* * * * * * HASSAN DISTRICT POLICE

Saturday, March 17, 2018

PRESS NOTE : 14-03-2018


ಪತ್ರಿಕಾ ಪ್ರಕಟಣೆ             ದಿನಾಂಕ: 14-03-2018

ಜೂಜಾಡುತ್ತಿದ್ದವರ ನಾಲ್ವರ ಬಂಧನ, ಬಂಧಿತರಿಂದ ಸುಮಾರು 500/- ನಗದು ವಶ:

     ದಿನಾಂಕ: 13-03-2018 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಆಲೂರು ಠಾಣಾ ವ್ಯಾಪ್ತಿಯ ಪಾಳ್ಯ ಹೋಬಳಿ, ಕಾಮತಿ ಗ್ರಾಮದಲ್ಲಿ ವೈನ್ ಸ್ಟೋರ್ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಶ್ರೀ ಜಿ.ಸಿ. ರಮೇಶ್, ಎಎಸ್ಐ, ಆಲೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಚಂದ್ರೇಶ್   ಬಿನ್ ಮಲ್ಲೇಶ್, 28 ವರ್ಷ, ಹುಣಸೆ ಗ್ರಾಮ, ಆಲೂರು ತಾಲ್ಲೂಕು 2) ಕುಮಾರ ಬಿನ್ ಲೇಟ್ ರಾಜೇಗೌಡ, 43 ವರ್ಷ, ಹುಣಸೆ ಗ್ರಾಮ, ಆಲೂರು ತಾಲ್ಲೂಕು 3) ಕುಮಾರ  ಬಿನ್ ವೆಂಕಟರಾಮು, 42 ವರ್ಷ, ಇರುವಾಟೆ ಕೂಡಿಗೆ,   ಆಲೂರು ತಾಲ್ಲೂಕು 4) ಧರ್ಮಯ್ಯ ಬಿನ್ ಕೆಂಪಯ್ಯ, 35 ವರ್ಷ, ಕೆಸಗೋಡು ಬಾರೆ, ಆಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 500/-ನಗದನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ,

No comments: