* * * * * * HASSAN DISTRICT POLICE

Wednesday, April 4, 2018

PRESS NOTE : 04-04-2018


ಪತ್ರಿಕಾ ಪ್ರಕಟಣೆ             ದಿನಾಂಕ:04-04-2018

ಜಿಲ್ಲೆಯಲ್ಲಿ ಹಾಸನ, ಬೇಲೂರು, ಚನ್ನರಾಯಪಟ್ಟಣ ತಾಲ್ಲೂಕುಗಳ ಹೋಬಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ ಸುಮಾರು 9,972/- ಬೆಲೆಯ ಮದ್ಯ ವಶ:
ಪ್ರಕರಣ-01 : ದಿನಾಂಕ: 03-04-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಗೊರೂರು ರಸ್ತೆ ದರ್ಶನ್ ಡಾಬದಲ್ಲಿ ಶ್ರೀ ಸುನಿಲ್, ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎಂ.ಪಿ. ದೇವರಾಜ್, ಹೆಚ್ಸಿ-50, ಗೊರೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸುನಿಲ್ ಬಿನ್ ರಾಮೇಗೌಡ, 26 ವರ್ಷ, ಅರೇಕಲ್ಲು ಹೊಸಳ್ಳಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,182/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ-02 :  ದಿನಾಂಕ: 03-04-2018 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಮೇಳಗೊಡು ಗ್ರಾಮದ ವಾಸಿ ಶ್ರೀ ಶಿವರಾಮ್, ರವರ ಬಾಬ್ತು ಖಾಲಿ ನಿವೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಬೋಜಪ್ಪ, ಪಿಎಸ್ಐ, ದುದ್ದ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ವಿಠಲ ಬಿನ್ ರಂಗೇಗೌಡ, 45 ವರ್ಷ, ಮೆಳಗೋಡು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,463/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರರಕಣ-03 :  ದಿನಾಂಕ: 03-04-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಕರಿಕಟ್ಟೇಹಳ್ಳಿ ಗ್ರಾಮದ ವಾಸಿ ಶ್ರೀ ಜಯರಾಮ, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ವಿಜಯಕೃಷ್ಣ, ಪಿಎಸ್ಐ, ಹಳೇಬೀಡು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಯರಾಮ ಬಿನ್ ಮೂಡಲಗಿರಿಗೌಡ, ಕರೀಕಟ್ಟೆಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,783/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ-04 :  ದಿನಾಂಕ: 03-04-2018 ರಂದು ರಾತ್ರಿ 8-05 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಗೌಡಗೆರೆ ಗ್ರಾಮ, ಅತ್ತಿಹಳ್ಳಿ ರಸ್ತೆಯಲ್ಲಿರುವ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಎಸ್.ಪಿ. ವಿನೋದ್ ರಾಜ್, ಚನ್ನರಾಯಪಟ್ಟಣ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸತೀಶ್ @ ಪಾಪು ಬಿನ್ ದೇವರಾಜು, 21 ವರ್ಷ, ಗೌಡಗೆರೆ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 2,700/- ಬೆಲೆಯ ಮದ್ಯವನ್ನು ಅಮಾತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ-05 : ದಿನಾಂಕ: 03-04-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಶ್ರೀ ಮಧು, ಪಿಸಿ-360, ಮತ್ತು ಪಿಸಿ-447 ದೀಕ್ಷಿತ್, ರವರು ಆಲೂರು ಪಟ್ಟಣದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಲೂರು ಪಟ್ಟಣದ ಕೊನೆಪೇಟೆ ವೃತ್ತದಲ್ಲಿ ಯಾರೋ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ
ಮೇರೆಗೆ  ಸ್ಥಳಕ್ಕೆ ಹೋಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶಿವಕುಮಾರ್ ಬಿನ್ ಚಲುವೇಗೌಡ, 40ವರ್ಷ, ಹಳೇಕೋಟೆ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,684/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ-06 :  ದಿನಾಂಕ: 03-04-2018 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಇಬ್ದಾಣಿ ಗ್ರಾಮದ ನಂಜೇಶ್, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಬಿ.ಆರ್. ಗೌಡ, ಪಿಎಸ್ಐ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ನಂಜೇಶಯ್ಯ ಬಿನ್ ಸೋಮಶೇಖರಯ್ಯ, 48 ವರ್ಷ, ಇಬ್ದಾಣಿ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 1160/-  ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ :  ದಿನಾಂಕ: 02-04-2018 ರಂದು ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಿರಗುಪ್ಪೆ ಗ್ರಾಮದ ನಾರಾಯಣಸ್ವಾಮಿ ರವರ ಮಗಳು ದಿವ್ಯ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ದಿವ್ಯ ರವರ ತಾಯಿ ಶ್ರೀಮತಿ ಯಶೋಧಮ್ಮ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ದಿವ್ಯ ಬಿನ್ ನಾರಾಯಣಸ್ವಾಮಿ, ಗೋಧಿಬಣ್ಣ, ದುಂಡುಮುಖ, 5' ಅಡಿ ಎತ್ತರ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ್  ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ಹಳೇಬೀಡು ಠಾಣೆ ಫೋನ್ ನಂ. 08177-273201 ಕ್ಕೆ ಸಂಪಕರ್ಿಸುವುದು.

ಅಪರಿಚಿತ ವಾಹನ ಡಿಕ್ಕಿ ಅಪರಿಚಿತ ಹೆಂಗಸು ಸಾವು : ದಿನಾಂಕ: 02-04-2018 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಎನ್ಹೆಚ್-75 ಬಿ.ಎಂ. ರಸ್ತೆ, ನೇರಲಕೆರೆ ಗ್ರಾಮದ ಅಬ್ದುಲ್ ಸಾಹೇಬ್ ರವರ ಜಮೀನಿನ ನೇರದಲ್ಲಿ ಅಪರಿಚಿತ ಹೆಂಗಸಿಗೆ ಯಾವುದೋ ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ. ಅಪಘಾತಕ್ಕೀಡಾಗಿದ್ದ ಅಪರಿಚಿತ ಹೆಂಗಸು ತೀವ್ರ ಸ್ವರೂಪದ ರಕ್ತಗಾಯಳಾಗಿ  ಸುಮಾರು 45 ರಿಂದ 50 ವರ್ಷ ವಯಸ್ಸಿನ ಮಹಿಳೆಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಪರಿಚಿತ ಮಹಿಳೆಯು ಕೆಂಪು ಬಿಳಿ ಹೂವಿರುವ ಸೀರೆ, ಕೇಸರಿ ಬಣ್ಣದ ರವಿಕೆ ಧರಿಸಿರುತ್ತಾರೆ. ಗುಂಗುರು ತಲೆಕೂದಲು ಹೊಂದಿದ್ದು, ದುಂಡುಮುಖ, ಎಣ್ಣೆಗೆಂಪು ಬಣ್ಣದವರಾಗಿರುತ್ತಾರೆ ಇತ್ಯಾದಿ  ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಬೈಕ್ ಡಿಕ್ಕಿ ಬೈಕ್ ಸವಾರನ ಸಾವು :   ದಿನಾಂಕ: 02-04-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಎಬಿಎಂಹಳ್ಳಿ ಗ್ರಾಮದ ಕೋಮಲೇಶ್ ಎಂ.ವಿ. ರವರ ಬಾಬ್ತು  ಕೆಎ-45-ಕೆ-7900 ಬೈಕಿನಲ್ಲಿ ಮನೆಯಿಂದ ಮುಸವತ್ತೂರು ಗ್ರಾಮಕ್ಕೆ ಮರಕೆಲಸಕ್ಕೆ ಹೋಗಿ ಮಲ್ಲಿಪಟ್ಟಣ ಕೆನರಾ ಬ್ಯಾಂಕಿನ ಮುಂದೆ ರಸ್ತೆ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-14-ಇಸಿ-5661 ರ ಹೊಂಡಾ ಡಿಯೋ ಬೈಕಿನ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮದ್ಯೆ  ಕೋಮಲೇಶ ಎಂ.ವಿ. ಬಿನ್ ಯೋಗಾಚಾರ್, 35 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಯೋಗಾಚಾರ್ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: