* * * * * * HASSAN DISTRICT POLICE

Tuesday, March 27, 2018

PRESS NOTE : 23-03-2018


ಪತ್ರಿಕಾ ಪ್ರಕಟಣೆ        ದಿನಾಂಕ: 23-03-2018

ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ  5 ಜನರ  ಬಂಧನ, ಬಂಧಿತರಿಂದ ಸುಮಾರು 1888/- ಬೆಲೆಯ ಮದ್ಯ ವಶ:
ಪ್ರಕರಣ-01 : ದಿನಾಂಕ: 22-03-2018 ರಂದು ಸಂಜೆ 05-30 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಕಳಲೆ ಕೂಡಿಗೆ ಗ್ರಾಮದ ಒಂದು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ದಯಾನಂದ ಪಿಎಸ್ಐ, ಯಸಳೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ವೇಣು ಬಿನ್ ಗಣೇಶ 35 ವರ್ಷ, ಕಳಲೆ ಕೂಡಿಗೆ ಗ್ರಾಮ, ಯಸಳೂರು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 564/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 : ದಿನಾಂಕ: 22-03-2018 ರಂದು ಸಂಜೆ 06-30 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಕಳಲೆ ಕೂಡಿಗೆ ಗ್ರಾಮದ ಒಂದು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ದಯಾನಂದ ಪಿಎಸ್ಐ, ಯಸಳೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮುತ್ತೇಗೌಡ ಬಿನ್ ರುದ್ರೇಗೌಡ, 55 ವರ್ಷ, ಕಳಲೆ ಕೂಡಿಗೆ ಗ್ರಾಮ, ಯಸಳೂರು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 384/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-03 : ದಿನಾಂಕ: 22-03-2018 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ  ಅರಸೀಕೆರೆ ಟೌನ್ ಚಂದು ವೈನ್ ಷಾಪ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಯೋಗಾಂಜನಪ್ಪ ಪಿಎಸ್ಐ, ಅರಸೀಕೆರೆ ನಗರ ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ನವೀನ ಬಿನ್ ಪರಮೇಶ್ವರಪ್ಪ, 23 ವರ್ಷ, ಬಿದರೆ ಗ್ರಾಮ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 390/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-04 : ದಿನಾಂಕ: 22-03-2018 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹುಣಸಿನಕೆರೆ ಗ್ರಾಮ ಪರಮೇಶ ರವರ ಅಂಗಡಿ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಪ್ರಹ್ಲಾದ್ ಎಎಸ್ಐ, ಬೇಲೂರು ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಪರಮೇಶ ಹೆಚ್.ಇ ಬಿನ್ ಲೇಟ್ ಈರೇಗೌಡ 54 ವರ್ಷ, ಹುಣಸಿನಕೆರೆ ಗ್ರಾಮ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 261/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-05 : ದಿನಾಂಕ: 22-03-2018 ರಂದು ಸಂಜೆ 05-55 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು ಹುಣಸಿನಕೆರೆ ಗ್ರಾಮ ರಂಗನಾಥ ರವರ ಮನೆ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಪ್ರಹ್ಲಾದ್ ಎಎಸ್ಐ, ಬೇಲೂರು ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಂಗನಾಥ ಬಿನ್ ಸಗನೇಗೌಡ, 36 ವರ್ಷ, ಹುಣಸಿನಕೆರೆ ಗ್ರಾಮ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 289 ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಹೆಂಗಸು ಕಾಣೆ : ದಿನಾಂಕ: 21-03-2018 ರಂದು ಬೆಳಿಗ್ಗೆ 11-30 ಗಂಟೆಗೆ ಹೊಳೇನರಸೀಪುರ ತಾಲ್ಲೂಕು ಹಳ್ಳಿ ಮೈಸೂರು ಹೋಬಳಿ ಜೋಡಿಗುಬ್ಬಿ  ಗ್ರಾಮದ ವಾಸಿ  ಶ್ರೀ ಮೋಹನ ರವರ ಪತ್ನಿ ಶ್ರೀಮತಿ ಗೌರಮ್ಮರವರು ಎದೆ ನೋವು ಎಂದು ಎಂದು  ಹೇಳಿದ್ದು ಮೋಹನ ರವರು ಹೊಳೆನರಸೀಪುರ ಅಂಬೇಡ್ಕರ್  ವೃತ್ತದ ಸಮೀಪ ಇರುವ  ಹರ್ಷ ಕ್ಲಿನಿಕ್ ಗೆ ಕರೆದುಕೊಂಡು ಹೋಗುವ ಸಲುವಾಗಿ  ಎಟಿಎಂಗೆ ಹೋಗಿ ಬರುವುದರೊಳಗಾಗಿ  ಗೌರಮ್ಮ ಮನೆಯಲ್ಲಿರಲಿಲ್ಲ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುತ್ತಾರೆ. ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಗೌರಮ್ಮರವರ ಪತಿ ಶ್ರೀ ಮೋಹನರವರು ಕೊಟ್ಟ ದೂರಿನ ಮೇರೆಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ:  ಶ್ರೀಮತಿ ಗೌರಮ್ಮ  ಕೋಂ ಮೋಹನ 25 ವರ್ಷ 4.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೂಡಿದಾರ ಮತ್ತು ಮೇಲೆ ಕೆಂಪು ಬಣ್ಣದ ಸ್ವೆಟರ್ ಧರಿಸಿರುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹೊಳೇನರಸೀಪುರ ನಗರ ಠಾಣೆ ಫೋನ್ ನಂ. 08175-273333 ಕ್ಕೆ ಸಂಪರ್ಕಿಸುವುದು.


ಹುಡುಗಿ ಕಾಣೆ : ದಿನಾಂಕ:17-03-2018 ರಂದು ಬೆಳಿಗ್ಗೆ 08-30 ಗಂಟೆಗೆ ಬೇಲೂರು ತಾಲ್ಲೂಕು ಹಲ್ಮಿಡಿ ಗ್ರಾಮದ ಬಸವರಾಜುರವರ ಮಗಳು ಕುಮಾರಿ ಸಂಗೀತಾ  ಪ್ರಥಮ ವರ್ಷದ ಬಿ.ಕಾಂ ವಿದ್ಯಾಥರ್ಿನಿ ಚಿಕ್ಕಮಗಳೂರಿನ ತರಳಬಾಳು  ಜಗದ್ಗುರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.  ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುತ್ತಾರೆ. ಪತ್ತೆಮಾಡಿಕೊಡಬೇಕೆಂದು ಕುಮಾರಿ ಸಂಗೀತಾ ರವರ ತಂದೆ ಬಸವರಾಜುರವರು ದಿನಾಂಕ: 22-03-2018 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:  ಕುಮಾರಿ ಸಂಗೀತಾ  ಬಿನ್ ಬಸವರಾಜು 18 ವರ್ಷ 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಾಲೇಜಿನ ಸಮವಸ್ತ್ರ ಧರಿಸಿರುತ್ತಾರೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬೇಲೂರು ಠಾಣೆ ಫೋನ್ ನಂ. 08177-222444 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 18-03-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಶಿರಗೂರು ಗ್ರಾಮ, ಜಾಕನಹಳ್ಳಿ ಎಸ್ಟೇಟ್ನಲ್ಲಿ ಸಂಸಾರದೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದ ಕನಕನಾಯ್ಕ ರವರ ಮಗಳು ಪ್ರಿಯಾಂಕ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರಿಯಾಂಕ ರವರ ತಂದೆ ಶ್ರೀ ಕನಕನಾಯ್ಕ ರವರು ದಿನಾಂಕ: 22-03-2018 ರಂದು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಪ್ರಿಯಾಂಕ ಬಿನ್ ಕನಕನಾಯ್ಕ, 19 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಅರೇಹಳ್ಳಿ ಠಾಣೆ ಫೋನ್ ನಂ. 08177-221342 ಕ್ಕೆ ಸಂಪರ್ಕಿಸುವುದು.
ಬೈಕಿನಿಂದ ಬಿದ್ದು  ಒಬ್ಬರ ಸಾವು, ಒಬ್ಬರಿಗೆ  ಗಾಯ

ದಿನಾಂಕ: 17-03-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಗಾಣಿಗರಹೊಸಳ್ಳಿ ಗ್ರಾಮದ ರಾಜಯ್ಯರವರ ಮಗ ರವಿ ಹಾಗೂ ಮೊಮ್ಮಗ ವಿಶ್ವಾಸ್ ರವರೊಂದಿಗೆ ಕೆಎ-43-ಡಬ್ಲ್ಯೂ-8527  ಬೈಕಿನಲ್ಲಿ ರವಿರವರು ಬೈಕನ್ನು ಹಾಸನ ಹೊಳೇನರಸೀಪುರ ರಸ್ತೆ ಗೋಗೋ ಫ್ಯಾಕ್ಟರಿ  ಹತ್ತಿರ ಚಾಲನೆ ಮಾಡಿಕೊಂಡು ಬರುವಾಗ ಬೈಕ್ ಸ್ಕಿಡ್ ಆಗಿ ಅಪಘಾತವಾಗಿದ್ದು ರವಿ ಹಾಗೂ ವಿಶ್ವಾಸ್ ರವರಿಗೆ  ತಲೆ ಹಾಗೂ ಮೈಕೈಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ  ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ರವಿರವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದುಪರೀಕ್ಷಿಸಿದ ವೈದ್ಯರು ವಾಪಸ್ ಹಾಸನಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು  ವಾಪಸ್  ಹಾಸನಕ್ಕೆ ಕರೆದುಕೊಂಡು ಬಂದು ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ದಿನಾಂಕ:22-03-2018 ರಂದು  ಬೆಳಿಗ್ಗೆ 07-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆಂದು ಶ್ರೀ ರಾಜಯ್ಯ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: