* * * * * * HASSAN DISTRICT POLICE

Tuesday, March 20, 2018

PRESS NOTE : 20-03-2018


ಪತ್ರಿಕಾ ಪ್ರಕಟಣೆ        ದಿನಾಂಕ: 20-03-2018

ಹಾಸನ ತಾಲ್ಲೂಕಿ ಗಾಡೇನಹಳ್ಳಿ ಗ್ರಾಮದಲ್ಲಿ ಮತ್ತು ಬೇಲೂರು ತಾಲ್ಲೂಕಿನ ಮಧಘಟ್ಟ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ ಸುಮಾರು 2,826/- ಬೆಲೆಯ ಮದ್ಯ ವಶ:
ಪ್ರಕರಣ-01 : ದಿನಾಂಕ: 19-03-2018 ರಂದು ಮಧ್ಯಾಹ್ನ 1-45 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ದುದ್ದ ಹೋಬಳಿ, ಗಾಡೇನಹಳ್ಳಿ  ಗ್ರಾಮದ ವಾಸಿ ಶ್ರೀ ಚಿನ್ನಪ್ಪ ಮಾಸ್ಟರ್, ರವರ ಬಾಬ್ತು ಅಂಗಡಿ ಮಳಿಗೆಗಳ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಬೋಜಪ್ಪ, ಪಿಎಸ್ಐ, ದುದ್ದ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಹ್ಯಾರೀಸ್ @ಹಾರಿ@ ಜೋರೋಂ ಬಿನ್ ಮಿಕೆಲಪ್ಪ, ಗಾಡೇನಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,632/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 : ದಿನಾಂಕ: 19-03-2018 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಮದಘಟ್ಟ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಬಲಭಾಗದಲ್ಲಿ ಯಾರೋ ಒಬ್ಬ ವ್ಯಕ್ತಿ ಒಂದು ಬ್ಯಾಗ್ನಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಸಿದ್ದರಾಜು, ಪಿಎಸ್ಐ, ಅರೇಹಳ್ಳಿ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರವಿ ಬಿನ್ ಮಂಜಪ್ಪ, 27 ವರ್ಷ, ಮದಘಟ್ಟ ಗ್ರಾಮ, ಬಿಕ್ಕೋಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು 1,194/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಆಟೋ ಪಲ್ಟಿ ಆಟೋದಲ್ಲಿದ್ದ ಒಬ್ಬರ ಸಾವು, ಇಬ್ಬರಿಗೆ ಗಾಯ
      ದಿನಾಂಕ: 19-03-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಶಿವಾಲದಹಳ್ಳಿ ಗ್ರಾಮದ ಪರ್ವತೇಗೌಡ ರವರು ಸಂಬಂಧಿಕರಾದ ರಾಮೇಗೌಡ, ಹೇಮಚಂದ್ರ ರವರೊಂದಿಗೆ ಕೆಎ-13-ಬಿ-9410 ರ ಆಟೋದಲ್ಲಿ ಜಾವಗಲ್ನಿಂದ ಕಾಳನಕೊಪ್ಪಲಿಗೆ ಹೋಗಲು ಜಾವಗಲ್ನ ವಿಟಿಎಸ್ ನಾಗರಾಜು ರವರ ಜಮೀನಿನ ನೇರದಲ್ಲಿ ಹೋಗುತ್ತಿದ್ದಾಗ ಆಟೋಚಾಲಕ  ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ತಿರುವಿನಲ್ಲಿ ಆಟೋವನ್ನು ಪಲ್ಟಿ ಮಾಡಿದ್ದರಿಂದ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಜಾವಗಲ್ ಅಸ್ಪತ್ರೆಗೆ ಸೇರಿಸಿದ್ದು,  ಪರೀಕ್ಷಿಸಿದ ವೈದ್ಯರು ಪರ್ವತೇಗೌಡ, 55 ವರ್ಷ ರವರು ಮೃತಪಟ್ಟಿದ್ದು, ರಾಮೇಗೌಡ ಮತ್ತು ಹೇಮಚಂದ್ರ ರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆಂದು ಶ್ರೀ ರಾಮೇಗೌಡ ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ತಾಯಿ ಮಕ್ಕಳೊಂದಿಗೆ ಕಾಣೆ
     ದಿನಾಂಕ: 08-01-2018 ರಂದು ಬೆಳಿಗ್ಗೆ 9-00 ಗಂಟೆಗೆ ಆಲೂರು ತಾಲ್ಲೂಕು, ಕೆ.ಹೆಚ್.ಕೋಟೆ ಹೋಬಳಿ, ಮಗ್ಗೆ ಜಯಂತಿ ನಗರದ ವಾಸಿ ಶ್ರೀ ಮಹಾದೇವ, ರವರ ಪತ್ನಿ ಶ್ರೀಮತಿ ಸ್ಮಿತಾ @ ಶಬಾನಾ, ರವರು ಮಕ್ಕಳಾದ ಕು|| ಪ್ರವೀಣ್ಕುಮಾರ್ ಕು|| ಪೂರ್ಣಿಮ, ರವರು ಆಲೂರು ತಾಲ್ಲೂಕು, ವೈ.ಎನ್. ಪುರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶ್ರೀಮತಿ ಸ್ಮಿತಾ @ ಶಬಾನಾ, ರವರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಮಕ್ಕಳನ್ನು ಕರೆದುಕೊಂಡು ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.  ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುತ್ತಾರೆ. ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸ್ಮಿತಾ @ ಶಬಾನಾಳ ಪತಿ ಶ್ರೀ ಮಹಾದೇವ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:  ಶ್ರೀಮತಿ ಸ್ಮಿತಾ @ ಶಬಾನಾ ಕೋಂ ಮಹಾದೇವ, 27 ವರ್ಷ 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಕಾಣೆಯಾದ ಮಕ್ಕಳ ಚಹರೆ: ಕು||ಪ್ರವೀಣ್ಕುಮಾರ್ ಬಿನ್ ಮಹಾದೇವ, 9 ವರ್ಷ, ಕು|| ಪೂಣರ್ಿಮ ಬಿನ್ ಮಹಾದೇವ, 7 ವರ್ಷ, ಈ ಇವರುಗಳ ಸುಳಿವು ಸಿಕ್ಕಲ್ಲಿ 08170-218231 ಕ್ಕೆ ಸಂಪರ್ಕಿಸುವುದು.

No comments: