* * * * * * HASSAN DISTRICT POLICE

Saturday, March 17, 2018

PRESS NOTE : 15-03-2018


ಪತ್ರಿಕಾ ಪ್ರಕಟಣೆ            ದಿನಾಂಕ: 15-03-2018.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂದಿತನಿಂದ ಸುಮಾರು 1,768/- ಬೆಲೆಯ ಮದ್ಯ ವಶ:
             ದಿನಾಂಕ: 14-03-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೊಡು ಹೋಬಳಿ, ಉದಯವಾರ ಗ್ರಾಮದ ಹತ್ತಿರ ಯಾರೋ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಜಗದೀಶ್, ಪಿಎಸ್ಐ, ಸಕಲೇಶಪುರ ನಗರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  ರಮೇಶ್ ಬಿನ್ ದೇವಿರಪ್ಪ, 45 ವರ್ಷ, ಉದೇಯವಾರ ಗ್ರಾಮ, ಬೆಳಗೋಡು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,768/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಗಂಡಸು ಕಾಣೆ

         ದಿನಾಂಕ: 14-03-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಬೆಂಗಳೂರಿನ ಸುಂಕದಕಟ್ಟೆ ವಾಸಿ ಶ್ರೀ ಕುಮಾರ್, ರವರು ಹಾಸನ ತಾಲ್ಲೂಕು, ಬಿಟ್ಟಗೌಡನಹಳ್ಳಿ ಗ್ರಾಮದ ಅತ್ತಿಗೆ ಶ್ರೀಮತಿ ಲತಾ, ರವರ ಮನೆಗೆ ಬಂದಿದ್ದು, ಬೆಂಗಳೂರಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಕುಮಾರ್, ರವರ ಪತ್ನಿ ಅಕ್ಕ ಶ್ರೀಮತಿ ಲತಾ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಕುಮಾರ  ಬಿನ್ ದೇವೇಗೌಡ, 32 ವರ್ಷ, ಫೈನಾನ್ಸ್ ಕೆಲಸ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ನೀಲಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333  ಕ್ಕೆ ಸಂಪರ್ಕಿಸುವುದು.

No comments: