* * * * * * HASSAN DISTRICT POLICE

Tuesday, March 27, 2018

PRESS NOTE : 27-03-2018


ಪತ್ರಿಕಾ ಪ್ರಕಟಣೆ             ದಿನಾಂಕ:27-03-2018

ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು : ದಿನಾಂಕ: 26-03-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಚನ್ನೇಹಳ್ಳಿ ಗ್ರಾಮದ ವಾಸಿ ಶ್ರೀ ಹುಚ್ಚೇಗೌಡ@ತಮ್ಮಯ್ಯ, ರವರು ಸ್ನೇಹಿತರಾದ ಶ್ರೀ ಕೆ.ಬಿ. ಗಣೇಶ್, ರವರ ಬಾಬ್ತು ಕೆಎ-13 ಇಬಿ-7989 ರ ಟಿವಿಎಸ್ ವೀಗೋ ಬೈಕ್ನಲ್ಲಿ ಕೆಲಸದ ನಿಮಿತ್ತ ಚನ್ನರಾಯಪಟ್ಟಣ ತಾಲ್ಲೂಕು, ಮಟ್ಟನವಿಲೆ ಗ್ರಾಮಕ್ಕೆ ಹೋಗಿದ್ದು, ವಾಪಸ್ ಕೆಲಸ ಮುಗಿಸಿಕೊಂಡು ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಚಿಕ್ಕೋನಹಳ್ಳಿ ಗೇಟ್ ಹತ್ತಿರ ಎನ್ಹೆಚ್-75 ರ ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-44-5843ರ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹುಚ್ಚೇಗೌಡ @ ತಮ್ಮಯ್ಯ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಪುಣ್ಯ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಹುಚ್ಚೇಗೌಡ @ ತಮ್ಮಯ್ಯ ಬಿನ್ ಸಣ್ಣತಿಮ್ಮೇಗೌಡ, 55 ವರ್ಷ, ಚನ್ನೇಹಳ್ಳಿ ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಗಣೇಶ್, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 400/- ಬೆಲೆಯ ಮದ್ಯ ವಶ:

ದಿನಾಂಕ: 26-03-2018 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಮರಟಗೆರೆ ಗ್ರಾಮದ ಕೆರೆ ಏರಿಯ ಮೇಲೆ ಮದ್ಯವನ್ನು ಸಾಗಿಸುತ್ತಿದ್ದಾರೆಂದು ಶ್ರೀ ಅರುಣ್ಕುಮಾರ್, ಪಿಎಸ್ಐ, ಬಾಣಾವರ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ನಾಗರಾಜ ಬಿನ್ ಪುಟ್ಟಪ್ಪ, ಮರಟಗೆರೆ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 400/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಗಂಡಸು ಕಾಣೆ
  ದಿನಾಂಕ: 06-02-2018 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ನಗತರ್ಿ ಗ್ರಾಮದ ವಾಸಿ ಶ್ರೀ ತಮ್ಮೇಗೌಡ, ರವರು ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ತಮ್ಮೇಗೌಡ, ರವರ ಪತಿ ಶ್ರೀ ಮಂಜುಳ, ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ತಮ್ಮೇಗೌಡ ಬಿನ್ ಕುಳ್ಳೇಗೌಡ, 32 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08175-260100 ಕ್ಕೆ ಸಂಪರ್ಕಿಸುವುದು.

No comments: