಕುಮಾರ್ ಬಿನ್ ರಂಗಯ್ಯ, 35ವರ್ಷ, ವಡ್ಡರಹಳ್ಳಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ರವರು ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಕಾಳಿಪ್ರಸಾದ್, ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ : ದಿನಾಂಕ: 03-04-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಹಾಸನದ ತಣ್ಣೀರುಹಳ್ಳದ ವಾಸಿ ಹಾಲುವಾಗಿಲು ರವರ ಮಗಳು ಶ್ರೀಮತಿ ಪವಿತ್ರಾ ಕೋಂ ಲೇಟ್ ನಾಗರಾಜು, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಪವಿತ್ರಾಳ, ತಂದೆ ಶ್ರೀ ಪಾಪೇಗೌಡ, ರವರು ದಿನಾಂಕ: 09-04-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಪವಿತ್ರಾ ಕೋಂ ಲೇಟ್ ನಾಗರಾಜು, 30 ವರ್ಷ,  5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.


No comments: