* * * * * * HASSAN DISTRICT POLICE

Saturday, March 31, 2018

PRESS NOTE : 29-03-2018


ಪತ್ರಿಕಾ ಪ್ರಕಟಣೆ             ದಿನಾಂಕ:29-03-2018

ಜೂಜಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ ಸುಮಾರು 2,110/- ನಗದು ವಶ:  ದಿನಾಂಕ: 28-03-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಹಾಸನದ ಗೋಕುಲ್ ಹೋಟೇಲ್ ಹಿಂಭಾಗದ ರಸ್ತೆಯಲ್ಲಿರುವ ಒಂದು ಮರದ ಪಕ್ಕದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಸುರೇಶ್, ಪಿ. ಹಾಸನ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಹರ್ಷ ಬಿನ್ ನಾಗರಾಜು, 40 ವಷ್, ವಿಜಯನಗರ, ಹಾಸನ 2) ನವೀನ ಬಿನ್ ಅಣ್ಣೇಗೌಡ, 50 ವರ್ಷ, 9 ನೇ ಕ್ರಾಸ್, ವಿದ್ಯಾನಗರ, ಹಾಸನ 3) ಅಣ್ಣಸ್ವಾಮಿ ಬಿನ್ ರಂಗೇಗೌಡ, 54 ವರ್ಷ, ಹೇಮಾವತಿ ನಗರ ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2,110/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 2,155/- ಬೆಲೆಯ ಮದ್ಯ ವಶ: ದಿನಾಂಕ: 28-03-2018 ರಂದು ಸಂಜೆ 6-30 ಗಂಟೆಗೆ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಕು|| ಮಧು, ಪಿಎಸ್ಐ ಅರಕಲಗೂಡು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಯೋಗೇಶ್ ಬಿನ್ ವೆಂಕಟರಾಮು, 38 ವರ್ಷ, ಮಲ್ಲಿಪಟ್ಟಣ ಗ್ರಾಮ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 2,155/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಕಾರಿನ ನಿಯಂತ್ರಣ ತಪ್ಪಿ, ಒಂದು ಸಾವು ನಾಲ್ವರಿಗೆ ಗಾಯ : ದಿನಾಂಕ: 28-03-2018 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಬಳ್ಳಾರಿ ಜಿಲ್ಲೆ, ಸಂಡೂರು ತಾಲ್ಲೂಕು, ಚೊರನೂರು ಹೋಬಳಿ, ಅಕ್ಕಮ್ಮನಹಳ್ಳಿ ಗ್ರಾಮದ ವಾಸಿಗಳಾದ ಶ್ರೀ ಅಂಜನಪ್ಪ, ಶ್ರೀ ನಾಗಪ್ಪ, ಶ್ರೀ ಆನಂದ, ಶ್ರೀ ಸಂದೀಪ, ಶ್ರೀ ಮಂಜುನಾಥ, ರವರುಗಳೊಂದಿಗೆ ಕೆಎ-18, ಬಿ-7134 ರ ಬಲೋರೋ ಪಿಕಪ್ ವಾಹನದಲ್ಲಿ ಕಾಮಗಾರಿ ಕೆಲಸಕ್ಕೆಂದು ಚಿಕ್ಕಮಗಳೂರಿನಿಂದ ಬೇಲೂರು ಹಗರೆ ಗ್ರಾಮಕ್ಕೆ ಹೋಗಲು ಬೇಲೂರು ತಾಲ್ಲೂಕು, ರಾಯಪುರ ಗ್ರಾಮದ ಶನಿದೇವರ ದೇವಸ್ಥಾನದ ಹತ್ತಿರ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಕಾರು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಶ್ರೀ ಆಂಜನಪ್ಪ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಉಳಿದ 4 ಜನರಿಗೆ ಪೆಟ್ಟಾದ ಗಾಯವಾಗಿದ್ದು ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆ ದಾಖಲಿಸಿದ್ದು, ಶ್ರೀ ಆಂಜನಪ್ಪ ಬಿನ್ ನಾಗಪ್ಪ, 24 ವರ್ಷ, ಅಕ್ಕಮ್ಮನಹಳ್ಳಿ ಗ್ರಾಮ, ಚೊರನೂರು ಹೋಬಳಿ, ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುತ್ತಾರೆಂದು ಗಾಯಾಳು ಶ್ರೀ ಮಂಜುನಾಥ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಪರಿಚಿತ ವಾಹನ ಡಿಕ್ಕಿ, ಬೈಕ್ ಸಾವರ ಸಾವು : ದಿನಾಂಕ: 28-03-2108 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕೆಂಕೆರೆಹಳ್ಳಿ ಗ್ರಾಮದ ವಾಸಿ ಶ್ರೀ ನವೀನ್, ರವರ ಬಾಬ್ತು ಕೆಎ-01 ಹೆಚ್ಡಬ್ಲ್ಯೂ 3134 ರ ಬೈಕಿಗೆ ಡೀಸೆಲ್ ತರಲು ಚಿಕ್ಕಪ್ಪನ ಮಗನಾದ ಶ್ರೀ ಶಿವನಂದನ್, ರವರೊಂದಿಗೆ ಬಾಣಾವರಕ್ಕೆ ಬಂದಿದ್ದು, ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಅರಸೀಕೆರೆ ತಾಲ್ಲೂಕು, ರೈಲ್ವೆ ಬ್ರಿಡ್ಜ್ ಹತ್ತಿರ ಬಾಣಾವರ-ಜಾವಗಲ್ ಎನ್ಹೆಚ್-234 ರ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾವುದೂ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿಯಾಗಿ ಮುಂದೆ ಹೋಗುತ್ತಿದ್ದ ಕೆಎ-13-ಟಿ-4877 ರ ಟ್ರ್ಯಾಕ್ಟರ್ನ ಕೆಳಗೆ ಸಿಲುಕಿ ಶ್ರೀ ಶಿವನಂದನ್ ಬಿನ್ ಜಗದೀಶ್, 19 ವರ್ಷ, ಕೆಂಕೆರೆಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು, ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ   ಸಂಬಂಧಿಕರಾದ  ಶ್ರೀ ರಕ್ಷಿತ್, ರವರು ಕಟೊಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ : ದಿನಾಂಕ: 24-03-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಬನ್ನೂರು ಗ್ರಾಮದ ವಾಸಿ ಶ್ರೀ ಪಾಂಡು, ರವರು ಮಗಳು ಕು|| ಕಾವ್ಯ ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕಾವ್ಯಳ ತಂದೆ ಶ್ರೀ ಪಾಂಡು, ರವರು ದಿನಾಂಕ: 23-03-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಕಾವ್ಯ ಬಿನ್ ಪಾಂಡು, 22 ವರ್ಷ. 5 ಅಡಿ ಎತ್ತರ, ಎಣ್ಣೆಗೆಂಪು ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿಧಾರ ಧರಿಸಿರುತ್ತಾಳೆ ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-226227 ಕ್ಕೆ ಸಂಪರ್ಕಿಸುವುದು.

No comments: