* * * * * * HASSAN DISTRICT POLICE

Friday, April 6, 2018

PRESS NOTE : 06-04-2018




                               ಪತ್ರಿಕಾ ಪ್ರಕಟಣೆ             ದಿನಾಂಕ: 06-04-2018

ಜಿಲ್ಲೆಯ ಹಾಸನ, ಚನ್ನರಾಯಪಟ್ಟಣ, ಬೇಲೂರು ಅಕಲಗೂಡು ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ & ಸಾಗಿಸುತ್ತಿದ್ದ 7 ಜನರ ಬಂಧನ, ಬಂಧಿತರಿಂದ ಸುಮಾರು 11,948/- ಬೆಲೆಯ ಮದ್ಯ ವಶ:
ಪ್ರಕರಣ-01 :  ದಿನಾಂಕ: 05-04-2018 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳೀ, ಮಾರನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ರಮೇಶ್, ರವರ ಬಾಬ್ತು ಜಮೀನಿನಲ್ಲಿ ಇಟ್ಟಿಗೆ ಗೂಡಿನ ಬಳಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ದೇವರಾಜ್, ಎಎಸ್ಐ, ಗೊರೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾ ಕೇಳಲಾಗಿ ಶ್ರೀ ರಮೇಶ್ ಬಿನ್ ಲೇಟ್ ಹೊನ್ನೇಗೌಡ, 60 ವರ್ಷ, ಮಾರಾನಾಯಕನಹಳ್ಳಿ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,200/- ಬೆಲೆಯ ಅಮಾನತ್ತುಪಡಿಸಿಕೊಂಡು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 :  ದಿನಾಂಕ: 05-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಗಾಡೇನಹಳ್ಳಿ-ಶಾಂತಿಗ್ರಾಮ ರಸ್ತೆ ಬದಿಯಲ್ಲಿರುವ ದಯಾನಂದ ರವರ ಬಾಬ್ತು ಡಾಬಾ ಹೋಟೆಲ್ ಹತ್ತಿರ ಮುಂಭಾಗದಲ್ಲಿ ಯಾರೋ ಒಬ್ಬ ವ್ಯಕ್ತಿ ಮದ್ಯ ಸಾಗಿಸುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ನವೀನ್ಕುಮಾರ್ ಬಿನ್ ಜಾನ್ಪ್ರಕಾಶ್, 22 ವರ್ಷ, ಗಾಡೇನಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,463/- ಬೆಲೆಯ ಮದ್ಯವನ್ನು ಅಮಾತ್ತುಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-03 :  ದಿನಾಂಕ: 05-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದಡದಹಳ್ಳಿ ಗ್ರಾಮದ ವಾಸಿ ಶ್ರೀ ಗೋಪಾಲ ರವರ ಬಾಬ್ತು ಅಂಗಡಿಯ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎಸ್.ಕೆ. ಕೃಷ್ಣ, ಶಾಂತಿಗ್ರಾಮ, ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಗೋಪಾಲ ಬಿನ್ ಜವರೇಗೌಡ, 45ವರ್ಷ, ದಡದಹಳ್ಳಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,260/-ಅಮಾನತ್ತುಪಡಿಸಿಕೊಂಡು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-04 : ದಿನಾಂಕ: 05-04-2018 ರಂದು ಸಂಜೆ 4-00ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಆದಿಹಳ್ಳಿ ಗ್ರಾಮದ ವಾಸಿ ಶ್ರೀ ತೋಂಟೇಶ್, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಯೋಗಾಂಬರಂ, ಎಎಸ್ಐ, ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಶ್ರೀ ಎಲ್.ಹೆಚ್. ತೋಂಟೇಶ್ ಬಿನ್ ಎಲ್. ಹೆಚ್. ಪುಟ್ಟೇಗೌಡ, 45 ವರ್ಷ, ಆದಿಹಳ್ಳಿ ಗ್ರಾಮ,  ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 2,500/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪ್ರಕರಣ-05 :  ದಿನಾಂಕ; 05-04-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ವಾಸಿ ಶ್ರೀ ಲೋಕೇಶ್, ರವರ ಬಾಬ್ತು ಮನೆಯ ಜಗುಲಿಯ ಮೇಲೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎನ್, ವಿಜಯಪ್ರಕಾಶ್, ಪಿಎಸ್ಐ, ಹಳೇಬೀಡು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಲೋಕೇಶ್ ಬಿನ್ ಕರಿಯಪ್ಪ, 52 ವರ್ಷ, ಅಂಗಡಿಹಳ್ಳಿ ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1.028/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕ್ರಮ ಕೈಗೊಂಡಿರುತ್ತೆ.

ಪ್ರರಕಣ-06 : ದಿನಾಂಕ: 06-04-2018 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಅಮೃತ ಬಾರ್ ಪಕ್ಕ ಬಿ.ಎಂ. ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ವಿನೋದ್ರಾಜ್, ಎಸ್.ಪಿ. ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಶಿವಶಂಕರ್ ಬಿನ್ ಕೃಷ್ಣೇಗೌಡ, 28 ವರ್ಷ, ಗೋವಿನಕೆರೆ ಗ್ರಾಮ, ಬಾಗೂರು ಹೋಗಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ  3485/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಪ್ರಕರಣ-07 :  ದಿನಾಂಕ: 05-04-2018 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಹಂಪಾಪುರ ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ ಕು|| ಮಧು ಎಂ.ಸಿ. ಅರಕಲಗೂಡು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವಳ ಹಿಡಿದು ಹೆಸರು ವಿಳಾಸ ಕೇಳಲಾಗಿ ಮಂಜಮ್ಮ ಕೋಂ ದೊಡ್ಡೇಗೌಡ, 55 ವರ್ಷ, ಹಂಪಾಪುರ ಗ್ರಾಮ ಎಂದು ತಿಳಿಸಿದವಳನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದದ್ದ 1,012/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
               
ಅಪರಿಚಿತ ವಾಹನ ಡಿಕ್ಕಿ ಪಾದಾಚಾರಿ ಸಾವು : ದಿನಾಂಕ: 02-04-2018 ರಂದು ಬೆಳಗಿನ ಜಾವ 05-30 ಗಂಟೆ ಸಮಯದಲ್ಲಿ ಹಾಸನ ಸಂತೆಪೇಟೆ, ಅಂಬ್ಭೆಡ್ಕರ್ ನಗರ ವಾಸಿ ಫಯಾಜ್ ಶರೀಫ್ ರವರು ಹಾಸನ ಆರ್.ಎಂ.ಸಿ. ಯಾಡರ್್ನ ನ್ಯಾಷನಲ್ ಪೋಟೊಓ ಟ್ರೇಡಸರ್್ ಹತ್ತಿರ ಬಿ.ಎಂ. ರಸ್ತೆಯ ಬಲಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ರಸ್ತೆಯ ಮೇಲೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಫಯಾಜ್ ಶರೀಫ್ ಬಿನ್ ಅಹಮದ್ ಶರೀಫ್, 23 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ  ಸಹೋದರರಾದ ಶ್ರೀ ಶಫೀ ಅಹಮದ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ :       ದಿನಾಂಕ: 04-04-2018 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಗ್ಯಮ್ಮನ ಬಡಾವಣೆ ವಾಸಿ ವೆಂಕಟೇಗೌಡ ರವರ ಮಗಳು ಅಶ್ವಿನಿ ಮನೆಯಿಂದ ಟೈಲರ್ ಅಂಗಡಿಗೆ ಬಟ್ಟೆ ಕೊಟ್ಟು ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಅಶ್ವಿನಿ ಬಿ.ವಿ. ರವರ ತಂದೆ ಶ್ರೀ ವೆಂಕಟೇಗೌಡ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಅಶ್ವಿನಿ ಬಿ.ವಿ. ಬಿನ್ ವೆಂಕಟೇಗೌಡ, 26 ವರ್ಷ, 5'3'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟಾಪ್ ಮತ್ತು ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೊನ್ ನಂ. 08176-252333 ಕ್ಕೆ ಸಂಪಕರ್ಿಸುವುದು.

No comments: