* * * * * * HASSAN DISTRICT POLICE

Tuesday, March 13, 2018

PRESS NOTE : 11-03-2018


                              ಪತ್ರಿಕಾ ಪ್ರಕಟಣೆ             ದಿನಾಂಕ: 11-03-2018

ಕಾರಿನ ನಿಯಂತ್ರಣ ತಪ್ಪಿ ಕಬ್ಬಿಣದ ಕಂಬಕ್ಕೆ ಡಿಕ್ಕಿ, ಕಾರು ಚಾಲಕ ಸಾವು:

     ದಿನಾಂಕ: 11-03-2018 ರಂದು ಬೆಳಗಿನ ಜಾವ 2-30 ಗಂಟೆ ಸಮಯದಲ್ಲಿ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಸೋಲೂರು ಹೋಬಳಿ, ಬೈಚಾಪುರ ಗ್ರಾಮದ ವಾಸಿ ಶ್ರೀ ಸೂರ್ಯಕುಮಾರ್, ರವರ ಬಾಬ್ತು ಕೆಎ-52 ಎಂ-4434 ರ ಮಾರುತಿ ಕಾರಿನಲ್ಲಿ  ಸ್ನೇಹಿತರಾದ ಶ್ರೀ ರಾಹುಲ್ ಮತ್ತು ಶ್ರೀಮತಿ ದಿವ್ಯ, ರವರೊಂದಿಗೆ ಧರ್ಮಸ್ಥಳಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75, ಬಿ.ಎಂ. ರಸ್ತೆ, ಮಟ್ಟನವಿಲೆ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕಬ್ಬಿಣದ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸೂರ್ಯಕುಮಾರ್ ಬಿನ್ ಗೋವಿಂದಯ್ಯ, 26 ವರ್ಷ, ಬೈಚಾಪುರ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಶ್ರೀ ಸುರೇಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ನ ನಿಯಂತ್ರಣ ತಪ್ಪಿ, ಬೈಕ್ ಸಾವರ ಸಾವು.
ದಿನಾಂಕ: 10-03-2018 ರಂದು ರಾತ್ರಿ 12-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಕಲ್ಲುಸಾದರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ವಾಸಿ ಶ್ರೀ ಯೋಗೇಶ್, ರವರ ಬಾಬ್ತು ಕೆಎ-13 ಇಹೆಚ್-4712ರ ಬೈಕ್ನಲ್ಲಿ ತೋಟಕ್ಕೆ ನೀರು ಹಾಯಿಸಿ ವಾಪಸ್ ಮನೆಗೆ ಹೋಗಲು ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಶಿವಮೂರ್ತಿ ಇಟ್ಟಿಗೆ ಫ್ಯಾಕ್ಟರಿ ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ತೆಂಗಿನ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಯೋಗೇಶ್ ಬಿನ್ ಕೃಷ್ಣಮೂರ್ತಿ, 35ವರ್ಷ, ಕಲ್ಲುಸಾದರಹಳ್ಳಿ ಗೊಲ್ಲರಹಟ್ಟಿ ಗ್ರಾಮ, ಕಣಕಟ್ಟೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ ತಂದೆ ಶ್ರೀ ಕೃಷ್ಣಮೂರ್ತಿ, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 2,200/- ಬೆಲೆಯ ಮದ್ಯ ವಶ:
     ದಿನಾಂಕ: 10-03-2018 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ರಾಂಜಿಹಳ್ಳಿ ಗ್ರಾಮದ ವಾಸಿ ಶ್ರೀ ರವಿ, ಮನೆಯ ಮುಂದೆ ಗೇಟ್ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಶಬ್ಬೀರ್ ಹುಸೇನ್, ಪಿಎಸ್ಐ, ಗಂಡಸಿ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರವಿ ಬಿನ್ ಹುಚ್ಚೇಗೌಡ, 35 ವರ್ಷ, ರಾಂಜಿಹಳ್ಳಿ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 2,200/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹುಡುಗಿ ಕಾಣೆ
ದಿನಾಂಕ: 09-03-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಬ್ಯಾಡರಹಳ್ಳಿ ಗ್ರಾಮದ ವಾಸಿ ಶ್ರೀ ಬಿ.ಹೆಚ್. ಹರೀಶೇಖರ, ರವರ ಮಗಳು ಕು|| ಬಿ.ಹೆಚ್. ದಿವ್ಯ @ ರಾಣಿ, ಚನ್ನರಾಯಪಟ್ಟಣದಲ್ಲಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಪತ್ತೆಮಾಡಿಕೊಡಬೇಕೆಂದು ಕು|| ಬಿ.ಹೆಚ್. ದಿವ್ಯ @ ರಾಣಿಯ ತಂದೆ ಶ್ರೀ ಹರಿಶೇಖರನ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಬಿ.ಹೆಚ್. ದಿವ್ಯ @ ರಾಣಿ ಬಿನ್ ಹರಿಶೇಖರನ್, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-254933 ಕ್ಕೆ ಸಂಪರ್ಕಿಸುವುದು.

No comments: