* * * * * * HASSAN DISTRICT POLICE

Monday, April 30, 2018

PRESS NOTE : 29-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 29-04-2018.

ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ ಸುಮಾರು 3600/- ನಗದು ವಶ: ದಿನಾಂಕ: 28-04-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಕಣದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜೂಜಾಟಾಡುತ್ತಿದ್ದಾರೆಂದು ಶ್ರೀ ಸಿದ್ದರಾಜು, ಪಿಎಸ್ಐ, ಅರೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸತೀಶ್ ಚಂದ್ರ ಬಿನ್ ಕೆ.ಆರ್. ರಾಮಕೃಷ್ಣ, 29 ವರ್ಷ, ಕುಪ್ಪಗೋಡು ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು 2) ಸೈಯಾದ್ ಇಬ್ರಾಹಿಂ ಬಿನ್ ಸೈಯಾದ್ ಅಹ್ಮದ್, 39 ವರ್ಷ, ಆಂಜನೇಯ ದೇವಸ್ಥಾನದ ಹತ್ತಿರ ಗೋಣಿಬೀಡು ಹೋಬಳಿ, ಮೂಡಿಗೆರೆ ತಾಲ್ಲೂಕು 3) ಆನಂದ ಬಿನ್ ಕೃಷ್ಣಪ್ಪ, 36 ವರ್ಷ, ಕಮ್ಮರಗೋಡು ಗ್ರಾಮ, ಗೋಣಿಬೀಡು ಹೋಬಳಿ, ಮೂಡಿಗೆರೆ ತಾಲ್ಲೂಕು 4) ಸುನೀಲ್ಕುಮಾರ ಬಿನ್ ಬಸವಯ್ಯ, 28 ವರ್ಷ, ಮಾಡಗೋಡು ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,600/- ನಗದನ್ನು ಅಮಾನತ್ತುಪಡಿಸಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಗಂಡಸು ಕಾಣೆ : ದಿನಾಂಕ: 22-04-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಮುರೇಹಳ್ಳಿ ಗ್ರಾಮದ ವಾಸಿ ಶ್ರೀ ಅಣ್ಣಪ್ಪ, ರವರು ಪಿಕ್-ಆಪ್ ವಾಹನದ ಕೀ ಕಳೆದುಹೋಗಿದ್ದು, ಹೊಸ ಕೀಯನ್ನು ಮಾಡಿಸಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮೆನಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಅಣ್ಣಪ್ಪ, ರವರ ಪತ್ನಿ ಶ್ರೀಮತಿ ಶೋಭ, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ಅಣ್ಣಪ್ಪ ಬಿನ್  ಲೇಟ್ ಹುಚ್ಚಯ್ಯ, 36 ವರ್ಷ, 5'8  ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಶರ್ಟ್, ನೀಲಿ ಜೀನ್ಸ್ ಫ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08177-221342 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ : ದಿನಾಂಕ: 27-04-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಮಲಿಯಪ್ಪನಕೊಪ್ಪಲು ಗ್ರಾಮದ ವಾಸಿ ಶ್ರೀ ಶಿವಮೂರ್ತಿ, ರವರ ಮಗಳು ಕು|| ಪ್ರೀತಿ, ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಪ್ರೀತಿಯ ತಂದೆ ಶ್ರೀ ಶಿವಮೂರ್ತಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪ್ರೀತಿ ಬಿನ್ ಶಿವಮೂರ್ತಿ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ  08177-273201 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ :  ದಿನಾಂಕ: 01-03-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಚೀಕನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣ, ರವರ ಮಗಳು ಕು|| ಕೀರ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಡಂತ್ಯಾರು ಸೆಕ್ರೀಡ್ ಆಟ್ಸರ್ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕೀರ್ತಿಯ ತಂದೆ ಶ್ರೀ ಕೃಷ್ಣ, ರವರು ದಿನಾಂಕ: 28-04-2018 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕು|| ಕೀರ್ತಿ ಬಿನ್ ಕೃಷ್ಣ, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-221342 ಕ್ಕೆ ಸಂಪರ್ಕಿಸುವುದು.

PRESS NOTE : 28-04-2018


ಪತ್ರಿಕಾ ಪ್ರಕಟಣೆ               ದಿನಾಂಕ: 28-04-2018.

ಜೂಜಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ ಸುಮಾರು 2050/- ನಗದು ವಶ : ದಿನಾಂಕ: 27-04-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ಪಟ್ಟಣದ ಚಿಕ್ಕ ಮಸೀದಿ ರಸ್ತೆ, ಪೇಟೆ ಬೀದಿಯಲ್ಲಿರುವ ಅಪೂರ್ವ ಅಂಗಡಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಪಿ. ಮೋಹನ್ಕೃಷ್ಣ, ಪಿಎಸ್ಐ ಹೊಳೆನರಸೀಪುರ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ರಂಗಶೆಟ್ಟಿ, 33 ವರ್ಷ, ಕಂಚುಗಾರರ ಬೀದಿ, ಹೊಳೆನರಸೀಪುರ ನಗರ 2) ಮಿರ್ಜಾ ಕಬೀರ್ ಹುಸೇನ್ ಬಿನ್ ಮಿರ್ಜಾ ಮಸೀದ್ ಆಲಿ. 26 ವರ್ಷ, ಹೊಳೆನರಸೀಪುರ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2050/-ನಗದನ್ನು ಅಮಾನತ್ತುಪಡಿಸಿಕೊಂಡು ದಸ್ತಗಿರಿಮಾಡಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು: ದಿನಾಂಕ: 27-04-2018 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಸೋಂಪುರ ಗ್ರಾಮದ ವಾಸಿ ಶ್ರೀ ವೆಂಕಟೇಶ್,  ರವರು ಪೋಸ್ಟ್ ಮ್ಯಾನ್ ಆಗಿದ್ದು, ರವರ ನೊಂದಣಿಯಾಗದ ಹೊಸ ಬೈಕ್ನಲ್ಲಿ ಹೋಗತ್ತಿದ್ದಾಗ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ರುದ್ರಪಟ್ಟಣ ಹ್ಯಾಂಡ್ ಪೋಸ್ಟ್, ಸಾಕಮ್ಮ ಮೋರಿ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಅದೇ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್, ರವರನ್ನು ನೋಡಿ ಬೈಕ್  ನಿಲ್ಲಿಸಿ ಪೋಸ್ಟ್ ಕೊಡಲು ಹೋದಾಗ ಹಿಂಬದಿಯಿಂದ ಬಂದ  ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ವೆಂಕಟೇಶ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೊಣನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಕಲಗೂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ವೆಂಕಟೇಶ್ ಬಿನ್  ಲೇಟ್ ಕೆಂದಯ್ಯ, 42 ವರ್ಷ, ಸೋಂಪುರ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಚಂದ್ರಶೇಖರ್, ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ : ದಿನಾಂಕ: 27-04-2018 ರಂದು ಬೆಳಗಿನಜಾವ 3-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಶೆಟ್ಟಿಹಳ್ಳಿ ಗ್ರಾಮದ ವಾಸಿ ಶ್ರೀ ಕಾಂತರಾಜು, ರವರ ಮಗಳು ಕು|| ಎಸ್.ಕೆ. ವರ್ಷ, ಬೇಲೂರಿನ ಬಿ.ಜಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ , ಪತ್ತೆಮಾಡಿಕೊಡಬೇಕೆಂದು ಕು|| ಎಸ್.ಕೆ. ವರ್ಷಳ ಮಾವ ಶ್ರೀ ಬಸವರಾಜು, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಎಸ್.ಕೆ. ವರ್ಷ ಬಿನ್ ಕಾಂತರಾಜು, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪುಬಣ್ಣ ಮತ್ತು ನೀಲಿ ಬಣ್ಣದ ಪ್ರಾಕ್ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08177-222444  ಕ್ಕೆ ಸಂಪರ್ಕಿಸುವುದು.

Friday, April 27, 2018

PRESS NOTE : 27-04-2018


ಪತ್ರಿಕಾ ಪ್ರಕಟಣೆ        ದಿನಾಂಕ: 27-04-2018.

ಹುಡುಗಿ ಕಾಣೆ :  ದಿನಾಂಕ: 18-04-2018 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಜೇನುಕಲ್ಸಿದ್ದಾಪುರ ಗ್ರಾಮದ ಮಂಜುನಾಥ ರವರ ಮಗಳು ಸಂಧ್ಯಾ ಕಡೂರಿಗೆ ಅಕ್ಕನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸಂದ್ಯಾ ಜೆ.ಎಂ. ರವರ ತಂದೆ ಶ್ರೀ ಮಂಜುನಾಥ ರವರು ದಿನಾಂಕ: 26-04-2018 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಸಂದ್ಯಾ ಜೆ.ಎಂ. ಬಿನ್ ಮಂಜುನಾಥ, 18 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಗಂಡಸಿ ಠಾಣೆ ಫೋನ್ ನಂ. 08174-220630 ಕ್ಕೆ ಸಂಪರ್ಕಿಸುವುದು.

Wednesday, April 25, 2018

ಶ್ರೀ ನಿಲಬ್ ಕಿಶೋರ್, ಐ.ಪಿ.ಎಸ್. ರವರು ಕರ್ನಾಟಕ ವಿಧಾನಸಭಾ ಚುನಾವಣೆ -2018 ಪ್ರಯುಕ್ತ ಪೊಲೀಸ್ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ


ಪತ್ರಿಕಾ ಪ್ರಕಟಣೆ                                                          ದಿನಾಂಕ 25-04-2018

ಶ್ರೀ ನಿಲಬ್ ಕಿಶೋರ್, ಐ.ಪಿ.ಎಸ್. ರವರು  ಕರ್ನಾಟಕ ವಿಧಾನಸಭಾ ಚುನಾವಣೆ -2018 ಪ್ರಯುಕ್ತ ಪೊಲೀಸ್ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಅಥಿತಿಗೃಹ, ಹೊಸಲೈನ್ ರಸ್ತೆ, ಡಿ.ಎ.ಆರ್. ಮೈದಾನ, ಹಾಸನ ಇಲ್ಲಿ ಇವರ ಕಛೇರಿ ಇದ್ದು ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಬಹುದಾಗಿರುತ್ತದೆ.

ಕಛೇರಿ ದೂರವಾಣಿ ಸಂಖ್ಯೆ : 08172267604
ಮೊಬೈಲ್ ದೂರವಾಣಿ ಸಂಖ್ಯೆ : 09115500001
ಭೇಟಿ ಮಾಡಬೇಕಾದ ಸಮಯ ಬೆಳಿಗ್ಗೆ 8.30 ರಿಂದ 9.30 ಗಂಟೆವರೆಗೆ


PRESS NOTE : 25-04-2018


                               ಪತ್ರಿಕಾ ಪ್ರಕಟಣೆ             ದಿನಾಂಕ : 25-04-2018.

ಹುಡುಗಿ ಕಾಣೆ :       ದಿನಾಂಕ: 24-04-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಗದ್ದೆಬಿಂಡೇನಹಳ್ಳಿ ಗ್ರಾಮದ ಗೋಪಾಲ ಬಿ.ಕೆ. ರವರ ಮಗಳು ಬಿ.ಜಿ. ನಿಶ್ಚಿತ ಎಂದಿನಂತೆ ಚನ್ನರಾಯಪಟ್ಟಣದ ಆದಿಚುಂಚನಗಿರಿ ಕಾಲೇಜಿಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಬಿ.ಜಿ. ನಿಶ್ಚಿತ ರವರ ತಂದೆ ಶ್ರೀ ಗೋಪಾಲ ಬಿ.ಕೆ. ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಬಿ.ಜಿ.ನಿಶ್ಚಿತ ಬಿನ್ ಗೋಪಾಲ ಬಿ.ಕೆ., 20 ವರ್ಷ,5'6'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08172-252333 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ :     ದಿನಾಂಕ: 23-04-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಸವಾಸಿಹಳ್ಳಿ ಗ್ರಾಮದ ಜಗದೀಶ ರವರ ಮಗಳು ಲಾವಣ್ಯ ಕೆ.ಬಿ. ತನ್ನ ಮದುವೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಹಗರೆಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಲಾವಣ್ಯ ರವರ ತಾಯಿ ಶ್ರೀಮತಿ ಸವಿತ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಲಾವಣ್ಯ ಬಿನ್ ಜಗದೀಶ, 19 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಳೇಬೀಡು ಠಾಣೆ ಫೋನ್ ನಂ. 08177-273201 ಕ್ಕೆ ಸಂಪರ್ಕಿಸುವುದು.  


Tuesday, April 24, 2018

PRESS NOTE 24-04-2018




                            ಪತ್ರಿಕಾ ಪ್ರಕಟಣೆ                    ದಿನಾಂಕ: 24-04-2018.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 1,151/- ಬೆಲೆಯ ಮದ್ಯ ವಶ:
        ದಿನಾಂಕ: 24-04-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಬೆಳವಾಡಿ ಗ್ರಾಮದಲ್ಲಿ ಶ್ರೀ ಪ್ರಕಾಶ್, ಹೆಚ್ ಸಿ-68, ರವರು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಜಗದೀಶ್, ರವರ ಮನೆಯ ಮುಂದೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಗದೀಶ್ ಬಿನ್ ದ್ಯಾವೇಗೌಡ, 32 ವರ್ಷ, ಎಸಿ ಗೂಡ್ಸ್ ಚಾಲಕ, ಬೆಳವಾಡಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,151/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು , ಒಬ್ಬರಿಗೆ ಗಾಯ:
ದಿನಾಂಕ: 2-04-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಬಿಕ್ಕೋಡು ಗ್ರಾಮದ ವಾಸಿ ಶ್ರೀ ರಂಗಸ್ವಾಮಿ ರವರ ಬಾಬ್ತು ಕೆಎ-18, ಕೆ-1474 ರ ಬೈಕ್ ನಲ್ಲಿ ಸಂಬಂಧಿಕರಾದ ಶ್ರೀ ಮೋಹನ್. ರವರೊಂದಿಗೆ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಕೋಗಿಲೆಮನೆ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-09, ಎನ್-3445 ರ ಆಲ್ಟೋ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರಂಗಸ್ವಾಮಿ & ಶ್ರೀ ಮೋಹನ್, ರವರುಗಳು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ರಂಗಸ್ವಾಮಿ ಬಿನ್ ಗುರಪ್ಪಗೌಡ, 24 ವರ್ಷ,  ಬಿಕ್ಕೋಡು ಗ್ರಾಮ, ಬಿಕ್ಕೋಡು ಹೋಬಳಿ, ಬೇಲೂರು ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ತಮ್ಮನಾದ ಶ್ರೀ ಸಂತೋಷ್, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗ ಕಾಣೆ
ದಿನಾಂಕ: 17-04-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನದ ಬಾಗಡೇರಕೊಪ್ಪಲು ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಮಗ ಶ್ರೀ ರಕ್ಷಿತ, ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಂಗಡಿಯ ಕಲೆಕ್ಷನ್ ಹಣವನ್ನು ಕೊಟ್ಟು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಬೇಕೆಂದು ಶ್ರೀ ರಕ್ಷಿತನ ತಂದೆ ಶ್ರೀ ರಾಜೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗ ಚಹರೆ: ಶ್ರೀ ರಕ್ಷಿತ ಬಿನ್ ರಾಜೇಗೌಡ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-272260 ಕ್ಕೆ ಸಂಪರ್ಕಿಸುವುದು.