* * * * * * HASSAN DISTRICT POLICE

Tuesday, March 13, 2018

PRESS NOTE : 13-03-2018


ಪತ್ರಿಕಾ ಪ್ರಕಟಣೆ             ದಿನಾಂಕ: 13-03-2018

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 1,124/- ನಗದು ವಶ:
ದಿನಾಂಕ: 13-03-2018 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಗ್ರಾಮದ ಜನತಾಹೌಸ್ ವಾಸಿ ಶ್ರೀ ಲೋಕೇಶ್, ರವರ ವಾಸದ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಬಿ.ಸಿ. ಜಗದೀಶ್, ಪಿಎಸ್ಐ, ಹಿರೀಸಾವೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಲೋಕೇಶ್ ಬಿನ್ ಕಾಳಯ್ಯ, 40 ವರ್ಷ, ಜನತಾ ಹೌಸ್, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,124/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಕಾರು ಬೈಕ್ಗೆ  ಡಿಕ್ಕಿ, ಬೈಕ್ ಸಾವರ ಸಾವು
ದಿನಾಂಕ: 12-03-2018 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಾಮಡಿಹಳ್ಳಿ ಗೇಟ್ ವಾಸಿ ಶ್ರೀ ಮಧು, ರವರ ಬಾಬ್ತು ಕೆಎ-05 ಇಸಿ-369 ರ ಬೈಕ್ನಲ್ಲಿ ಚನ್ನರಾಯಪಟ್ಟಣ ಟೌನ್, ಎನ್ಹೆಚ್-75 ರಸ್ತೆಯಲ್ಲಿ ಮಂಜು ಮೋಟಾರ್ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಮಧು, ರವರು ಬೈಕ್ ಸಮೇತ ಬಿದ್ದಾಗ ಬೈಕ್ ಜಖಂಗೊಂಡು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಮಧು ಬಿನ್ ರಾಜಣ್ಣ @ ರಂಗೇಗೌಡ, ವರ್ಷ, ಚಾಮಡಿಹಳ್ಳಿ ಗೇಟ್, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ರಾಜಣ್ಣ @ ರಂಗೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜೂಜಾಡುತ್ತಿದ್ದ 10 ಜನರ ಬಂಧನ, ಬಂಧಿತನಿಂದ ಸುಮಾರು 6750/-ನಗದು ವಶ

     ದಿನಾಂಕ: 12-03-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಹಾಸನದ ಬೂವನಹಳ್ಳಿ-ಸಂಕೇನಹಳ್ಳಿ ಹತ್ತಿರ ಬಾಲಕೃಷ್ಣ, ರವರ ಜಮೀನ ಹತ್ತಿರ ಸಾರ್ವಜನಿಕರ ರಸ್ತೆಯಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ಕೆ.ಎನ್. ಹರೀಶ್, ಪಿಎಸ್ಐ, ಹಾಸನ ಬಡಾವಣೆ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ದೇವೇಗೌಡ, 48 ವರ್ಷ, 2) ಪಾಪಣ್ಣ ಬಿನ್ ನಂಜಶೆಟ್ಟಿ, 54 ವರ್ಷ, ಬೂ 3) ಶ್ರೀ ಕಂಠ ಬಿನ್ ಪುಟ್ಟಸ್ವಾಮಿಗೌಡ, 53 ವರ್ಷ, 4) ಪ್ರಕಾಶ್ ಬಿನ್ ಚನ್ನೇಗೌಡ, 25 ವರ್ಷ 5) ಶಿವರಾಜ ಬಿನ್ ಪ್ರಕಾಶ್, 30 ವರ್ಷ 6) ಅಪ್ಪಣಗೌಡ ಬಿನ್ ಈರಪ್ಪ, 78 ವರ್ಷ 7) ಕೃಷ್ಣ ಬಿನ್ ಕರೀಗೌಡ, 54 ವರ್ಷ 8) ವೆಂಕಟೇಶ್ ಬಿನ್ ತಿಮ್ಮೇಗೌಡ, 44 ವರ್ಷ 9) ನಾಗರಾಜ ಬಿನ್ ಪುಟ್ಟಸೌಮಿ, 43 ವರ್ಷ 10) ಯೋಗೇಶ್ ಬಿನ್ ರಾಜೇಗೌಡ, 35 ವರ್ಷ, ಎಲ್ಲರೂ ಬೂವನಹಳ್ಳಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕಟ್ಟಿದ್ದ ಸುಮಾರು 6750/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹುಡುಗಿ ಕಾಣೆ
ದಿನಾಂಕ: 07-02-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿಹೋಬಳಿ, ಚಿಕ್ಕದೇವರಹಳ್ಳಿ ಗ್ರಾಮದ ವಾಸಿ ಶ್ರೀ ಮೆಳಿಯಯ್ಯ, ರವರ ಮಗಳು ಕು|| ಎಂ. ಲಿಲಿತ@ ವಿನೋದ, ಅದೇ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಲಿಲಿತಾ@ ವಿನೋಧಳ ತಂದೆ  ಶ್ರೀ ಮೆಳಿಯಯ್ಯ, ರವರು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ:      ಕು|| ಎಂ. ಲಿಲಿತ@ ವಿನೋದ ಬಿನ್ ಮೆಳಿಯಯ್ಯ, 28 ವರ್ಷ, ಅಂಗನವಾಡಿ ಶಿಕ್ಷಕಿ, 5' ಅಡಿ ಎತ್ತರ, ದುಂಡುಮುಖ, ಕೆಂಪುಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ  ನೀಲಿ ಮಿಶ್ರಿತ ರವಿಕೆ ಮತ್ತು ಹಳದಿ ಬಣ್ಣದ ಸೀರೆ ಧರಿಸಿರುತ್ತಾರೆ, ಈ ಹೆಂಗಸಿನ ಸುಳಿವು ಸಿಕ್ಕಲ್ಲಿ  08176-254933 ಕ್ಕೆ ಸಂಪರ್ಕಿಸುವುದು.

No comments: